ಕುಮಟಾದ ಐಎಂಎ ವೈದ್ಯರು ಮತ್ತು ಪದಾಧಿಕಾರಿಗಳ ಸಭೆ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತುರ್ತು ಅಗತ್ಯತೆ ಬಗ್ಗೆ ಸಹಮತ
ಕುಮಟಾ: ಜಿಲ್ಲೆಗೆ ಖಾಸಗಿ ಸಹಭಾಗಿತ್ವದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವ ನಿಟ್ಟಿನಲ್ಲಿ ಕುಮಟಾದ ಐಎಂಎ ವೈದ್ಯರು ಮತ್ತು ಪದಾಧಿಕಾರಿಗಳ ಜತೆ ಹೋರಾಟದ ನೇತೃತ್ವ ವಹಿಸಿದ್ದ ಡಾ. ಜಿ.ಜಿ. ಹಗಡೆ ಅವರು ಸಭೆ ನಡೆಸಿದರು. ಸಭೆಯಲ್ಲಿ ಪಾಲ್ಗೊಂಡ ಎಲ್ಲ ವೈದ್ಯರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯ ತುರ್ತು ಅಗತ್ಯತೆ ಬಗ್ಗೆ ಸಹಮತ ವ್ಯಕ್ತಪಡಿಸಿದರು. ಅಲ್ಲದೇ ಡಾ.ಜಿ.ಜಿ.ಹೆಗಡೆ ಅವರ ಈ ನ್ಯಾಯಯುತ ಹೋರಾಟಕ್ಕೆ ಸರ್ವ ರೀತಿಯ ಸಹಕಾರ, ಬೆಂಬಲ ನೀಡುವುದಾಗಿ ಒಕ್ಕೊರಲಿನಿಂದ ಘೋಷಿಸಿದರು.
ಸರಕಾರವನ್ನು ನಂಬಿ ಕುಳಿತರೆ ಆಗುವ ಕೆಲಸವಲ್ಲ. ತಾಳ್ಮೆ ಪರೀಕ್ಷೆ ಸಾಕು. ಇನ್ನೇನಿದ್ದರೂ ಭಗೀರಥ ಯತ್ನವೇ ದಾರಿ. ಆ ನಿಟ್ಟಿನಲ್ಲಿ ಎಲ್ಲರೂ ಡಾ. ಜಿ.ಜಿ.ಹೆಗಡೆ ಅವರ ಕೈ ಬಲಪಡಿಸೋಣ. ಅವರು ಹಿರಿಯರಿದ್ದಾರೆ. ಜಿಲ್ಲೆಯ ಆರೋಗ್ಯ ಕ್ಷೇತ್ರದ ಸಮಗ್ರ ಚಿತ್ರಣ ಅವರಿಗಿದೆ. ಜತೆಗೆ ದೂರದೃಷ್ಟಿಯೂ ಇದೆ. ಅವರ ಮುಂದಾಳತ್ವದಲ್ಲಿ ಸಾಗೋಣ. ಗುರಿ ತಲುಪುವವರೆಗೆ ವಿಶ್ರಮಿಸುವುದು ಬೇಡ. ಇದಕ್ಕೊಂದು ಆಂದೋಲನ ರೂಪ ಕೊಟ್ಟು ಯಶಸ್ಸು ಪಡೆಯೋಣ. ಆ ಮೂಲಕ ಜಿಲ್ಲೆಯ ಜನತೆಯ ಬಹುದಿನದ ಕನಸು ನನಸಾಗಿಸೋಣ. ಅವರ ಸಮಸ್ಯೆಗೆ ಇತಿಶ್ರೀ ಹಾಡೋಣ ಎಂಬ ಸದಭಿಪ್ರಾಯ ಸರ್ವಸಮ್ಮತ ಅಭಿಪ್ರಾಯ ವ್ಯಕ್ತವಾಯಿತು.
ಐಎಂಎ ಅಧ್ಯಕ್ಷೆ ಡಾ.ರೂಪಾಲಿ ಮಂಕಿಕರ್, ಡಾ ಶಶಾಂಕ್ ಮಂಕಿಕರ್, ಡಾ ಶ್ರೀನಿವಾಸ್ ನಾಯಕ್, ಡಾ ಸಚ್ಚಿದಾನಂದ ನಾಯಕ್, ಡಾ ವಿ. ಆರ್. ನಾಯಕ, ಡಾ ಸತೀಶ್ ಪ್ರಭು, ಡಾ ವಿಶ್ವಾಸ್ ನಾಯಕ್, ಡಾ ರಾಮಮೂರ್ತಿ, ಡಾ ಗಣೇಶ ಭಟ್, ಡಾ ಪ್ರಕಾಶ್ ಭಟ್, ಡಾ ಪ್ರಸನ್ನ ನಾಯಕ್ , ಡಾ ಚೈತನ್ಯ ಸಜೆಕನಿ ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್, ಕುಮಟಾ