ಅಣ್ಣ ವಾಶ್ ರೂಮಿಗೆ ಹೋಗಿ ಬರುವಷ್ಟರಲ್ಲಿ ಬಸ್ ನಿಲ್ದಾಣದಿಂದ ಕಾಣೆಯಾದ ತಂಗಿ ? ಸ್ನೇಹಿತೆ ಜೊತೆ ಮಾತನಾಡುತ್ತಿದ್ದವಳು ಎಲ್ಲಿ ಹೋದಳು

ಅಂಕೋಲಾ: ತನ್ನ ಸಹೋದರನೊಂದಿಗೆ ಅಂಕೋಲಾ ಬಸ್ ನಿಲ್ದಾಣಕ್ಕೆ ಬಂದಿದ್ದ ಪಕ್ಕದ ತಾಲೂಕಿನ ಯುವತಿ ಒರ್ವಳು , ಅವಳ ಅಣ್ಣ ವಾಶ್ ರೂಮಿಗೆ ಹೋಗಿ ಬರುವಷ್ಟರಲ್ಲಿ ಅಲ್ಲಿರದೇ ಎಲ್ಲಿಯೋ ಹೋಗಿ ಕಾಣೆಯಾದ ಘಟನೆ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಡಿವೈಡರ್ ಗೆ ಡಿಕ್ಕಿ ಹೊಡೆದ KSRTC ಬಸ್ : ಏಳು ಪ್ರಯಾಣಿಕರಿಗೆ ಗಾಯ

ಕುಮಟಾ ತಾಲೂಕಿನ ಬೆಟ್ಕುಳಿಯ ಮಹಮ್ಮದ್ ಬಿರ್ಕುಡಿಕರ ಎಂಬಾತ ತನ್ನ ತಂಗಿ ಕಾಣೆಯಾದ ಬಗ್ಗೆ ನೀಡಿದ ಲಿಖಿತ ದೂರಿನಂತೆ ,ಪಿರ್ಯಾದಿಯ ತಂಗಿಯಾದ ಕುಮಾರಿ ಸನಾ ಯೂನಸ್ ಬಿರ್ಕುಡಿಕರ (20 ) ಇವಳು ದಿನಾಂಕ 07-10 – 2024 ರಂದು ಮಧ್ಯಾಹ್ನ ಬೆಟ್ಕುಳಿಯ ನಮ್ಮ ಮನೆಯಿಂದ ನನ್ನ ಜೊತೆಯೇ ಅಂಕೋಲಾ ಬಸ್ ನಿಲ್ದಾಣಕ್ಕೆ ಬಂದು ಅವಳ ಸ್ನೇಹಿತೆಗೆ ಬೇಟಿಯಾಗಿ ಮಾತನಾಡಿಸುತ್ತಿರುವಾಗ ಪಿರ್ಯಾದಿಯು ಅಂಕೋಲಾ ಬಸ್ ನಿಲ್ದಾಣದಲ್ಲಿನ ವಾಶ್ ರೂಮ್ ಗೆ ಹೋಗಿ ಬರುವುದಾಗಿ ತನ್ನ ತಂಗಿಗೆ ಹೇಳಿ ಹೋಗಿದ್ದು, ನಂತರ ಪಿರ್ಯಾದಿಯು ವಾಶ್‌ ರೂಮ್ ನಿಂದ ಬಂದು ತನ್ನ ತಂಗಿಗೆ ಹುಡುಕಾಡಿದ್ದು, ತನ್ನ ತಂಗಿಯು ಸಿಗದೇ ಇದ್ದಾಗ ಪಿರ್ಯಾದಿಯು ತನ್ನ ತಂಗಿಯ ಜೊತೆಗೆ ಇದ್ದ ಸ್ನೇಹಿತೆಗೆ ಕರೆ ಮಾಡಿದಾಗ, ಪಿರ್ಯಾದಿಯ ತಂಗಿಯ ಸ್ನೇಹಿತೆಯು ಫಿರ್ಯಾದಿಯ ತಂಗಿಯನ್ನು ತಾನು ಅಂಕೋಲಾ ಬಸ್ ನಿಲ್ದಾಣದ ಹೊರಗೆ ಬಿಟ್ಟು, ತನಗೆ ಅರ್ಜೆಂಟ ಕೆಲಸ ಇದ್ದ ಕಾರಣ, ತಾನು ಬಸ್ ಹತ್ತಿ ಹೋಗಿರುವದಾಗಿ ತಿಳಿಸಿದ್ದಾಳೆ.

ನಂತರ ಫಿರ್ಯಾದಿಯು ತನ್ನ ತಂಗಿ ಸನಾಳಿಗೆ ಅಂಕೋಲಾ ಬಸ್ ನಿಲ್ದಾಣ, ಅಂಕೋಲಾ ಶಹರದ ವಿವಿಧ ಅಂಗಡಿ ಮಳಿಗೆ, ಪ್ರಮುಖ ಪ್ರದೇಶಗಳಲ್ಲಿ ಪಿರ್ಯಾದಿಯು ತನ್ನ ತಂಗಿಗೆ ಹುಡುಕಾಡಿದರು ಸಹಿತ ಸಿಗದೇ ಇದ್ದಾಗ, ಪಿರ್ಯಾದಿಯು ತನ್ನ ಮನೆಗೆ ಹೋಗಿ ನಡೆದ ವಿಷಯವನ್ನು ಮನೆಯವರಿಗೆ ತಿಳಿಸಿ. ಮನೆಯವರೆಲ್ಲರೂ ಸೇರಿ ಕಾಣೆಯಾದ ಸನಾಳಿಗೆ ತಮ್ಮ ಸಂಬಂಧಿಕರಲ್ಲಿ, ಊರಿನವರಲ್ಲಿ ಪರಿಚಯಸ್ಥರಲ್ಲಿ ವಿಚಾರಿಸಿ ಹುಡುಕಾಡಿದರು ಸಿಗದೇ. ಈವರೆಗೂ ಮನೆಗೆ ವಾಪಸ್ ಬಂದಿದ್ದು ಇರುವದಿಲ್ಲಾ, ಕಾಣೆಯಾದ ತನ್ನ ತಂಗಿಯನ್ನು ಹುಡುಕಿ ಕೊಡಲು ವಿನಂತಿ ಅಂತಾ ಅಂತಾ ಎಂಬಿತ್ಯಾದಿ ಅಂಶಗಳಿದೆ.

ಎತ್ತರ : 5 ಪೂಟ್ 1 ಇಂಚು , ಉರ್ದು ಹಿಂದಿ ಕನ್ನಡ ಇಂಗ್ಲೀಷ್ ಮುಲಬಾರಿ ಭಾಷಾ ಜ್ಞಾನವಿರುವ , ಎಣ್ಣೆಗೆಂದು ಮೈಬಣ್ಣ , ಗೋಲು ಮುಖ ಸಧೃಡ ಮೈಕಟ್ಟು. ಕಪ್ಪು ತಲೆ ಕೂದಲು ಹೊಂದಿರುವ ಸನಾ ಇವಳು ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಟಿ ಶರ್ಟ್ ,ಬ್ರೌನ್ ಕಲರ್ ಬ್ಯಾಗಿ ಪ್ಯಾಂಟ್ , ಬಿಳಿ ಬಣ್ಣದ ಸ್ಕಾರ್ಪ ಮತ್ತು ಅದರ ಮೇಲೆ ಕಪ್ಪುಬಣ್ಣದ ಬುರ್ಕಾ ಧರಿಸಿದ್ದು ಈ ಮೇಲಿನ ಚಹರೆ ಗುರುತಿರುವ ಯುವತಿ ಎಲ್ಲಿಯಾದರೂ ಕಂಡು ಬಂದರೆ ಇಲ್ಲವೇ ಕಾಣೆಯಾದವರ ಬಗ್ಗೆ ಮಾಹಿತಿ ಕಂಡು ಬಂದರೆ ಅಂಕೋಲಾ ಪೊಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ.

ಅಂಕೋಲಾ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08388 – 230333 , ಮೊಬೈಲ್ ಸಂಖ್ಯೆ 9480805250 ಇಲ್ಲವೇ 9480805268 ನಂಬರಿಗೆ ಇಲ್ಲವೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸುವಂತೆ ಪೊಲೀಸ್ ಪ್ರಕಟಣೆಯಲ್ಲಿ ಕೋರಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version