ಗಣಪತಿ ಮೂರ್ತಿ ವಿಸರ್ಜನೆ: ಪಂಚವಾದ್ಯ, ಕೇರಳದ ಚಂಡೆಯೊಂದಿಗೆ ಮರವಣಿಗೆ

ಹೊನ್ನಾವರ: ಪಟ್ಟಣದಲ್ಲಿ ವಿವಿಧ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ವಿಜೃಂಭಣೆಯಿoದ ಮೆರವಣಿಗೆ ಮೂಲಕ ಶರಾವತಿ ನದಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಎಳನೇ ದಿನದಂದು ವಿಶ್ವ ಹಿಂದುಪರಿಷತ್ ಪ್ರತಿಷ್ಠಾಪಿಸಿದ ಗಣಪತಿಯನ್ನು ಧಾರ್ಮಿಕ ವಿಧಿ ವಿಧಾನದಂತೆ ವಿಸರ್ಜಿಸಲಾಯಿತು.

ಇನ್ನೂ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯರು ಕೇಸರಿ ಜುಬ್ಬಾವನ್ನು ಧರಿಸಿ, ಕೇಸರಿ ಪೇಟ ತೊಟ್ಟು, ಮೆರವಣಿಗೆಯಲ್ಲಿ ಸಾಗಿದರು. ವಿಶ್ವ ಹಿಂದುಪರಿಷತ್ತಿನಲ್ಲಿ ಪಂಚವಾದ್ಯ, ಕೇರಳದ ಚಂಡೆ ವಾದ್ಯ, ಹುಲಿ ವೇಷ ಗಮನಸೆಳೆದವು., ಮೆರವಣಿಗೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಚಿಕ್ಕ ಮಕ್ಕಳಿಂದ ಹಿಡಿದು ಯುವಕರು, ಯುವತಿಯರು, ಮಹಿಳೆಯರು ಸಹ ಹೆಜ್ಜೆ ಹಾಕಿರುವ ದೃಶ್ಯ ಕಂಡುಬoತು.

ತುಳಸೀನಗರ ಗಣೇಶೋತ್ಸವ, ಜೋಡಿಕಟ್ಟೆ ಗಣೇಶೋತ್ಸವ, ಕೆ.ಇ.ಬಿ, ಸಾರ್ವಜನಿಕ ಗಣೇಶೋತ್ಸವ ಗಣಪತಿಯನ್ನು ಶರಾವತಿ ನದಿಯಲ್ಲಿ ವಿಸರ್ಜಸಿಲಾಯಿತು. ಎಲ್ಲೆಡೆ ಡಿಜೆ ಸೌಂಡ್ ಅಬ್ಬರ ಜೋರಾಗಿತ್ತು. ಪಟ್ಟಣ ಪಂಚಾಯತ ವತಿಯಿಂದ ಗಣಪತಿ ವಿಸರ್ಜನೆಗೆ ಕ್ರೇನ್ ವ್ಯವಸ್ಥೆ ಮತ್ತು ಲೈಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಸೂಕ್ತ ಪೊಲೀಸ್ ಬಿಗಿ ಬಂದೊಬಸ್ತ್ ಕಲ್ಪಿಸಲಾಗಿತ್ತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ದಟ್ಟಣೆಯಾಗಿತ್ತು. ಅದೇ ಸಮಯದಲ್ಲಿ ಬರುತ್ತಿದ್ದ ಆಂಬುಲೆನ್ಸ್ ನ್ನು ಗಣೇಶೋತ್ಸವದ ಮೆರವಣಿಗೆಯನ್ನು ನಿಲ್ಲಿಸಿ ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟಿದ್ದು, ಗಮನಸೆಳೆಯಿತು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Exit mobile version