ಭಟ್ಕಳ : ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುವುದರೊಂದಿಗೆ ಪಂಚಾಯತ್ ನಲ್ಲಿ ಕಾರ್ಯನಿರ್ವಹಿಸುವ ವಾಹನಗಳಿಗೆ ಪೂಜೆ ಕಾರ್ಯವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಭಾಸ್ಕರ್ ಧೈಮನೆ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾದ ಬಸ್ ತಂಗುದಾಣವನ್ನು ಲೋಕಾರ್ಪಣೆಗೊಳಿಸಿದರು.
ಹೆಸರಾಂತ ಉದ್ಯಮಿ ಈರಪ್ಪ ನಾಯ್ಕ ಗರ್ಡಿಕರ್ ಅವರಿಂದ ದೀಪಾವಳಿ ಶುಭಸಂದರ್ಭದಲ್ಲಿ ಕಚೇರಿ ಮತ್ತು ವಾಹನಗಳಿಗೆ ಪೂಜೆ
ಗ್ರಾಮ ಪಂಚಾಯತ್ ಹದಿನೈದನೇ ಹಣಕಾಸು ಯೋಜನೆಯಡಿ ಸುಮಾರು ಐದು ಲಕ್ಷ ರೂಪಾಯಿಗಳ ಅನುದಾನವನ್ನು ವ್ಯಯಿಸಿ ಸುಂದರ ಸುಸಜ್ಜಿತ ಬಸ್ ತಂಗುದಾಣವನ್ನು ನಿರ್ಮಿಸಲಾಗಿದ್ದು. ಈ ಬಸ್ ತಂಗುದಾಣವನ್ನು ಸಂಪೂರ್ಣ ಸ್ಟೀಲ್ ಪರಿಕರಗಳನ್ನು ಉಪಯೋಗಿಸಿಲಾಗಿದೆ. ಬಸ್ ತಂಗುದಾಣ ಒಳಗಡೆ ಜಿಲ್ಲೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆರಿದ ಶ್ರೀ ರಾಮಕೃಷ್ಣ ಹೆಗಡೆ, ಶಿಕ್ಷಣ ಕ್ಷೇತ್ರಕ್ಕೆ ಮಹನೀಯ ಕೊಡುಗೆ ನೀಡಿದ ದಿವಂಗತ ದಿನಕರ ದೇಸಾಯಿ, ಪದ್ಮಶ್ರೀ ಪ್ರಶಸ್ತಿ ವಿಜೇತ ಶ್ರೀಮತಿ ಸುಕ್ರಿ ಬೊಮ್ಮು ಗೌಡ, ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಪರಮವೀರ ಚಕ್ರ ಪದಕವನ್ನು ಪಡೆದಂತಹ ಮೇಜರ್ ರಾಮ ರಾಘೋಬಾ ರಾಣೆ, ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸ್ಥಳೀಯರು ಶ್ರೀ ವೆಂಕಟೇಶ ಮೊಗೇರ, ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದಂತಹ ಸ್ಥಳೀಯ ದಿವಂಗತ ಶಂಕರ್ ನಾಗ್, ಯಕ್ಷಗಾನ ಲೋಕದ ಮೇರು ಪ್ರತಿಭೆ ಚಿಟ್ಟಾಣಿ ರಾಮಚಂದ್ರ ಹೆಗಡೆ ಇವರುಗಳ ಭಾವಚಿತ್ರವನ್ನು ಮುದ್ರಿಸಿದ್ದು ವಿಶೇಷವಾಗಿದೆ.
ಮತ್ತೊಂದು ಕಡೆಯಲ್ಲಿ ಶಿರಾಲಿಯ ಹಣೆಕೋಟೆ ಹನುಮಂತ ದೇವಸ್ಥಾನ, ಚಿತ್ರಾಪುರದ ಭವಾನಿ ಶಂಕರ ಮಠ, ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶಿರಾಲಿ ಹಾದಿ ಮಾಸ್ತಿ ದೇವಸ್ಥಾನ, ಕಡವಿನ ಕಟ್ಟೆ ಅಣೆಕಟ್ಟು, ಅಳ್ವೆಕೋಡಿಯ ಬ್ರೇಕ್ ವಾಟರ್ ಗಳ ಚಿತ್ರವನ್ನು ಮುದ್ರಿಸಲಾಗಿದ್ದು ವಿಶೇಷವಾಗಿದೆ.
ಈ ಸಂದರ್ಭದಲ್ಲಿ ಶಿರಾಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಅಂತೋನಿ ಡಿಕೊಸ್ಥ ವೆಂಕಟೇಶ ನಾಯ್ಕ, ರೇವತಿ ನಾಯ್ಕ, ಪ್ರಮುಖರಾದ ಶ್ರೀನಿವಾಸ್ ಮಹಾಲೆ, ರಾಮನಾಥ್, ಕೇಶವ ನಾಯ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ, ಜ್ಯೋತಿ ನಾಯ್ಕ ಮತ್ತಿತರರು ಇದ್ದರು.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ