ರಸ್ತೆ ಅಪಘಾತದಿಂದ ಬೆಳಕಿಗೆ ಬಂತೇ ಅಕ್ರಮ ಜಾನುವಾರು ಸಾಗಾಟ ? ಗೋಪೂಜೆ ದಿನದಂದೇ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಸುಮಾರು 15 ಜಾನುವಾರುಗಳ ರಕ್ಷಣೆ
ಅಂಕೋಲಾ : ವಾಹನ ಒಂದು ಅಪಘಾತಕ್ಕೀಡಾಗುವ ಮೂಲಕ ಅಕ್ರಮ ಜಾನುವಾರು ಸಾಗಾಟ ಬೆಳಕಿಗೆ ಬಂದಂತಿದೆ. ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಬಾಳೇಗುಳಿ ಸಮೀಪ ಕ್ಯಾಂಟರ್ ವಾಹನ ಒಂದು ಅಪಘಾತಗೊಂಡಿದ್ದು ,ವಾಹನದ ಮುಂಭಾಗ ನುಗ್ಗುಜ್ಜಾಗಿದ್ದು ,ಚಾಲಕ ವಾಹನ ಬಿಟ್ಟು ಓಡಿ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ.
ವಾಹನದಲ್ಲಿ 2 ಎತ್ತುಗಳು , 4 ಕೋಣಗಳು ಹಾಗೂ 9 ಎಮ್ಮೆಗಳು ಸೇರಿ ಸೇರಿ ಸುಮಾರು 15 ಜಾನುವಾರಗಳನ್ನು ಹಿಂಸಾತ್ಮಕವಾಗಿ ಮತ್ತು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಪಿಎಸ್ಐಗಳಾದ ಉದ್ದಪ್ಪ ಧರೆಪ್ಪನವರ ,ಸುನಿಲ್ ಹುಲ್ಲೊಳ್ಳಿ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲಿಸಿದ್ದಾರೆ. ಜಾನುವಾರುಗಳ ಸಮೇತ ವಾಹನವನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಕೈಕೊಂಡು ಕಾನೂನು ಕ್ರಮ ಮುಂದುವರಿಸಿದ್ದಾರೆ.
ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗರ ರಕ್ಷಣೆ
ನಂತರ ವಾಹನದಲ್ಲಿದ್ದ ಜಾನುವಾರುಗಳನ್ನು ನೆರಳಿನ ಪ್ರದೇಶದಲ್ಲಿಟ್ಟು ,ಅವುಗಳಿಗೆ ನೀರು ಮತ್ತು ಮೇವನ್ನು ನೀಡಿದ ಸ್ಥಳೀಯ ಗೋ ಪ್ರೇಮಿಗಳ ತಂಡದ ಸದಸ್ಯರು ,ಗೋಪೂಜೆಯ ದಿನದಂದೇ ಈ ರೀತಿ ಹಿಂಸಾತ್ಮಕವಾಗಿ ಗೋ ಸಾಗಾಟ ನಡೆಸುತ್ತಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ .
ಈ ಕುರಿತು ಪ್ರತಿಕ್ರಿಯಿಸಿದ ನಿತ್ಯಾನಂದ ನಾಯ್ಕ , ಈ ಹಿಂದಿನಿಂದಲೂ ತಾಲೂಕಿನ ಅವರ್ಸಾ ಮತ್ತಿತರಡೆ ಜಾನುವಾರು ಸಾಗಾಟದ ಹೆಸರಿನಲ್ಲಿ ಅಕ್ರಮ ದಂಧೆ ನಡೆಯುತ್ತಿದ್ದು ,ಪರ್ಮಿಟ್ ದುರ್ಬಳಕೆ ಸಂಶಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಕ್ರಮ ದಂಧೆ ಸಾಬೀತಾದಲ್ಲಿ ಪೊಲೀಸರು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಇಲ್ಲದಿದ್ದರೆ ದಿನಗಳಲ್ಲಿ ಓ ಪ್ರೇಮಿಗಳು ಮತ್ತು ಸಾರ್ವಜನಿಕರು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.
ಎರಡು ಮೂರು ಜಾನುವಾರುಗಳಿಗೆ ಗಾಯ ನೋವುಗಳಾಗಿದ್ದು , ಪಶು ವೈದ್ಯಕೀಯ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳ ತಂಡ ಸ್ಥಳಕ್ಕೆ ಆಗಮಿಸಿ ಉಪಚಾರ ನೀಡಿದ್ದಾರೆ.ಸ್ಥಳೀಯ ಕೋಟೆವಾಡ ನಿವಾಸಿ ಉದಯ ನಾಯ್ಕ ,ಕನಸಿ ಗದ್ದೆಯ ಬೊಮ್ಮಯ್ಯ ನಾಯ್ಕ , ಅನಿಲ ಮಹಾಲೆ , ಹಟ್ಟಿಕೇರಿಯ ಮಂಗೇಶ್ ನಾಯ್ಕ್ , ಬಡಗೇರಿಯ ಸುನೀಲ ಮಾಣು ಗೌಡ ,ಆನಂದ ಗೌಡ ,ಪ್ರಕಾಶ್ ಗೌಡ ಹಾಗೂ ಇತರಡೆಯ ಕೆಲ ಗೋ ಪ್ರೇಮಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ,ಗೋವುಗಳಿಗೆ ಆರೈಕೆ ಮಾಡಲು ಪೊಲೀಸ್ ಇಲಾಖೆಗೆ ಸಹಕರಿಸಿದರು. ಜಾನುವಾರುಗಳನ್ನು ಕದ್ದು ಸಾಗಿಸಲಾಗುತ್ತಿತ್ತೇ ? ಮಾಂಸಕ್ಕಾಗಿ ವಧಾಲಯಕ್ಕೆ ( ಕಸಾಯಿ ಖಾನೆಗೆ ) ಸಾ ಗಿಸಲಾಗುತ್ತಿತ್ತೇ ? ಪರಾರಿ ಯಾದ ವಾಹನ ಚಾಲಕನಾರು ? ಜಾನುವಾರುಗಳನ್ನು ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿತ್ತು? ಇದು ಅಕ್ರಮ ದಂಧೆಯೇ? ಹಾಗಾದರೆ ಯಾರೆಲ್ಲ ಶಾಮೀಲ ಇರಬಹುದು ಎಂಬಿತ್ಯಾದಿ ಪ್ರಶ್ನೆಗಳು ಗೋ ಪ್ರೇಮಿಗಳ ಮನದಲ್ಲಿ ಮೂಡಿ ಬಂದತಿದ್ದು , ಈ ಕುರಿತು ಪೊಲೀಸ್ ತನಿಖೆಯಿಂದ ನಿಖರ ಮಾಹಿತಿಗಳು ತಿಳಿದು ಬರಬೇಕಿದೆ.
ಒಂದೊಮ್ಮೆ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ದೃಢಪಟ್ಟಲ್ಲಿ ಅವುಗಳನ್ನು ಗೋಶಾಲೆಗೆ ಕಳಿಸಿಕೊಡುವುದು ಒಳ್ಳೆಯ ವಿಚಾರವೇ ಆದರೂ , ಸ್ಥಳೀಯವಾಗಿ ಪ್ರೀತಿಯಿಂದ ಸಾಕಿ-ಸಲಹುವ ರೈತಾಪಿ ವರ್ಗಕ್ಕೆ ಕೆಲ ಜಾನುವಾರುಗಳನ್ನು ನೀಡಿದ್ದರೆ ಒಳ್ಳೆಯದಿತ್ತು ಎನ್ನುವ ಅಭಿಪ್ರಾಯವು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ