Important
Trending

ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಗಮನಸೆಳೆದ ವಿಶೇಷ ಹೂವಿನ ಪೂಜೆ

ಕುಮಟಾ: ಕುಮಟಾದ ಅಧಿದೇವತೆ, ದೇವರಹಕ್ಕಲದ ಪ್ರಸಿದ್ಧ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಹೂವಿನ ಪೂಜೆ ಸಾವಿರಾರು ಭಕ್ತರ ನಡುವೆ ಶುಕ್ರವಾರ ವಿಜೃಂಭಣೆಯಿoದ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಿತೃ ಪಕ್ಷದ ಅಂಗವಾಗಿ ಶಾಂತಿಕಾ ಪರಮೇಶ್ವರಿ ದೇವಿಗೆ ವಿಶೇಷ ಹೂವಿನ ಅಲಂಕಾರ ನಡೆಸಿ ಪೂಜೆ ಸಲ್ಲಿಸಲಾಯಿತು.

ವಿಭಿನ್ನ ಜಾತಿಯ ಹೂವುಗಳು ಸೇರಿದಂತೆ Dragan ಫ್ರೂಟ್ಸ್ , ಮೆಕ್ಕೆ ಜೋಳದಿಂದ ದೇವಸ್ಥಾನವನ್ನು ಶೃಂಗರಿಸಲಾಗಿತ್ತು. ಶ್ರೀದೇವಿಗೆ ಪರಿಮಳ ಭರಿತ ಪುಷ್ಪಗಳಿಂದ ಅಲಂಕಾರ ಮಾಡಿ, ವಿಶೇಷ ಪೊಜೆ ಸಲ್ಲಿಸಲಾಯಿತು. ಭಕ್ತರು ಬೆಳಗ್ಗೆಯಿಂದಲೇ ಹಣ್ಣು-ಕಾಯಿ ಸೇವೆ ನೀಡುವ ಜೊತೆಗೆ ವಿವಿಧ ದೈವಿ ಕೈಂಕರ್ಯಗಳನ್ನು ನೆರವೇರಿಸಿದರು.

ಯುವಕ ದುರ್ಮರಣ: ಅಲೆಗಳ ಅಬ್ಬರಕ್ಕೆ ನಲುಗಿದ ಬೋಟ್ : ಅಡುಗೆ ಮಾಡುತ್ತಿದ್ದವ ಆಯ ತಪ್ಪಿ ಬಿಸಿ ಬಾಣಲೆಗೆ ಬಿದ್ದ

ದೇವಿಗೆ ಮಾಡಲಾದ ಪುಷ್ಪಾಲಂಕಾರ ಅತೀ ಸುಂದರವಾಗಿ ಕಾಣುತ್ತಿರುವುದರಿಂದ ಅಲಂಕಾರಭೂಷಿತ ದೇವಿಯ ದರ್ಶನ ಪಡೆಯಲು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಈ ವೇಳೆ ಸೇವೆ ಸಲ್ಲಿಸಿದ ಭಕ್ತರು ಇಷ್ಠಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು. ಈ ವೇಳೆ ದೇವಸ್ಥಾನದ ಮೊಕ್ತೆಸರರಾದ ಕೃಷ್ಣ ಪೈ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅತ್ಯಂತ ವಿಜ್ರಂಭಣೆಯಿoದ ಶ್ರೀ ಶಾಂತಿಕಾ ಪರಮೇಶ್ವರಿ ದೇವಿಗೆ ವಿಶೇಷ ಹೂವಿನ ಅಲಂಕಾರ ನಡೆಸಿ ಪೂಜೆಯನ್ನು ನೇರವೇರಿಸಿದ್ದೇವೆ. ಎಲ್ಲರಿಗೂ ದೇವಿಯೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥೀಸಿಕೊಂಡರು.

ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಜು ಗುನಗಾ ಅವರು ಮಾತನಾಡಿ, ಪಿತೃ ಪಕ್ಷದ ಅಂಗವಾಗಿ ಶಾಂತಿಕಾ ಪರಮೇಶ್ವರಿ ದೇವಿಗೆ ವಿಶೇಷ ಹೂವಿನ ಅಲಂಕಾರ ನಡೆಸಿ ಪೂಜೆಯನ್ನು ನಡೆಸಲಾಗುತ್ತದೆ. ಎಲ್ಲಾ ಭಕ್ತರ ಸಹಕಾರದಿಂದ ಪ್ರತಿ ವರ್ಷವೂ ಕೂಡ ಪುಷ್ಪಲಂಕಾರವನ್ನು ಅತ್ಯಂತ ವಿಜ್ರಂಭಣೆಯಿoದ ನಡೆಸಲಾಗುತ್ತದೆ. ತಾಯಿಯ ಸನ್ನಿದಿಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಎಲ್ಲಾ ಜನತೆಗೂ ಶ್ರೀ ಶಾಂತಿಕಾ ಪರಮೇಶ್ವರಿ ದೇವಿಯೂ ಸನ್ಮಂಗಳವನ್ನುoಟುಮಾಡಲಿ ಎಂದರು.

ಈ ದೇವಿಯು ಹೂವಿನ ಪ್ರಸಾದಕ್ಕೆ ಹೆಚ್ಚು ಜನಪ್ರಿಯವಾಗಿದ್ದು, ದೇವಿಯಲ್ಲಿ ಬೇಡಿಕೆಯಿಟ್ಟು ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಸಾದ ಕೇಳುತ್ತಾರೆ. ಪ್ರಾಸಾದ ನೀಡಿದಲ್ಲಿ ಕಾರ್ಯ ಸಿದ್ದಿಯಾಗುವ ನಂಬಿಕೆ ಇದ್ದು ಪ್ರತಿ ವರ್ಷ ಭಕ್ತರಿಂದಲೇ ಹೂವಿನ ಅಲಂಕಾರ ಸೇವೆ ವೈಭವದಿಂದ ನಡೆದುಕೊಂಡು ಬರುತ್ತಿದೆ.

ವಿಸ್ಮಯ ನ್ಯೂಸ್, ನಾಗೇಶ ದೀವಗಿ, ಕುಮಟಾ

Back to top button