Focus News
Trending

ಸೆಪ್ಟೆಂಬರ್ 27ರ ಭಾರತ ಬಂದ್ ಯಶಸ್ವಿಗೊಳಿಸಲು ಕರೆ: ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಸುದ್ದಿಗೋಷ್ಠಿ

ಅಂಕೋಲಾ : ಸೆಪ್ಟೆಂಬರ್ 27 ರ ಸೋಮವಾರದಂದು ಸಂಯುಕ್ತ ಕಿಸಾನ ಮೋರ್ಚಾ ಭಾರತ್ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ,ನಮ್ಮ ರಾಜ್ಯ ಹಾಗೂ ಜಿಲ್ಲೆಯಲ್ಲಿ ಬಂದ್ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಾಂತಾರಾಮ ನಾಯಕ ಕರೆ ನೀಡಿದ್ದಾರೆ.

ಬುಧವಾರ ಸಂಘಟನೆಯ ಕಾರ್ಯಾಲಯದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರ ಮೂರು ಕೃಷಿ ಕಾಯ್ದೆಗಳನ್ನು ಘೋಷಣೆ ಮಾಡಿದ ಒಂದು ವರ್ಷ ಹಾಗೂ ದೆಹಲಿಯಲ್ಲಿನ ರೈತ ಹೋರಾಟಕ್ಕೆ ಹತ್ತು ತಿಂಗಳು ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಹಲವು ವಿರೋಧಗಳ ನಡುವೆಯೂ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು ಹಾಗೂ ವಿದ್ಯುತ್ ಕಾಯ್ದೆಗಳು ರದ್ದಾಗಬೇಕು ಮತ್ತು ಕೃಷಿ ಉತ್ಪನ್ನಗಳ ಉತ್ಪಾದನೆಯ ವೆಚ್ಚದ ಮೇಲೆ ಶೇ.50 ರಷ್ಟು ಲಾಭವನ್ನು ಖಾತರಿ ಮಾಡುವ ‘ಕನಿಷ್ಟ ಬೆಂಬಲ ಬೆಲೆ ಕಾನೂನು’ ಜಾರಿಗೆ ತರಬೇಕು,

ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್, ಮುಂತಾದ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ, ಭೂಮಿ ಕಸಿದುಕೊಳ್ಳುವ ಭೂ ಮಸೂದೆ ವಿರುದ್ಧ, ಕಾರ್ಮಿಕ ಕಾನೂನು ತಿದ್ದುಪಡಿ ವಿರುದ್ಧ ಇತ್ಯಾದಿ ಬೇಡಿಕೆಗಳಿಗಾಗಿ ಆಗ್ರಹಿಸಿ ಐನೂರಕ್ಕೂ ಹೆಚ್ಚು ರೈತ ಸಂಘಟನೆಗಳನ್ನೊಳಗೊಂಡು ರಚನೆಯಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ (SKM) ಸೆ.27 ಕ್ಕೆ “ಭಾರತ ಬಂದ್ ”ಗೆ ಕರೆ ನೀಡಿದೆ ಹೀಗಾಗಿ ರಾಜ್ಯದ ರೈತರು, ಕಾರ್ಮಿಕರು, ವಿದ್ಯಾರ್ಥಿ ಯುವಜನ, ಮಹಿಳೆಯರು, ಕನ್ನಡ ಪರ ಸಂಘಟನೆಗಳು, ದಲಿತರು, ವರ್ತಕರು ಇತ್ಯಾದಿ ಎಲ್ಲಾ ವರ್ಗದ ಜನರು “ಭಾರತ ಬಂದ್” ನ್ನು ಬೆಂಬಲಿಸಿ “ಕರ್ನಾಟಕ ಬಂದ್” ಮತ್ತು “ಉತ್ತರ ಕನ್ನಡ ಬಂದ್” ಯಶಸ್ವಿಗೊಳಿಸಬೇಕು ಎಂದು ‘ಸಂಯುಕ್ತ ಹೋರಾಟ-ಕರ್ನಾಟಕ’ ‘ಕರ್ನಾಟಕ ಪ್ರಾಂತ ರೈತ ಸಂಘ’, ಸಿಐಟಿಯು, ಕಟ್ಟಡ ಮತ್ತು ಕೂಲಿಕಾರರ ಸಂಘ, ಅಂಗನವಾಡಿ, ಅಕ್ಣರ ದಾಸೋಹ ಸಂಘ ಇತ್ಯಾದಿ ಹಲವು ಸಂಘಟನೆಗಳ ಪರವಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ಗೌರೀಶ ನಾಯಕ, ಕಾರ್ಯದರ್ಶಿ ಸಂತೋಷ ನಾಯ್ಕ, ಖಜಾಂಚಿ ನಾಗೇಶ ಗೌಡ, ಜಿಲ್ಲಾ ಸಮಿತಿ ಸದಸ್ಯ ರಮಾನಂದ ನಾಯಕ ಅಚವೆ, ಸಿಐಟಿಯು ತಾಲೂಕ ಮಹಿಳಾ ಅಧ್ಯಕ್ಷೆ ಮೀನಾಕ್ಷಿ ನಾಯ್ಕ, ರೈ.ಸಂ.ತಾಲೂಕು ಸಮಿತಿ ಸದಸ್ಯ ಉದಯ ನಾಯ್ಕ ಬೆಲೇಕೇರಿ, ಮಹಾದೇವ ಗೌಡ, ಶೋಭಾ ಆಗೇರ ಬೆಲೇಕೇರಿ, ವೆಂಕಟರಮಣ ಗೌಡ, ಗೌರಿ ದಿಗಂಬರ ಆಗೇರ, ಆರತಿ ಅಂಬಿಗ ಮೊಗಟಾ, ಗೀತಾ ಆಗೇರ ಅಲಗೇರಿ ಇನ್ನಿತರರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ನಿಮ್ಮೂರಲ್ಲೂ ಸೂಪರ್ ಸ್ಟೋರ್ ಮಾಡಬೇಕೆ?
ಸ್ಟೋರ್ ಕಿಂಗ್, ಸ್ಮಾರ್ಟ್ ಸೂಪರ್ ಸ್ಟೋರ್: ನಿಮಗೆ ನೀವೆ ಮಾಲೀಕರಾಗಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ತಂತ್ರಜ್ಞಾನ ಚಾಲಿತ ಸೂಪರ್ ಮಾರ್ಕೆಟ್ ನಿರ್ಮಿಸಿ ಹಾಗು ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ. ಸಣ್ಣ ಮಟ್ಟದ ಬಂಡಾವಳ ಹೂಡಿಕೆ ಮಾಡಿ, ನಮ್ಮೊಂದಿಗೆ ಪಾಲುದಾರರಾಗಿ.. ನಿಮ್ಮೂರಲ್ಲೂ ಸೂಪರ್ ಮಾರ್ಕೆಟ್ ನಿರ್ಮಿಸಬೇಕೆಂದಿದ್ದರೆ, ಇದಕ್ಕಿಂತ ಒಳ್ಳೆಯ ಸುವರ್ಣಾವಕಾಶ ಇನ್ನೊಂದಿಲ್ಲ. ತಂತ್ರಜ್ಞಾನ, ಪ್ರಾಡೆಕ್ಟ್, ಲಾಜಿಸ್ಟಿಕ್ಟ್ ನಿಂದ ಹಿಡಿದು ಎಲ್ಲ ರೀತಿಯ ಬೆಂಬಲವನ್ನೂ ನಾವು ನಿಮಗೆ ನೀಡುತ್ತೇವೆ. ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ : 7338463571

Back to top button