- ಪರವಾನಗೆ ಇಲ್ಲದೆ ಶ್ರೀಗಂಧ ಸಾಗಾಟ
- 1 ಕೆಜಿ 300 ಗ್ರಾಂ ತೂಕದ ಶ್ರೀಗಂಧದ ತುಂಡುಗಳು ವಶಕ್ಕೆ
- ಶಿರಸಿ ಪೊಲೀಸರ ಕಾರ್ಯಾಚರಣೆ
ಶಿರಸಿ: ತಾಲೂಕಿನ ಕರಿಗುಂಡಿ ರಸ್ತೆಯ ಲಿಡ್ಕರ್ ಕಾಲೋನಿ ಬಳಿ ಬೈಕಿನಲ್ಲಿ ಶ್ರೀಗಂಧ ಸಾಗಿಸುತ್ತಿದ್ದ ಇಬ್ಬರನ್ನು ಶಿರಸಿ ಮಾರುಕಟ್ಟೆ ಪೋಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಇರ್ಷಾದ್ ಖಾದರ್ ಸಾಬ ವಡಗೇರಿ ಹಾಗು ಯಾಸೀನ್ ಅಲಿಯಾಸ್ ಮುನ್ನಾ ಹಸನಸಾಬ ಬಸಳೆಕೊಪ್ಪ ಅಕ್ರಮವಾಗಿ 1 ಕೆಜಿ 300 ಗ್ರಾಂ ತೂಕದ ಸುಮಾರು 26,000 ಮೌಲ್ಯದ ಶ್ರೀಗಂಧ ಮರದ ತುಂಡುಗಳನ್ನು ಯಾವುದೇ ಪರವಾನಿಗೆಯಿಲ್ಲದೆ ಕಳ್ಳತನದಿಂದ ಮಾರಾಟ ಮಾಡಲು ಸಾಗಿಸುತ್ತಿರುವಾಗ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ ಇನ್ನೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ.
ಶಿವಪ್ರಕಾಶ್ ದೇವರಾಜು ಪೊಲೀಸ್ ಅಧೀಕ್ಷಕರು ಉ.ಕ ಕಾರವಾರ, ಬದ್ರಿನಾಥ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉ.ಕ ಕಾರವಾರ, ಗೋಪಾಲಕೃಷ್ಣ ನಾಯಕ ಡಿ.ಎಸ್.ಪಿ ಶಿರಸಿ ಉಪವಿಭಾಗ, ಬಿ.ಯು ಪ್ರದೀಪ್ ವೃತ್ತ ನಿರೀಕ್ಷಕರು ಶಿರಸಿ ರವರ ಮಾರ್ಗದರ್ಶನದಲ್ಲಿ ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪಿ.ಎಸ್.ಐ ನಾಗಪ್ಪ ನೇತೃತ್ವದ ಎಎಸ್ಐ ಶಿವಕುಮಾರ ಸಿಬ್ಬಂದಿಗಳಾದ ಚಿದಾನಂದ ನಾಯ್ಕ, ಇಸ್ಮಾಯೀಲ್ ಕೋಣನಕೇರಿ, ಹನಮಂತ ಮಾಕಾಪುರ ಮೋಹನ ನಾಯ್ಕ ರವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.
ವಿಸ್ಮಯ ನ್ಯೂಸ್, ಶಿರಸಿ
ಬೇಕಾಗಿದ್ದಾರೆ
ಪ್ರತಿಷ್ಠಿತ ಕಂಪೆನಿಗೆ ವಿತರಕರು ಬೇಕಾಗಿದ್ದಾರೆ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಜಿಲ್ಲೆ & ತಾಲೂಕಾವಾರು ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568