Follow Us On

WhatsApp Group
Important
Trending

ಶೋಧ ಕಾರ್ಯಾಚರಣೆ ವೇಳೆ ದ್ವಿಚಕ್ರ ವಾಹನ ಪತ್ತೆ? ವಾಹನ ಯಾರಿಗೆ ಸೇರಿದ್ದಿರಬಹುದೆಂಬ ಕುತೂಹಲ

ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತದ ನಂತರ ಗಂಗಾವಳಿ ನದಿಯಲ್ಲಿ ನಡೆಯುತ್ತಿರುವ 3 ನೇ ಹಂತದ ಶೋಧ ಕಾರ್ಯಾಚರಣೆ ರವಿವಾರ 3 ನೇ ದಿನಕ್ಕೆ ಕಾಲಿರಿಸಿದ್ದು, ಈ ವೇಳೆ ದ್ವಿಚಕ್ರ ವಾಹನ ಒಂದು ಪತ್ತೆಯಾಗಿದ್ದು, ಈ ಕುರಿತು ಮುಳುಗು ತಜ್ಞ ಈಶ್ವರ ಮಲ್ಟೆ ಅದಕ್ಕೆ ಹಗ್ಗ ಕಟ್ಟಿ ಮೇಲೆ ಬಂದಿದ್ದಾರೆ ಎನ್ನಲಾಗಿದೆ.

ಉದ್ಯೋಗ: ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ: ಪದವಿ ಆದವರು ಅರ್ಜಿ ಸಲ್ಲಿಸಿ

ಈ ವಾಹನ ಹೆದ್ದಾರಿ ಅಂಚಿಗೆ ಟೀ ಸ್ಟಾಲ್ ನಡೆಸುತ್ತಿದ್ದ ಲಕ್ಷ್ಮಣ್ ನಾಯ್ಕ್ ಕುಟುಂಬಕ್ಕೆ ಸೇರಿದ್ದಾಗಿರಬಹುದು ಎಂದು ಸ್ಥಳೀಯರು ಊಹೆ ವ್ಯಕ್ತಪಡಿಸುತ್ತಿದ್ದಾರೆ. ಟೀ ಸ್ಟಾಲ್ ಮಾಲಕ ಲಕ್ಷ್ಮಣ ನಾಯ್ಕ, ಪತ್ನಿ ಶಾಂತಿ, ಮಕ್ಕಳಾದ ರೋಷನ್ ಮತ್ತು ಆವಂತಿಕ ಈ ದುರ್ಘಟನೆಯಲ್ಲಿ ಮೃತ ದೇಹವಾಗಿ ಪತ್ತೆಯಾಗಿದ್ದರು. ಈ ಮೂಲಕ ಅವರ ಸಂಪೂರ್ಣ ಕುಟುಂಬ ಮತ್ತು ಆಸ್ತಿ ಪಾಸ್ತಿ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಇವರ ಕುಟುಂಬ ಸಂಬಂಧಿ ಜಗನ್ನಾಥ ನಾಯ್ಕ ಮಾತ್ರ ಈ ವರೆಗೂ ಪತ್ತೆಯಾಗದೇ,ಶೋಧ ಕಾರ್ಯ ಮುಂದುವರಿದಿದೆ.

ನದಿ ಒಡಲಾಳದಲ್ಲಿ  ಹುದುಗಿದೆಯೇ ಸ್ಪೋಟಕ ರಹಸ್ಯ? ಗಂಗಾವಳಿ ನದಿಯಲ್ಲಿ ಸಿಕ್ಕಿದ್ದು ಯಾವ ವಾಹನದ ಬಿಡಿ ಭಾಗಗಳು?

ಸ್ಥಳೀಯರು ಉಹಿಸಿದಂತೆ ಅ ದ್ವಿಚಕ್ರ ವಾಹನ ಲಕ್ಷ್ಮಣ ಕುಟುಂಬಕ್ಕೆ ಸೇರಿದ್ದು ಧೃಢಪಟಲ್ಲಿ ಮಾತ್ರ ಪ್ರಕರಣ ಹೆಚ್ಚಿನ ಕುತೂಹಲವಿಲ್ಲದೆ ಮುಕ್ತಾಯಗೊಳ್ಳಲಿದೆ. ಇಲ್ಲದಿದ್ದರೆ ಈ ದ್ವಿಚಕ್ರ ವಾಹನ ಯಾರದ್ದಾಗಿರಬಹುದು? ಈ ವಾಹನಕ್ಕೆ ಸಂಬಂಧಪಟ್ಟವರು ಎಲ್ಲಿ ಹೋದರು ಎಂಬ ತನಿಖೆ ಕೈಗೊಳ್ಳಬೇಕಾಗಬಹುದು ಎನ್ನಲಾಗಿದೆ. ಆದರೆ ಆ ಸಾಧ್ಯತೆ ತೀರಾ ಕಡಿಮೆ ಎನ್ನುತ್ತಾರೆ ಸ್ಥಳೀಯರು.

ಒಟ್ಟಿನಲ್ಲಿ ದ್ವಿಚಕ್ರ ವಾಹನವನ್ನು ನೀರಿನಿಂದ ಮೇಲೆತ್ತಿದ ಬಳಿಕ ಸ್ಪಷ್ಟ ಚಿತ್ರಣ ದೊರೆಯಲಿದೆ. ಇದಲ್ಲದೇ ನದಿ ನೀರಿನಲ್ಲಿ ಕಟ್ಟಿಗೆ ತುಂಡುಗಳು ಅಲ್ಲಲ್ಲಿ ಕಂಡು ಬಂದಿದೆ ಎನ್ನಲಾಗಿದ್ದು , ನಿನ್ನೆ ದಿನವೂ 1 ( ಜಲಾವ ನಾಟಾ) ಕಟ್ಟಿಗೆ ತುಂಡು ) ಸಿಕ್ಕಿದ್ದು,ಕೇರಳ ಮೂಲದ ಅರ್ಜುನ್ ನ ಬೆಂಜ್ ಲಾರಿಯಲ್ಲಿದ್ದದ್ದು ಎನ್ನಲಾಗಿದೆ.

ಇದೇ ವೇಳೆ ಗ್ಯಾಸ್ ಟ್ಯಾಂಕರ್ ಲಾರಿಯ ಎರಡು ಚಕ್ರಗಳುಳ್ಳ ಫ್ರಂಟ್ ಎಕ್ಸೆಲ್, ಮತ್ತು ಡ್ರೈವರ್ ಕ್ಯಾಬಿನ್ನಿನ ಪಾರ್ಶ ಭಾಗ ಪತ್ತೆಯಾಗಿತ್ತು. 3 ನೇ ದಿನದ ಕಾರ್ಯಾಚರಣೆ ಮುಂದುವರಿದಿದ್ದು ಪಾತ್ರೆಯೊಂದು ದೊರೆತಿದ್ದು ಅದೂ ಸಹ ಲಕ್ಷ್ಮಣ್ ನಾಯ್ಕ ಟೀ ಸ್ಟಾಲ್ ನದ್ದು ಎನ್ನಲಾಗುತ್ತಿದೆ. ಮುಂದಿನ ಕಾರ್ಯಚರಣೆ ವೇಳೆ ಮತ್ತೆ ಏನೆಲ್ಲ ಸಿಗಬಹುದು ಕಾದು ನೋಡಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button