ಉತ್ತರ ಕನ್ನಡದಲ್ಲಿ 90 ಕರೊನಾ ಕೇಸ್ ದಾಖಲು

ಜಿಲ್ಲೆಯಲ್ಲಿ ಆರು ಸಾವಿರದ ಗಡಿದಾಟಿದ ಸೋಂಕಿತರ ಸಂಖ್ಯೆ
68 ಮಂದಿ ಬಿಡುಗಡೆ
ಜಿಲ್ಲೆಯ ವಿವಿಧೆಡೆ ಮೂವರ ಸಾವು

[sliders_pack id=”1487″]

ಕಾರವಾರ: ಉತ್ತರಕನ್ನಡದಲ್ಲಿ ಸೋಮವಾರ 90 ಕರೊನಾ ಕೇಸ್ ದಾಖಲಾಗಿದೆ. ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟವಾದಂತೆ ಕಾರವಾರ 2, ಕುಮಟಾ 12, ಹೊನ್ನಾವರ 30, ಭಟ್ಕಳ 46 ಪ್ರಕರಣ ದಾಖಲಾಗಿದೆ. ಹೆಲ್ತ್ ಬುಲೆಟಿನ್ ನ ಅಧಿಕೃತ ಪ್ರಕಟಣೆಯಂತೆ ಅಂಕೋಲಾ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡಿನಲ್ಲಿ ಯಾವುದೇ ಕೇಸ್ ದಾಖಲಾಗಿಲ್ಲ.

ಇದೇ ವೇಳೆ 68 ಮಂದಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಂಕೋಲಾ 9, ಹೊನ್ನಾವರ 16, ಮುಂಡಗೋಡ 8, ಹಳಿಯಾಳದಲ್ಲಿ 30 ಮತ್ತು ಜೋಯ್ಡಾದಲ್ಲಿ 5 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಕರೊನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಆರು ಸಾವಿರದ ಗಡಿದಾಟಿದೆ. ಇಂದು 90 ಪ್ರಕರಣ ದೃಢಪಟ್ಟ ಬೆನ್ನಲ್ಲೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,089ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿಂದು ಮೂವರ ಸಾವು:

ಇನ್ನೊಂದೆಡೆ, ಜಿಲ್ಲೆಯಲ್ಲಿ ಕರೊನಾದಿಂದಾಗಿ ಸಾವನ್ನಪ್ಪುತ್ತಿರುವವ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಕುಮಟಾ, ಭಟ್ಕಳ, ಹಳಿಯಾಳದಲ್ಲಿ ತಲಾ ಒಂದು ಸಾವಾಗಿದೆ. ಇದೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

ಬೇಕಾಗಿದ್ದಾರೆ

ಪ್ರತಿಷ್ಠಿತ ಕಂಪೆನಿಗೆ ವಿತರಕರು ಬೇಕಾಗಿದ್ದಾರೆ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಜಿಲ್ಲೆ & ತಾಲೂಕಾವಾರು ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568

Exit mobile version