ಕುಮಟಾ: ಮಕ್ಕಳ ದಿನಾಚರಣೆ ಅಂಗವಾಗಿ ದಿವಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ನುಡಿಹಬ್ಬ ಕಾರ್ಯಕ್ರಮವನ್ನು ಕನ್ನಡ ರಾಜ್ಯೋತ್ಸವ ಸಮಿತಿ ವತಿಯಿಂದ ಅತ್ಯಂತ ಅದ್ದೂರಿ ಹಾಗೂ ಸಂಭ್ರಮದಿoದ ಆಚರಿಸಲಾಯಿತು. ಬಿಜೆಪಿಯ ಶಿಕ್ಷಣ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕರಾದ ಎಂ ಜಿ ಭಟ್ಟರವರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ ಕನ್ನಡ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು ಹಾಗೂ ಅತ್ಯಂತ ಸುಂದರ ಭಾಷೆಯೂ ಹೌದು. ಕನ್ನಡವನ್ನು ಲಿಪಿಗಳ ರಾಣಿ ಎಂದು ವಿನೋದ ಬಾವೇಯವರು ಹೊಗಳಿದ್ದಾರೆ.
ಅತ್ಯಂತ ಹೆಚ್ಚು ಅಂದರೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಕೂಡ ಕನ್ನಡಕ್ಕೆ. ಹಾಗಾಗಿ ಅತ್ಯಂತ ಸುಂದರ ಭಾಷೆ ಆದ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಾಗಿದೆ. ಇದು ನಮ್ಮ ನಿಮ್ಮೆಲ್ಲರ ಹಂಬಲವಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಒಂದು ಸ್ಮಾರ್ಟ್ ಟಿವಿಯನ್ನುಶಾಲೆಗೆ ಕೊಡುಗೆಯಾಗಿ ನೀಡಲಾಯಿತು. ನಂತರ ಶಾಲಾ ಮಕ್ಕಳಿಂದ ಮನೋರಂಜನ ಕಾರ್ಯಕ್ರಮ ಹಾಗೂ ಹಾಲಕ್ಕಿ ಸಮಾಜದ ಸುಗ್ಗಿ ನೃತ್ಯ ಕೂಡ ಗಮನ ಸೆಳೆಯಿತು.
ವಿಸ್ಮಯ ನ್ಯೂಸ್, ಕುಮಟಾ