ಹರಿಯಾಣದಿಂದ ಕೇರಳಕ್ಕೆ ಸಾಗಾಟ
ಗೋಕರ್ಣ ಪೊಲೀಸರಿಂದ ದಾಳಿ
ಕುಮಟಾ: ಲಾರಿಯ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ 37 ಕೋಣದ ಮರಿಗಳನ್ನು ತಾಲೂಕಿನ ಹಿರೇಗುತ್ತಿಯ ಬಳಿ ರಕ್ಷಣೆ ಮಾಡಲಾಗಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಹರಿಯಾಣ ಮತ್ತು ಉತ್ತರ ಪ್ರದೇಶದವರು ಎಂದು ತಿಳಿದುಬಂದಿದೆ. ಹರಿಯಾಣದಿಂದ ಕೇರಳಕ್ಕೆ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದರು.
ಗೋಕರ್ಣ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಇವುಗಳ ಬೆಲೆ ಸುಮಾರು ಮೂರು ಲಕ್ಷ ಎಂದು ಅಂದಾಜಿಸಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಬಾವಿಗೆ ಬಿದ್ದು ಹೆಣ್ಣು ಚಿರತೆ ಸಾವು
- ಜಿಂಕೆ ಬೇಟೆ: 33 ಕೆ.ಜಿ ಮಾಂಸ ವಶಕ್ಕೆ: ಆರೋಪಿ ಬಂಧನ
- ಶಿರೂರು ದುರಂತ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಆಗ್ರಹ: NHAI ಕಚೇರಿಗೆ ಮುತ್ತಿಗೆ ಹಾಕಲು ಯತ್ನ
- ಅಡಿಕೆ ಮಾನ ಕಳೆಯುತ್ತಿದೆ ಅಗ್ಗದ ಬರ್ಮಾ ಅಡಿಕೆ! TSS ವ್ಯಾಪಾರಿ ಅಂಗಳದಲ್ಲಿ ಬರ್ಮಾ ದೇಶದ ಚಾಲಿ: ಏನಾಯ್ತು ನೋಡಿ?
- ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಲಕ್ಷಾಂತರ ರೂಪಾಯಿ ನಗದು ಕಳ್ಳತನ : ಕ್ಯಾಮೆರಾ ಬದಿಗೆ ಸರಿಸಿ, ಡಿವಿಆರ್ ನಾಶಪಡಿಸಿದ ಚಾಲಾಕಿ ಕಳ್ಳರು