ಎಟಿಎಂ ಕಾರ್ಡ್ ಬದಲಾಯಿಸಿ ವಂಚನೆ : ದಾಖಲಾಯಿತು ಮತ್ತೊಂದು ಪೊಲೀಸ್ ಪ್ರಕರಣ
ಅಪರಿಚಿತರ ಮಾತಿಗೆ ಮರುಳಾಗಿ ವಂಚನೆಗೊಳಗಾಗುವ ಮುನ್ನ ಗ್ರಾಹಕರೇ ಎಚ್ಚರ ಎಚ್ಚರ ?
ಅಂಕೋಲಾ: ಎಟಿಎಂ ಗೆ ಹಣ ವಿತ್ ಡ್ರಾ ಮಾಡಲು ಬಂದಿದ್ದ ಮಹಿಳೆ ಮತ್ತು ಆತನ ಸಂಬಂಧಿ ಓರ್ವರಿಗೆ ,ಬ್ಯಾಂಕಿಂಗ್ ವ್ಯವಹಾರದಲ್ಲಿ ಸಹಾಯ ಮಾಡಿದಂತೆ ನಟಿಸಿ ,ಅವರ ಅರಿವಿಗೆ ಬಾರದಂತೆ ಎಟಿಎಂ ಕಾರ್ಡ್ ಬದಲಾಯಿಸಿ ನಂತರ ಗ್ರಾಹಕರ ಖಾತೆಯಿಂದ ಹಣ ಲಪಟಾಯಿಸಿದ ಘಟನೆ ಪಟ್ಟಣದ ಕೆ.ಸಿ.ರಸ್ತೆಯಲ್ಲಿರುವ ಎಸ್. ಬಿ.ಐ ಎ.ಟಿ.ಎಂ ನಲ್ಲಿ ನಡೆದಿದೆ.
ಬಸ್ ನಿಲ್ದಾಣದಲ್ಲಿ ಹೆಚ್ಚುತ್ತಿದೆ ಪಿಕ್ ಪಾಕೆಟ್? ಅತಿಥಿ ಉಪನ್ಯಾಸಕನ ಪರ್ಸ್ ನಾಪತ್ತೆ !
ತಾಲೂಕಿನ ಹಟ್ಟಿಕೇರಿ ನಿವಾಸಿ ಸುರೇಖಾ ಎಸ್ ನಾಯ್ಕ ಎನ್ನುವವರೇ ವಂಚನೆಗೊಳಗಾಗಿ ಹಣ ಕಳೆದುಕೊಂಡ ಮಹಿಳೆಯಾಗಿದ್ದಾಳೆ. ಅಕ್ಟೋಬರ್ 22 ರಂದು ತನ್ನ ಮಾವನ ಮಗ ಕೇಣಿ ನಿವಾಸಿ ರಾಜು ನಾರಾಯಣ ನಾಯ್ಕ ಎನ್ನುವವರ ಜೊತೆಯಲ್ಲಿ ಪಟ್ಟಣದ ಕೆಸಿ ರಸ್ತೆಯಲ್ಲಿ ಯವ ಭಾರತೀಯ ಸ್ಟೇಟ್ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಬಂದು ತಮ್ಮ ಎಟಿಎಮ್ ಕಾರ್ಡನ್ನು ಬಳಸಿ ಹಣ ತೆಗೆದಿದ್ದರು. ನಂತರ ಅದರ ಪಕ್ಕದಲ್ಲಿಯೇ ಇರುವ ಪ್ರಿಂಟರ್ ಮಷಿನಿಗೆ ಪಾಸ್ ಬುಕ್ ಹಾಕಿ ಪ್ರಿಂಟ್ ಮಾಡಿಸಲು ಮುಂದಾದಾಗ ,ಅಲ್ಲೇ ಪಕ್ಕದಲ್ಲಿ ನಿಂತಿದ್ದ ಅಪರಿಚಿತ ವ್ಯಕ್ತಿಯೋರ್ವ ಪಾಸ ಬುಕ್ ಎಂಟ್ರಿ ಮಾಡಿಕೊಡಲು ಸಹಾಯ ಮಾಡುವ ನೆಪದಲ್ಲಿ ಪರಿಚಯಿಸಿಕೊಂಡು , ಇದೇ ವೇಳೆ ಮಹಿಳೆಯಿಂದ ಎ.ಟಿ.ಎಂ ಕಾರ್ಡ್ ತೆಗೆದುಕೊಂಡು , ಅವಳ ಅರಿವಿಗೆ ಬಾರದಂತೆ ಇನ್ನೊಂದು ಕಾರ್ಡ್ (ಬದಲಾಯಿಸಿ ) ಕೊಟ್ಟಿದ್ದರು ಎನ್ನಲಾಗಿದೆ.
ಅಕ್ಟೋಬರ್ 23 ರಂದು ಆ ಮಹಿಳೆ ಪುನಃ ಬ್ಯಾಂಕಿಗೆ ಬಂದು ಚೆಕ್ ಮೂಲಕ ಹಣ ಪಡೆಯಲು ಹೋದಾಗ ಬ್ಯಾಂಕ್ ಸಿಬ್ಬಂದಿ ನಿಮ್ಮ ಖಾತೆಯಲ್ಲಿ ಹಣ ಇಲ್ಲ ಎಂದು ತಿಳಿಸಿದ್ದು , ಈ ವೇಳೆ ಗಾಬರಿಗೊಂಡ ಮಹಿಳೆ ನನ್ನ ಖಾತೆಯಲ್ಲಿ 40000 ರೂ ಇದೆ ಎಂದು ತಿಳಿಸಿದಾಗ ,ಬ್ಯಾಂಕ್ ಸಿಬ್ಬಂದಿ ಗ್ರಾಹಕರ ವಹಿವಾಟು ಪರಿಶೀಲಿಸಿದಾಗ , ಎ.ಟಿ.ಎಂ ಕಾರ್ಡ್ ಬಳಸಿಯೇ 40 ಸಾವಿರ ರೂಪಾಯಿ ಹಣ ತೆಗೆದಿರುವ ಕುರಿತು ತಿಳಿಸಿದ್ದಾರೆ.
ಇದರಿಂದ ಮಹಿಳೆ ತಾನು ವಂಚನೆಗೊಳಗಾಗಿರುವುದು ತಿಳಿದು , ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಕರಣ ದಾಖಲಿಸಿಕೊಂಡ ಅಂಕೋಲಾ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮರದಲ್ಲಿ ದಾಖಲಾಗಿರುವ ಸಾಧ್ಯತೆ ಕೇಳಿ ಬಂದಿದ್ದು ,ಪೊಲೀಸರು ಯಾವಾಗ ಪ್ರಕರಣವನ್ನು ಭೇದಿಸುತ್ತಾರೆ ಕಾದುನೋಡಬೇಕಿದೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಕಣಕಣೇಶ್ವರ ದೇವಸ್ಥಾನದ ಪಕ್ಕದ ಎಟಿಎಂ ಕೇಂದ್ರ ಒಂದರಲ್ಲಿ ,ಇದೇ ರೀತಿ ಅಪರಿಚಿತ ವ್ಯಕ್ತಿಯೋರ್ವ ಕೆಇಬಿ ನಿವೃತ್ತ ನೌಕರನಿಗೆ ನಯವಂಚಕ ಮಾತುಗಳ ಮೂಲಕ ಲಕ್ಷ್ಯ ಬೇರೆಡೆ ಸೆಳೆದು ,ಅವರ ಕಾರ್ಡ್ ಬದಲಿಸಿ ಬೇರೊಂದು ಕಾರ್ಡ ನೀಡಿ ,ನಂತರ ಅಸಲಿ ಕಾರ್ಡಿನಿಂದ ಹಣ ಎಗರಿಸಿದ್ದ.
ಚುರುಕಿನ ತನಿಖೆ ಕೈಗೊಂಡಿದ್ದ ಅಂಕೋಲಾ ಪೋಲಿಸರು ,ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆದು ಕಾನೂನು ಕ್ರಮ ಮುಂದುವರಿಸಿದ್ದರು. ಅಲ್ಲದೇ ಜನಜಾಗೃತಿ ಉದ್ದೇಶದಿಂದ ಆಗಾಗ ಕೆಲ ಎಟಿಎಂ ಗಳಿಗೆ ತೆರಳಿ ,ಜನರಿಗೆ ಎಚ್ಚರಿಕೆಯ ಸಂದೇಶ ನೀಡುತ್ತಿದ್ದದ್ದನ್ನು ಸ್ಮರಿಸಬಹುದಾಗಿದೆ. ಅಪರಿಚಿತರ ಮಾತಿಗೆ ಮರುಳಾಗಿ ಸಹಾಯ ಪಡೆಯುವ ಮುನ್ನ ಬ್ಯಾಂಕ್ ಗ್ರಾಹಕರು ,ಸ್ವಯಂ ಜಾಗ್ರತಿ ಪಡೆದುಕೊಳ್ಳಬೇಕಿದೆ.ಅತ್ಯವಶ್ಯ ಸಂದರ್ಭದಲ್ಲಿ ನಿರ್ದಿಷ್ಟ ಪಟ್ಟ ಬ್ಯಾಂಕ್ ಸಿಬ್ಬಂದಿಗಳೊಂದಿಗೆ ಮಾತ್ರ ಮುಕ್ತ ಚರ್ಚೆ ಮಾಡಿ ,ತಮ್ಮ ಖಾತೆಗೆ ಕನ್ನ ಬೀಳದಂತೆ ,ಅಥವಾ ತಾವು ವಂಚನೆಗೊಳಗಾಗದಂತೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ