ಅಂಕೋಲಾ :ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಪಿಕಪ್ ವಾಹನ ಒಂದನ್ನು ವಶಪಡಿಸಿಕೊಂಡ ಅಂಕೋಲಾ ಪೊಲೀಸರು ಕಾನೂನು ಕ್ರಮ ಮುಂದುವರಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ8 ಬಣ್ಣದ 207 ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮರಳು ತುಂಬಿ ಸಾಗಿಸುತ್ತಿತ್ತು ಎನ್ನಲಾಗಿದ್ದು, ಈ ವೇಳೆ ,ಪಿಎಸ್ಐ ಸುನೀಲ ಹುಲ್ಲೊಳ್ಳಿ, ಸಿಬ್ಬಂದಿಗಳಾದ ಜಗದೀಶ ನಾಯ್ಕ, ಸುರೇಶ ಇವರು ಅಕ್ರಮ ಮರಳು ಸಮೇತ ಪಿಕಪ್ ವಾಹನವನ್ನು ವಶಕ್ಕೆ ಪಡೆದು ಕಾನೂನು ಕ್ರಮ ಮುಂದುವರಿಸಿದ್ದಾರೆ.
ಶಿರೂರು ಗುಡ್ಡ ಕುಸಿತ ದುರಂತ : ಮೂರನೇ ದಿನದ ಕೊನೆಯಲ್ಲಿ ಮೂಳೆ ಪತ್ತೆ
ಈ ಅಕ್ರಮ ದಂಧೆ ನಡೆಸುತ್ತಿದ್ದವರು ಯಾರು ? ಮತ್ತು ಅವರು ಮರಳನ್ನು ಎಲ್ಲಿಂದ -ಎಲ್ಲಿಗೆ ಅಕ್ರಮವಾಗಿ ಸಾಗಿಸುತ್ತಿದ್ದರು? ಎಂ ಬಿತ್ಯಾದಿ ಖಚಿತ ಮತ್ತು ಈ ಕುರಿತು ಅಧಿಕೃತ ಮಾಹಿತಿಗಳು ತಿಳಿದು ಬರಬೇಕಿದೆ.ಇತ್ತೀಚೆಗಷ್ಟೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಅಕ್ರಮ ಮರಳು ಸಾಗಿಸುತ್ತಿದ್ದ ಟಿಪ್ಪರ್ ಒಂದನ್ನು ತಾಲೂಕಿನಲ್ಲಿ ವಶಪಡಿಸಿಕೊಂಡಿದ್ದರು.
ಅದಾದ ಬಳಿಕವೇ ಪೊಲೀಸರು ಅಕ್ರಮ ದಂಧೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಕೇವಲ ಸಣ್ಣ ಪುಟ್ಟ ದಂಧೆ ಕೋರರಿಗೆ ಮಾತ್ರ ತಮ್ಮ ಬಿಗು ಕ ಕ್ರಮ ಮತ್ತು ನಿಲುವು ತಾಳದೇ,ಈ ಅಕ್ರಮ ದಂಧೆಯಲ್ಲಿ ಇರಬಹುದಾದ ದೊಡ್ಡ ದೊಡ್ಡ ಕುಳಗಳಿಗೂ ಕಾನೂನಿನ ಬಿಸಿ ಮುಟ್ಟಿಸಿ ತಮ್ಮ ದಕ್ಷತೆ ತೋರ್ಪಡಿಸಬೇಕೆನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಂತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ