ಕರ್ಕಶ ಶಬ್ದ ಮಾಡುತ್ತಿದ್ದ ಬೈಕ್​ಗಳ ಸೈಲೆನ್ಸರ್ ತೆಗೆಸಿದ ಪೊಲೀಸರು: 50 ಪ್ರಕರಣ ದಾಖಲು

ಮುಂಡಗೋಡ: ಪಟ್ಟಣ ವ್ಯಾಪ್ತಿಯಲ್ಲಿ ಹೆಚ್ಚು ಶಬ್ದ ಮಾಡಿಕೊಂಡು ಓಡಾಡುತ್ತಿದ್ದ ಬೈಕ್ ಹಾಗೂ ದಾಖಲೆ ಇಲ್ಲದ ಬೈಕ್ ಓಡಿಸುವ ಸವಾರರ ಮೇಲೆ ಪೊಲೀಸರು ಕಾರ್ಯಚರಣೆ ನಡೆಸಿ 50 ಪ್ರಕರಣ ದಾಖಲಿಸಿಕೊಂಡು 25 ಸಾವಿರ ರೂ ದಂಡ ಹಾಕಿದ್ದಾರೆ. ಇತ್ತಿಚೆಗೆ ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್ ಹಾಗೂ ಜಿಲ್ಲಾ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಮುಂಡಗೋಡ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಯ ಬಗ್ಗೆ ಮತ್ತು ಬೈಕ್‌ಗಳು ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡಿದ ಬಗ್ಗೆ ಅವರ ಗಮನಕ್ಕೆ ಬಂದಿತ್ತು.

ದನಗಳ್ಳತನ ಪ್ರಕರಣ: ಆರೋಪಿ ಬಂಧಿಸಿದ ಪೊಲೀಸರು

ಈ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಇಲ್ಲಿನ ಪಿಎಸ್‌ಐ ಪರಶುರಾಮ ಅವರ ನೇತೃತ್ವದ ತಂಡ ಪಟ್ಟಣದಲ್ಲಿ ಕಾರ್ಯಚರಣೆ ನಡೆಸಿದರು. ಈ ವೇಳೆ ಹೆಚ್ಚು ಶಬ್ದ ಮಾಡುವ ಬೈಕಿನ ಸೈಲೆನ್ಸರ್‌ನ್ನು ತೆಗೆಸಿದ್ದಾರೆ. ಅಲ್ಲದೆ ಹೆಲೈಟ್, ಬೈಕ್ ದಾಖಲೆ ಇಲ್ಲದೆ ಹಾಗೂ ಲೈಸನ್ಸ್ ಇಲ್ಲದೆ ಬೈಕ್ ಓಡಿಸುತ್ತಿದ್ದ ಬೈಕ್ ಸವಾರರನ್ನು ಹಿಡಿದು ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ. ಒಟ್ಟು ಐವತ್ತು ಪ್ರಕರಣವನ್ನು ದಾಖಲಿಸಿಕೊಂಡು 25 ಸಾವಿರ ರೂಪಾಯಿ ದಂಡ ಹಾಕಿದ್ದಾರೆ. ಈ ವೇಳೆ ಎಎಸೈ ರಾಜೇಶ ನಾಯ್ಕ, ಸೋಮಶೇಖರ ಮೈತ್ರಿ. ಲೋಕೇಶ ಮೇತ್ರಾ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಇದ್ದರು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version