ಅಂಕೋಲಾ: ಇದು ಹೆಸರಿಗಷ್ಟೇ ರಾಜ್ಯ ಹೆದ್ದಾರಿ,ಎಲ್ಲಿ ನೋಡಿದರೂ ಹೊಂಡ ಗುಂಡಿಗಳು,ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ದುಸ್ಥಿತಿ ಎಂಬ ತಲೆ ಬರಹದಡಿ,ವಿಸ್ಮಯ ವಾಹಿನಿ ವಿಸ್ತೃತ ವರದಿ ಪ್ರಕಟಿಸಿದ ಬೆನ್ನಲ್ಲೇ,ಸಂಬಂಧಿತ ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳು,ಸ್ಥಳ ಪರಿಶೀಲಿಸಿದ್ದಾರೆ.
ಇದೀಗ ಈ ಹೆದ್ದಾರಿಯಲ್ಲಿ ಹೋಂಡ ಗುಂಡಿಗಳನ್ನು ಮುಚ್ಚಿ ಸಮತಟ್ಟುಗೊಳಿಸಲಾಗುತ್ತಿದೆಯಲ್ಲದೇ, ಮುಂಬರುವ 3-4 ತಿಂಗಳಲ್ಲಿ ಇಲ್ಲಿ ಹೊಸ ಸೇತುವೆ ಹಾಗೂ ರಸ್ತೆ ಅಭಿವೃದ್ಧಿಯಾಗುವ ಲಕ್ಷಣಗಳು ಕೇಳಿ ಬಂದಿದೆ ಅಂಕೋಲಾ ತಾಲೂಕಿನಲ್ಲಿ ಹಾದುಹೋಗಿರುವ ಪ್ರಮುಖ ರಾಜ್ಯ ಹೆದ್ದಾರಿ ಗಳಲ್ಲಿ ಒಂದಾಗಿರುವ ಮಂಜಗುಣಿ ಬೆಲೇಕೇರಿ ಮಾರ್ಗ ಮಧ್ಯೆ ,ಪೂಜಗೇರಿ ತೆಂಕಣಕೇರಿ ಗ್ರಾಮಗಳ ಪ್ರದೇಶಗಳಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ,ಸಂಚಾರಿಗಳ ಪಾಲಿಗೆ ನರಕಯಾ ತನೆ ಅನುಭವಿಸುವಂತಾಗಿತ್ತು.
ಅಲ್ಲದೇ ಪೂಜಗೇರಿ ಹಳ್ಳಕ್ಕೆ ಅಡ್ಡಲಾಗಿ ಕಳೆದ 3 -4 ದಶಕಗಳ ಹಿಂದೆ ಕಟ್ಟಿದ್ದ ಕಿರು ಸೇತುವೆ,ಶಿಥಿಲಾವಸ್ಥೆಗೆ ತಲುಪಿತ್ತಿಲ್ಲದೇ,ಸೇತುವೆಯ ಒಂದು ಬದಿಯ ಸುರಕ್ಷತಾ ಗೋಡೆ ಹಾನಿಗೊಂಡು, ಈ ಸೇತುವೆಯ ಮೇಲಿನ ಸಂಚಾರದ ವೇಳೆ ನಾಗರಿಕರು ತಮ್ಮ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ದುಸ್ಥಿತಿ ನಿರ್ಮಾಣವಾದಂತಿದ್ದು, ಈ ಕುರಿತು ವಿಸ್ಮಯ ವಾಹಿನಿ ವಿಸ್ತೃತ ವರದಿ ಪ್ರಕಟಿಸಿ,ಸಂಬಂಧಿತ ಅಧಿಕಾರಿಗಳ ಗಮನ ಸೆಳೆಯುವ ಯತ್ನ ಮಾಡಿತ್ತಿಲ್ಲದೇ,ಸಮಸ್ಯೆ ಪರಿಹಾರಕ್ಕೆ ಇಲಾಖೆ ಮುಂದಾಗದಿದ್ದರೆ,ಸಾರ್ವಜನಿಕರು ಗಾಂಧೀ ಜಯಂತಿಯಂದೇ ಪ್ರತಿಭಟಿಸುವ ಎಚ್ಚರಿಕೆ ನೀಡಿತ್ತು.
ಇದಾದ ಬೆನ್ನಿಗೇ ಲೋಕೋಪಯೋಗಿ ಇಲಾಖೆಯ ಕಾರವಾರ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೆಚ್ ಆರ್ ಚಂದ್ರಶೇಖರ ಮತ್ತು ಅಂಕೋಲಾ ಉಪ ವಿಭಾಗ ಸೇರಿದಂತೆ ಕಿರಿಯ ಅಧಿಕಾರಿಗಳ ತಂಡ, ಅಂಕೋಲಾದ ಪೂಜಗೇರಿಯ ಭೇಟಿ ನೀಡಿ, ಕಿರು ಸೇತುವೆ ಮತ್ತು ಹೆದ್ದಾರಿ ಹೊಂಡ ಗುಂಡಿಗಳನ್ನು ಪರಿಶೀಲಿಸಿತ್ತು.
ಈ ವೇಳೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು,ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸುರಕ್ಷತೆ ದೃಷ್ಟಿಯಿಂದ ಕಿರಿಯ ಅಧಿಕಾರಿಗಳಿಗೆ ಕೆಲ ಅಗತ್ಯ ಮಾರ್ಗದರ್ಶನ, ಹಾಗೂ ಸೂಚನೆ ನೀಡಿದ್ದರು. ಗುರುವಾರದಿಂದ ಜಲ್ಲಿಕಲ್ಲು ಹಾಕಿ ಹೆದ್ದಾರಿ ಹೋಂಡ ತುಂಬುವ, ಕೆಮ್ಮಣ್ಣು ಸುರಿದು ಸಮತಟ್ಟುಗೊಳಿಸುವ ಕೆಲಸ ಇಲಾಖೆಯಿಂದ ಆರಂಭವಾಗಿದ್ದು,ಪ್ರತಿನಿತ್ಯ ಹೋಂಡ ಗುಂಡಿಗಳಲ್ಲಿ ಸರ್ಕಸ್ ಮಾಡುತ್ತಾ ವಾಹನ ಚಲಾಯಿಸಬೇಕಿದ್ದ ಹಲವು ಪ್ರಯಾಣಿಕರು, ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಇದರಿಂದ ಹೊಂಡ ಗುಂಡಿಗಳನ್ನು ಮುಚ್ಚಿ,ತಾತ್ಕಾಲಿಕ ರಿಪೇರಿ ಭಾಗ್ಯ ನಡೆಸಿರುವ ಇಲಾಖೆ,ಮಳೆಗಾಲ ಮುಗಿದು ಬರುವ ಡಿಸೆಂಬರ್ ಕೊನೆ ಒಳಗೆ ಸುಮಾರು 1 ಕೋಟಿ ರೂ ಗೂ ಹೆಚ್ಚು ವೆಚ್ಚದಲ್ಲಿ ಹೊಸ ಸೇತುವೆ ಮತ್ತು ಕೂಡು ರಸ್ತೆ ಅಭಿವೃದ್ಧಿ ಪಡಿಸಲಿದೆ ಎಂಬ ಮಾಹಿತಿಯಿದ್ದು, ಹೊಸ ವರ್ಷ ಆಚರಣೆಗೂ ಮುನ್ನ ಈ ಭಾಗದ ಜನರ ಓಡಾಟಕ್ಕೆ ಇಲಾಖೆ ತನ್ನ ಜವಾಬ್ದಾರಿ ಅರಿತು, ಕಾಮಗಾರಿ ಪೂರ್ಣಗೊಳಿಸಿ ಜನಸಾಮಾನ್ಯರ ಹಾಗೂ ಇತರೆ ಎಲ್ಲಾ ರೀತಿಯ ವಾಹನಗಳ ಓಡಾಟಕ್ಕೆ ಅನುಕೂಲ ಕಲ್ಪಿಸಲಿ ಎನ್ನುವುದು ಪ್ರಜ್ಞಾವಂತರ ಹಾಗೂ,ಪೂಜಗೇರಿ ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮಸ್ಥರ ಆಗ್ರಹವಾಗಿದೆ.
ಸಾರ್ವಜನಿಕರ ಹಿತ ದೃಷ್ಟಿಯಿಂದ ಹೆದ್ದಾರಿ ದು ಸ್ಥಿತಿ ಕುರಿತು ವಿಸ್ತೃತ ವರದಿ ಪ್ರಕಟಿಸಿದ ವಿಸ್ಮಯ ವಾಹಿನಿ ಹಾಗೂ,ಸ್ಥಳ ಪರಿಶೀಲಿಸಿ ತುರ್ತು ಅಗತ್ಯ ಕ್ರಮ ಕೈಗೊಂಡು ,ಮುಂಬರುವ ದಿನಗಳಲ್ಲಿ ಶಾಶ್ವತ ಸೇತುವೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭರವಸೆ ನೀಡಿದ ಲೋಕೋಪಯೋಗಿ ಇಲಾಖೆಯ ಕಾರವಾರ ಹಾಗೂ ಅಂಕೋಲಾದ ಹಿರಿಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ,ಸ್ಥಳೀಯ ಜನರು ಕೃತಜ್ಞತಾ ಪೂರ್ವಕವಾಗಿ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ