ಮೃತ ಗೃಹ ರಕ್ಷಕ ಪ್ರವೀಣ್ ನಾಯ್ಕ ಕುಟುಂಬಕ್ಕೆ ಧನಸಹಾಯ

ಅಂಕೋಲಾ : ಗೃಹರಕ್ಷಕ ದಳದಲ್ಲಿ ಸುದೀರ್ಘ 20 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ , ಇತ್ತೀಚೆಗೆ ಅಕಾಲಿಕವಾಗಿ ಮೃತ ಪಟ್ಟಿದ್ದರು. ಅವರ ನಿಧನದಿಂದ ನೊಂದ ಕುಟುಂಬಕ್ಕೆ ಜಿಲ್ಲಾ ಗೃಹ ರಕ್ಷಕ ದಳದ ಪರಿಹಾರ ನಿಧಿಯಿಂದ ರೂ. 10000 ಮೊತ್ತದ ಪರಿಹಾರ ರೂಪದ ಚೆಕ್ ನ್ನು ಜಿಲ್ಲಾ ಕಮಾಂಡೆಂಟ್ ಡಾ.ಸಂಜು ನಾಯಕ ಅವರು ಪ್ರವೀಣ ನಾಯ್ಕ ಪತ್ನಿ ಸಪ್ನಾ ನಾಯ್ಕ ಇವರಿಗೆ ಹಸ್ತಾಂತರಿಸಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮಾನಸಿಕ ಅಸ್ವಸ್ಥ ಯುವಕನ ರಕ್ಷಿಸಿದ ಯುವಕರು

ಈ ಸಂದರ್ಭದಲ್ಲಿ ಅಂಕೋಲಾ ಘಟಕದ ಪ್ರಭಾರ ಘಟಕಾಧೀಕಾರಿ ವಿನೋದ್ ಶಾನಭಾಗ ಹಾಗು ಅಂಕೋಲಾ ಘಟಕದ ಗೃಹ ರಕ್ಷಕರಾದ ಮಂಗೇಶ್ ಎಮ್ ಹೊಸಗದ್ದೆ,ಸುರೇಶ ಎಸ್ ಗೌಡ , ರವಿ ಎಚ್ ನಾಯ್ಕ ಮಂಜುನಾಥ ವಿ ನಾಯ್ಕ , ನಾಗರಾಜ ಡಿ ಮಹಾಲೆ
ನಾಗೇಶ ಆರ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version