Important
Trending

ಕಾಲೇಜಿಗೆ ಹೋಗಿ ಬರುತ್ತೇನೆಂದು ಹೋದ ವಿದ್ಯಾರ್ಥಿನಿ ನಾಪತ್ತೆ: ಪೋಷಕರ ದೂರಿನಲ್ಲೇನಿದೆ?

ಅಂಕೋಲಾ: ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಮನೆ ಮಗಳು ಬಹು ಹೊತ್ತಾದರೂ ಮನೆಗೆ ಮರಳದಿರುವುದರಿಂದ ಆತಂಕಗೊಂಡ ಪಾಲಕರು, ತಮ್ಮ ಮನೆ ಮಗಳು ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ ಇಲ್ಲವೇ ಯಾರೋ ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿ, ತನ್ನ ಮಗಳನ್ನು ಹುಡುಕಿಕೊಡುವಂತೆ ಪೋಲೀಸ್ ದೂರಿನಲ್ಲಿ ವಿನಂತಿಸಿದ್ದಾರೆ.

ಶ್ವೇತಾ ಮಾರುತಿ ನಾಯ್ಕ , ಕುಮಟಾದ ನೆಲ್ಲಿಕೇರಿ ಕಾಲೇಜ್ ಒಂದರ ವಿದ್ಯಾರ್ಥಿನಿಯಾಗಿದ್ದು, ದಿನಾಂಕ 07-11 – 2023 ರಂದು ಬೆಳಿಗ್ಗೆ 11 ಗಂಟೆಗೆ, ಅಂಕೋಲಾ ತಾಲೂಕಿನ ಬೊಬ್ರವಾಡದ ತನ್ನ ಮನೆಯಿಂದ ಕುಮಟಾದ ನೆಲ್ಲಿಕೇರಿಯ ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು, ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ, ಅಥವಾ ಅವಳನ್ನು ಯಾರಾದರೂ ಅಪಹರಿಸಿಕೊಂಡು ಹೋಗಿರಬಹುದು. ಕಾರಣ ತನ್ನ ಮಗಳನ್ನು ಹುಡುಕಿ ಪತ್ತೆ ಮಾಡಿಕೊಡಿ ಎಂದು, ನೊಂದ ತಂದೆ ಬಬ್ರುವಾಡಾದ ಮಾರುತಿ ಗುಣವಂತ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ.

ಪ್ರಕರಣವನ್ನು ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಂದಾಜು 5 ಪೂಟ್ 1 ಇಂಚು ಎತ್ತರ, ಗೋಧಿ ಮೈ ಬಣ್ಣ, ದುಂಡನೆಯ ಮುಖ, ಸಾಧಾರಣ ಮೈಕಟ್ಟು,ಕನ್ನಡ ಭಾಷೆ ಅರಿತಿರುವ, ಇವಳು ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಟಾಪ್, ಕಪ್ಪು ಬಣ್ಣದ ಲೆಗ್ಗಿನ್ಸ್, ಗುಲಾಬಿ ಬಣ್ಣದ ಶೂ ಧರಿಸಿದ್ದು,ಈ ಮೇಲಿನ ಚಹರೆಯುಳ್ಳ ಶ್ವೇತಾ, ಎಲ್ಲಿಯಾದರೂ ಕಂಡು ಬಂದಲ್ಲಿ,ಅಥವಾ ಈ ಕುರಿತು ಏನಾದರೂ ಮಾಹಿತಿ ಇದ್ದಲ್ಲಿ ಅಂಕೋಲಾ ಪೊಲೀಸ್ ಠಾಣೆ (9480805250/9480805268) ಇಲ್ಲವೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಲು ಅಂಕೋಲಾ ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಹದಿ-ಹರೆಯದ ಮಕ್ಕಳು ನಾನಾ ಕಾರಣಗಳಿಂದ ಮನೆ ಬಿಟ್ಟು ತೆರಳುವುದು,ಕಾಣೆಯಾಗುತ್ತಿರುವುದು ಹೆಚ್ಚುತ್ತಿದ್ದು, ಇದು ತಾಲೂಕಿನ ಮಟ್ಟಿಗೆ ಕಳವಳಕಾರಿ ಸಂಗತಿಯಾಗಿದೆ. ಈ ಕುರಿತು ಸಂಬಂಧಿಸಿದ ಪಾಲಕರು, ಶಾಲಾ ಕಾಲೇಜು ಮುಖ್ಯಸ್ಥರು,ಸಂಘ ಸಂಸ್ಥೆಗಳು ಮತ್ತು ಪೋಲೀಸ್ ಮತ್ತಿತರ ಸಂಬಂಧಿತ ಇಲಾಖೆಗಳು ಹದಿ-ಹರೆಯದವರಿಗೆ ನೀತಿ ಶಿಕ್ಷಣ ಮತ್ತು ತಿಳುವಳಿಕೆ ನೀಡಿ, ಜೀವನದ ಸವಾಲು ಎದುರಿಸುವ ಆತ್ಮ ಸೈರ್ಯ ತುಂಬ ಬೇಕೆನ್ನುವ ಮಾತು ವಕೀಲರೊಬ್ಬರಿಂದ ಕೇಳಿ ಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button