ಅಣ್ಣನಿಂದಲೇ ತಮ್ಮನ ಹತ್ಯೆ: ಕೊಲೆ ಮಾಡಿ ಶವದ ಮುಂದೆ ಬೀಡಿ ಸೇದುತ್ತಾ ಕುಳಿತ ಆರೋಪಿ

ಹೊನ್ನಾವರ: ಒಡಹುಟ್ಟಿದ ಅಣ್ಣನೇ ತಮ್ಮನನ್ನು ಕೊಲೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಂಡಿಬೈಲ್ ಹೆಬೈಲ್‌ನಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿ ಈ ಘಟನೆ ನಡೆದಿದ್ದು, ಸುಬ್ರಾಯ ಹನುಮಂತ ನಾಯ್ಕ ಕೊಲೆ‌ಮಾಡಿದ ಆರೋಪಿ. ಈತ ತನ್ನ ಸಹೋದರ ನಾಗೇಶ್ ನಾಯ್ಕ ನನ್ನು ಹತ್ಯೆ ಮಾಡಿದ್ದಾನೆ.

ಅಣ್ಣ ತಮ್ಮನ ನಡುವೆ ಈ ಹಿಂದೆ ಸಹ ಗಲಾಟೆ ಉಂಟಾಗಿತ್ತು ಎನ್ನಲಾಗಿದೆ‌. ಕಳೆದ 2-3 ತಿಂಗಳ ಹಿಂದೆ ತಮ್ಮನಾದ ನಾಗೇಶ ಹನುಮಂತ ನಾಯ್ಕ ಇವರು ಅಣ್ಣನಾದ ಸುಬ್ರಾಯ ಹನುಮಂತ ನಾಯ್ಕ ಇವರ ಬಲ ಕಾಲಿಗೆ ನೋವುಪಡಿಸಿದ್ದ ಎನ್ನಲಾಗಿದೆ. ಇದರಿಂದ ಸಿಟ್ಟಿನಲ್ಲಿದ್ದ  ಸುಬ್ರಾಯ ಹನುಮಂತ ನಾಯ್ಕ, ಈತನು ತನ್ನ ತಮ್ಮ ನಾಗೇಶ ಹನುಮಂತ ನಾಯ್ಕ ಇವರನ್ನು ರಾತ್ರಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್ ವಿವೇಕ್ ಶೇಟ್ ಹೊನ್ನಾವರ

Exit mobile version