ಭಟ್ಕಳ : ತಾಲೂಕಿನ ಗ್ರಾಮೀಣ ವ್ಯವಸಾಯ ಸಹಕಾರಿ ಬ್ಯಾಂಕ್ ಬೆಳಕೆ ಇದರ 72ನೇ ವಾರ್ಷಿಕ ಮಹಾಸಭೆ ಪ್ರಧಾನ ಕಚೇರಿಯಲ್ಲಿ ಜರುಗಿತು. ಬ್ಯಾಂಕಿನ ಅಧ್ಯಕ್ಷರಾದ ಮಾದೇವ ನಾಯ್ಕ ಇವರು ಬ್ಯಾಂಕಿನ ವರದಿಯನ್ನು ಓದಿ ಹೇಳಿದರು. ಹಾಗೂ ಬ್ಯಾಂಕು ಒಂದು ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳಾದ ಷೇರುದಾರರಿಗೆ ಅನುಕೂಲ ಆಗಲು 1% ಸಾಲದ ಬಡ್ಡಿ ಕಡಿಮೆ , ಷೇರುದಾರರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಒಂದು ಸಾರ್ವಜನಿಕ ಬಸ್ಸು ತಂಗುದಾಣ, ದೂರದಿಂದ ಬರುವ ಸಾರ್ವಜನಿಕರಿಗೆ ಅನುಕೂಲ ಆಗಲು ಗೋರ್ಟೆ ಕ್ರಾಸ್ಸಿನಲ್ಲಿ ನ್ಯಾಯ ಬೆಲೆ ಅಂಗಡಿ ಶಾಖೆ ,ರೈತರಿಗೆ ಕಡಿಮೆ ದರದಲ್ಲಿ ರಸಗೊಬ್ಬರ ಪೂರೈಕೆ ಹಾಗೂ ಸೇಫ್ ಲಾಕಾರ್ ವ್ಯವಸ್ಥೆಯನ್ನು ಮಾಡಲಾಗಿದೆ.
ಶೋಧ ಕಾರ್ಯಾಚರಣೆ ವೇಳೆ ದ್ವಿಚಕ್ರ ವಾಹನ ಪತ್ತೆ? ವಾಹನ ಯಾರಿಗೆ ಸೇರಿದ್ದಿರಬಹುದೆಂಬ ಕುತೂಹಲ
ಹಾಗೂ ಬ್ಯಾಂಕಿನ ಕಾರ್ಯವ್ಯಾಪ್ತಿಲ್ಲಿ ಬರುವ ಯಲ್ವಡಿಕವೂರ್ ಹಾಗೂ ಬೆಳಕೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ 2023-24ನೇ ಸಾಲಿನಲ್ಲಿ SSLC ಯಲ್ಲಿ 90%ಮೇಲ್ಪಟ್ಟು ಅಂಕವನ್ನು ಗಳಿಸಿದ ಎಲ್ಲಾ 27 ವಿದ್ಯಾರ್ಥಿಗಳಿಗೆ ಪ್ರತೀಭಾ ಪುರಸ್ಕಾರ ಮಾಡಲಾಗಿದೆ.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಪಾಂಡು ನಾಯ್ಕ ನಿರ್ದೇಶಕರಾದ ಲಕ್ಷ್ಮೀನಾರಾಯಣ ನಾಯ್ಕ, ದಾಮೋದರ ನಾಯ್ಕ,ಲೋಕೇಶ್ ನಾಯ್ಕ,ಮಂಜು ಮೊಗೇರ, ಭಾಸ್ಕರ ಗೊಂಡ, ರವಿರಾಜ್ ಜೈನ್,ಲಲಿತಾ ನಾಯ್ಕ, ಭಾರತಿ ನಾಯ್ಕ, ನಾಗೇಶ್ ನಾಯ್ಕ, ಶಾರದಾ ನಾಯ್ಕ,ಪ್ರಧಾನ ವ್ಯವಸ್ಥಾಪಕರಾದ ಅಣ್ಣಪ್ಪ ನಾಯ್ಕ ಬ್ಯಾಂಕಿನ ಸಿಬ್ಬಂಧಿಗಳು ಷೇರುದಾರರು ಹಾಜರಿದ್ದರು.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ