ಕುಮಟಾ: ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ನಿರಂತರ ಸಾಧನೆಯಿಂದ ಎಂತಹ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆ ನನ್ನಂತಹ ಅನೇಕ ಸೈನಿಕರು ಸಾಕ್ಷಿ ಎಂದು ಕರ್ನಲ್ ಮಿಶ್ರಾ ನುಡಿದರು. ಅವರು ಡಾ.ಏ ವಿ.ಬಾಳಿಗಾ ಪದವಿ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯ ಕುಮಟಾದ 2024-25 ನೇ ಸಾಲಿನವಿದ್ಯಾರ್ಥಿ ಸಂಘವ ನ್ನು ಉದ್ಘಾಟಿಸಿ ಮಾತನಾಡಿದರು. ಕಂಡ ಕನಸುಗಳನ್ನು ನನಸು ಮಾಡಿಕೊಳ್ಳುವುದು ವಿದ್ಯಾರ್ಥಿಗಳ ಜೀವನದ ಉದ್ದೇಶವಾಗಬೇಕು . ಏಕಾಗ್ರತೆ, ಆತ್ಮವಿಶ್ವಾಸ, ರಾಷ್ಟ್ರ ಪ್ರೇಮ ರಾಷ್ಟ್ರ ಭಕ್ತಿ ನಿಮ್ಮ ಉಸಿರಾಗಬೇಕು ಎಂದು ನುಡಿದರು.
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಕೈ ಹಿಡಿದು ಎಳೆದಾಡಿದ ಯುವಕ
ಇನ್ನೋರ್ವ ಮುಖ್ಯ ಅತಿಥಿ, ಸರಕಾರಿ ಕಲಾಮತ್ತು ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಗೀತಾ ವಾಲಿಕಾರ ಅವರು,”ಇದು ಬುದ್ಧಿವಂತರ ಜಿಲ್ಲೆ,ನಿಮ್ಮಂತಹ ಅನೇಕ ಪ್ರತಿಭಾವಂತರಿಗೆ ಬಾಳಿಗಾ ಕಾಲೇಜು ಒಳ್ಳೆಯ ಭವಿಷ್ಯ ನೀಡಿದೆ. ಮೋಬೈಲ್ ಬಳಕೆಯನ್ನು ಸದುಪಯೋಗ ಮಾ. ಕಾಲ ಹರಹರಣ ಮಾಡಬೇಡಿ. ಹೆತ್ತವರ ಜೊತೆ ನಿಮ್ಮ ಸಮಸ್ಯೆಯನ್ನು ಹೇಳಿಕೊಂಡು ಆತ್ಮವಿಶ್ವಾಸದ ಜೊತೆಗೆ ಬದುಕಿನಲ್ಲಿ ಮುನ್ನುಗ್ಗಿ,”ಎಂದು ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಎನ್. ಕೆ. ನಾಯಕ ಇಂದಿನ ಈ ಕಾರ್ಯಕ್ರಮ ದ ಲ್ಲಿ ಎರಡು ವಿಭಿನ್ನ ವ್ಯಕ್ತಿತ್ವದ ಪರಿಚಯವಾಗಿದೆ . ಒಬ್ಬರು ರಾಷ್ಟ್ರ ರಕ್ಷಕರು ಇನ್ನೊಬ್ಬರು ಶಿಕ್ಷಕರು ಇವರ ಆದರ್ಶಗಳು ನಿಮ್ಮಂತ ಯುವಕರಿಗೆ ದಾರಿದೀಪವಾಗಲಿ ಎಂದು ಶುಭ ಹಾರೈಸಿದರು ಕಾಲೇಜಿನ ಯುನಿಯನ್ ವಿಭಾಗದ ಸಂಚಾಲಕಿ ಪ್ರೊ. ವಿದ್ಯಾ ತಲಗೇರಿ ಅತಿಥಿ ಗಳನ್ನು ಪರಿಚಯಿಸಿ ಸ್ವಾಗತಿಸಿದರು. ಐ ಕ್ಯೂ ಏ ಸಿ ಸಂಚಾಲಕ ಪ್ರೊ. ಲೋಕೇಶ ಹೆಗಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ ವಿನಾಯಕ ಭಟ್ ಪ್ರತಿಜ್ಞಾ ವಿಧಿ ಬೋಧಿಸಿದರು. .ವಿದ್ಯಾರ್ಥಿ ಯೂನಿಯನ್ ಪ್ರತಿನಿಧಿ ವೆಂಕಟೇಶ್ ನಾಯ್ಕ ವಂದಿಸಿ ದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ಜಲದಿ ತರಂಗವನ್ನು ಬಿಡುಗಡೆಗೊಳಿಸಲಾಯಿತು. ಉಪನ್ಯಾಸಕರು, ವಿದ್ಯಾರ್ಥಿ ಪ್ರತಿನಿಧಿ ಗಳು ವಿದ್ಯಾರ್ಥಿಗಳು ಅತ್ಯಂತಆಸಕ್ತಿ ಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್, ಕುಮಟಾ