ಇವರಿಗೆ ಬಹುಪರಾಕ್ ಅಂತಿದ್ದಾರೆ ಸಾರ್ವಜನಿಕರು ! ಬಸ್ ನಿಲ್ದಾಣಕ್ಕೆ ತೆರಳಿ ಲೋಕಾಯುಕ್ತ ಅಧಿಕಾರಿಗಳು ಮಾಡಿದ್ದೇನು ನೋಡಿ?

ಅಂಕೋಲಾ: ಅವ್ಯವಸ್ಥೆಯ ತಾಣ ಈ ಹೈಟೆಕ್ ಬಸ್ ನಿಲ್ದಾಣ ಎನ್ನುವ ಕುರಿತು,ವಿಸ್ಮಯ ವಾಹಿನಿ, ಸಾರ್ವಜನಿಕ ಹಿತಾಸಕ್ತಿಯಿಂದ ವಿಸ್ತೃತ ವರದಿ ಪ್ರಕಟಿಸಿ, ಸಮಸ್ಯೆ ನಿವಾರಣೆಗೆ ಅಧಿಕಾರಿಗಳ ಗಮನ ಸೆಳೆಯುವ ಯತ್ನ ಮಾಡಿದ್ದ ಬೆನ್ನಿಗೇ ಕುಮಟಾ ಎಸಿ ಕಲ್ಯಾಣಿ ಕಾಂಬ್ಳೆ ಬಸ್ ನಿಲ್ದಾಣಕ್ಕೆ ಹಠಾತ್ ಭೇಟಿ ನೀಡಿ,ಇಲ್ಲಿನ ಅಶುಚಿತ್ವ ಮತ್ತು ಪ್ರಯಾಣಿಕರಿಗಾಗುತ್ತಿರುವ ತೊಂದರೆ ಗಮನಿಸಿ,ಸಂಬoಧಿತ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ , ಕೂಡಲೇ ಕಸ ತ್ಯಾಜ್ಯ ವಿಲೇವಾರಿ ಮತ್ತಿತರ ಕೆಲ ತುರ್ತು ಕ್ರಮ ಕೈಗೊಳ್ಳುವಂತೆ ಖಡಕ್ ವಾರ್ನಿಂಗ್ ನೀಡಿ ತೆರಳಿದ್ದರು. ಆದರೂ ಅದೇಕೋ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಕೊಂಚ ನಿರ್ಲಕ್ಷ್ಯ ಮುಂದುವರಿಸಿದoತಿತ್ತು ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದoತೆ ಇತ್ತು.

ಇದನ್ನೂ ಓದಿ: ಉದ್ಯೋಗಾವಕಾಶ: 1 ಲಕ್ಷದ ವರೆಗೆ ವೇತನ: SSLC, ಡಿಪ್ಲೋಮಾ, ಪದವಿ ಆದವರು ಅರ್ಜಿ ಸಲ್ಲಿಸಿ

ಸಾರ್ವಜನಿಕ ಕಳಕಳಿಯಿಂದ ಅಂದು ಧ್ವನಿ ಎತ್ತಿದ್ದ ವಕೀಲ ಉಮೇಶ ನಾಯ್ಕ,ಮತ್ತೊಮ್ಮೆ ಲೋಕಾಯುಕ್ತರ ಬಳಿಯೂ ಇದೇ ವಿಷಯ ಪ್ರಸ್ತಾಪಿಸಿ ಅವ್ಯವಸ್ಥೆಯ ಕುರಿತು ದೂರು ನೀಡಿದರು.ಪರಿಸ್ಥಿತಿಯನ್ನು ಕಣ್ಣಾರೆ ಕಂಡ ಲೋಕಾಯುಕ್ತ ಎಸ್ ಪಿ ವಿನಾಯಕ್ ಬಿಲ್ಲವ ಮತ್ತು ತಂಡದವರು, ಸ್ಥಳ ಪರಿಶೀಲಿಸಿ,ಕೆಲ ಅಧಿಕಾರಿಗಳ ಮತ್ತು ಬಸ್ ನಿಲ್ದಾಣದ ಕ್ಯಾಂಟೀನ್ ಮಾಲಕರ ಹೇಳಿಕೆ ಪಡೆದುಕೊಂಡರು. ಬಸ್ ಡಿಪೋ ಮ್ಯಾನೇಜರ್ ರನ್ನು ಸಹ ಸ್ಥಳಕ್ಕೆ ಕರೆಸಿಕೊಂಡರು.

ಬಸ್ ನಿಲ್ದಾಣದ ಆವರಣದಲ್ಲಿ ಪ್ಲಾಸ್ಟಿಕ್ ಮತ್ತಿತರ ಕಸ ತ್ಯಾಜ್ಯ ಬೆಂಕಿ ಹಾಕಿ ಸುಟ್ಟಿರುವುದಕ್ಕೆ,ಶೌಚ ಗುಂಡಿ ಇಂದ ಮಲಿನ ನೀರು ಹೊರ ಚೆಲ್ಲುತ್ತಿರುವುದಕ್ಕೆ,ದಿನನಿತ್ಯ ಸಾವಿರಾರು ಪ್ರಯಾಣಿಕರು ಮತ್ತಿತರರು ಬಂದು ಹೋಗುವ ಸಾರ್ವಜನಿಕ ಸ್ಥಳದಲ್ಲಿ , ಈ ವರೆಗೂ ಸಿ.ಸಿ ಕ್ಯಾಮೆರಾ ಅಳವಡಿಸದಿರುವ ಕುರಿತು ವಿಚಾರಿಸಿದರು.ಕೆಲ ಪ್ರಶ್ನೆಗಳಿಗೆ ಹಾರಿಕೆ ಉತ್ತರ ನೀಡಿದ ಸಂಬoಧಿತ ಅಧಿಕಾರಿಗಳು,ಮತ್ತೆ ಕೆಲ ಪ್ರಶ್ನೆಗಳಿಗೆ ನಿರುತ್ತರರಾದರು.

ಬಸ್ ನಿಲ್ದಾಣದ ಅಶುಚಿತ್ವದ ವಾತಾವರಣದಿಂದ ಅಕ್ಕ ಪಕ್ಕದವರ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು . ಸಾರ್ವಜನಿಕರ ಆರೋಗ್ಯ ಮತ್ತು ಸ್ವಚ್ಛತೆಯ ನಿರ್ಲಕ್ಷ ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಸೂಚಿಸಿ ಸಂಬoಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲು ಲೋಕಾಯುಕ್ತ ಅಧಿಕಾರಿಗಳು ಕ್ರಮ ಮುಂದುವರಿಸಿದoತಿದೆ.ಲೋಕಾಯುಕ್ತರoದರೆ ದೂರು ಬಂದಾಗ ಇಲ್ಲವೇ ಭ್ರಷ್ಟ ಅಧಿಕಾರಿಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುವವರೆಂಬ ಜನಸಾಮಾನ್ಯರ ಭಾವನೆ ಬದಲಾಗುತ್ತಿದ್ದು,ಸ್ವಚ್ಛತೆ ಮತ್ತಿತರ ವಿಷಯಗಳಲ್ಲಿ ಲೋಕಾಯುಕ್ತರ ಪಾತ್ರ ಮಹತ್ವದ್ದಾಗಿದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಈ ಹಿಂದೆಯೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬೇಕಾ ಬಿಟ್ಟಿಯಾಗಿ ಸುಟ್ಟಿದ್ದ ಪ್ರತ್ಯೇಕ ಬೇರೇಡೆಯ ಸುದ್ದಿ ಒಂದಕ್ಕೆ ತಕ್ಷಣವೇ ಸ್ಪಂದಿಸಿದ್ದ ಲೋಕಾಯುಕ್ತ ಅಧಿಕಾರಿಗಳು,ಸುಮಟೊ ಪ್ರಕರಣ ದಾಖಲಿಸಿ ತಮ್ಮ ಜನಪರ ಹಾಗೂ ಪರಿಸರ ಕಾಳಜಿಯ ಜವಾಬ್ದಾರಿ ತೋರಿದನ್ನು ಸ್ಮರಿಸಬಹುದಾಗಿದೆ. ಅಂಕೋಲಾ ಬಸ್ ನಿಲ್ದಾಣಕ್ಕೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದ ನಂತರವಾದರೂ,ಸoಬoಧಿತ ಇಲಾಖೆ ಎಚ್ಚೆತ್ತುಕೊಂಡು ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆನ್ನುವುದು ಪ್ರಜ್ಞಾವಂತ ಜನತೆಯ ಆಗ್ರಹವಾಗಿದೆ.

ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲಾ

Exit mobile version