Important
Trending

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಯಮುನಾ ನಾಯ್ಕ ಅತ್ಯಾಚಾರ & ಕೊಲೆ ಪ್ರಕರಣ: ಶ್ರೀರಾಮ ಸೇನಾ ರಾಜ್ಯಾಧ್ಯಕ್ಷರ ಆರೋಪ ಏನು?

ಭಟ್ಕಳ: 2010 ರಲ್ಲಿ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಡೆದ ಯಮುನಾ ನಾಯ್ಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸುದ್ದಿಗೆ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಆ ಸಂದರ್ಭದಲ್ಲಿ ಪ್ರಕರಣದಲ್ಲಿ ಅಮಾಯಕ ವೆಂಕಟೇಶ ಹರಿಕಾಂತನನ್ನು ಆರೋಪಿಯನ್ನಾಗಿಸಿ ಬಂಧಿಸಲಾಗಿತ್ತು. ಆತ 6 ವರ್ಷ 8 ತಿಂಗಳವರೆಗೆ ಜೈಲಿನಲ್ಲಿದ್ದು ನರಕಯಾತನೆಯನ್ನು ಅನುಭವಿಸಬೇಕಾಯಿತು. 2017 ರಲ್ಲಿ ಕೋರ್ಟ್ ಆತನನ್ನು ನಿರಪರಾಧಿ ಎಂದು ಘೋಷಿಸಿ ಬಿಡುಗಡೆಗೊಳಿಸಿ ಮರು ತನಿಖೆಗೆ ಆದೇಶ ನೀಡಿದೆ. ಆದರೆ ಮರು ತನಿಖೆ ಮಂದಗತಿಯಲ್ಲಿ ಸಾಗುತ್ತಿದ್ದು ಸಾರ್ವಜನಿಕರು ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಶ್ರೀರಾಮ ಸೇನಾ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.

Muda Scam: ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಬಿಗ್ ಶಾಕ್

ಯಮುನಾ ನಾಯ್ಕ ಅತ್ಯಾಚಾರ ಕೊಲೆ ಪ್ರಕರಣದ ಮರುತನಿಖೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಭಟ್ಕಳ ತಾಲೂಕಿನ ಆಸರಕೇರಿಯಲ್ಲಿನ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ಸಭಾಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವೆಂಕಟೇಶ ಹರಿಕಾಂತನ್ನು ನಿರಪರಾಧಿ ಎಂದು ಕೊರ್ಟ್ ಬಿಡುಗಡೆಗೊಳಿಸಿ 7 ವರ್ಷ ಕಳೆಯಿತು. ಆದರೂ ಇಲ್ಲಿಯವರೆಗೂ ಅಪರಾಧಿಗಳು ಪತ್ತೆಯಾಗುತ್ತಿಲ್ಲ, ಆರೋಪಿಗಳ ಬಂಧನವಾಗುತ್ತಿಲ್ಲ, ಸಂಬoಧಪಟ್ಟ ತನಿಖೆಗಳು ನಡೆಯುತ್ತಿಲ್ಲ. ಈ ಮೂಲಕ ವ್ಯವಸ್ಥೆ ಯಾರನ್ನೂ ರಕ್ಷಣೆ ಮಾಡಲು ಹೊರಟಿದೆ. ಯಾವ ಕಾಣದ ಕೈಗಳು ಇದರ ಹಿಂದೆ ಕೆಲಸ ಮಾಡುತ್ತಿದೆ. ಪೋಲಿಸ್ ಇಲಾಖೆಯ ಕೈ ಕಟ್ಟಿದವರು ಯಾರು ಎಂದು ಪ್ರಶ್ನಿಸಿದರು.

2011 ನವೆಂಬರನಲ್ಲಿಯೇ ಈ ಪ್ರಕರಣಕ್ಕೆ ಸಂಬAಧಪಟ್ಟ ಲ್ಯಾಬ್ ರಿಪೋರ್ಟ್ ಬಂದಿ, ಪ್ರಕರಣದಲ್ಲಿ ವೆಂಕಟೇಶ ಹರಿಕಾಂತನ ಪಾತ್ರವಿಲ್ಲವೆಂದು ಆಗಲೆ ತಿಳಿದಿತ್ತು . ಆದರೂ ವರದಿಯನ್ನು ನೀಡಲು ವಿಳಂಬದ ಕ್ರಮವನ್ನು ಅನುಸರಿಸಿ ದಿರ್ಘಕಾಲದವರೆಗೂ ಅವರಿಗೆ ನರಕಯಾತನೆಯ ಅನುಭವಿಸುವಂತೆ ಮಾಡಲಾಗಿದೆ. ಇದರಿಂದಾಗಿ ಒಟ್ಟಾರೆ ವ್ಯವಸ್ಥೆಯ ಮೇಲೆ ಜನರು ಭ್ರಮನಿರಸಗೊಂಡಿದ್ದಾರೆ. ಬೆಂಬಲವಿಲ್ಲದ, ಹಣವಿಲ್ಲದ ಜನರಿಗೆ ಈ ದೇಶದಲ್ಲಿ ನ್ಯಾಯವೇ ಇಲ್ಲವೆ ಎಂದು ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ಅತ್ಯಾಚಾರ ಎಸಗಿ ಕೊಲೆಗಯ್ದವರು ಕಾನೂನಿನ ಭಯವಿಲ್ಲದೆ ಹೊರಗಡೆ ಆರಾಮವಾಗಿ ಸುತ್ತಾಡಿಕೊಂಡು ಇರುವುದು ವ್ಯವಸ್ಥೆಯ ವಿಡಂಭನೆಯಾಗಿದೆ. ಇಂತವರನ್ನು ನೋಡಿ ಮತ್ತೊಂದಿಷ್ಟು ಜನ ಅಪರಾಧ ಲೋಕಕ್ಕೆ ಬರುತ್ತಾರೆ ಎಂದು ಹೇಳಿದರು. ನಂತರ ಮರುತನಿಖೆಯ ವಿಳಂಬ ಮಾಡದೆ ಆದಷ್ಟು ಶಿಘ್ರವಾಗಿ ಮುಗಿಸುವಂತೆ ಒತ್ತಾಯಿಸಿ ಭಟ್ಕಳದ ಶಹರ ಪೋಲಿಸ್ ಠಾಣೆಯಲ್ಲಿ ಸಿ.ಪಿ.ಐ ಗೋಪಿಕೃಷ್ಣರವರ ಮೂಲಕ ಡಿ.ವೈ.ಎಸ್.ಪಿ ಯವರಿಗೆ ಮನವಿಪತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀ ರಾಮ ಸೇನಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಲಾರ್, ಶ್ರೀರಾಮ ಸೇನಾ ಪ್ರಮುಖರಾದ ಜಯಂತ ನಾಯ್ಕ, ಭಟ್ಕಳ ಘಟಕದ ಅಧ್ಯಕ್ಷ ರಾಜು ಭಟ್ಕಳ, ರಾಮದಾಸ ಭಟ್ಕಳ ಮತ್ತಿತರರು ಇದ್ದರು.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Back to top button