Uttara Kannada
Trending

ಸೊಳ್ಳೆ ಬತ್ತಿಯಿಂದ ಸಂಭವಿಸಿತು ಅನಾಹುತ

ಭಟ್ಕಳದಲ್ಲಿ ಪುಟ್ ಪಾತ್ ಮೇಲಿನ ಹಣ್ಣಿನಂಗಡಿಗೆ ಆಕಸ್ಮಿಕ ಬೆಂಕಿ

[sliders_pack id=”1487″]

ಭಟ್ಕಳ : ಪಟ್ಟಣದ ಮುಖ್ಯರಸ್ತೆ ಬದಿಯ ಹಣ್ಣಿನಂಗಡಿಗೆ ಆಕಸ್ಮಿಕ  ಬೆಂಕಿ ಬಿದ್ದ ಘಟನೆ  ಗುರುವಾರ‌ ರಾತ್ರಿ ಸಂಭವಿಸಿದೆ.

ಇದು ಅರ್ಬನ್ ಬ್ಯಾಂಕ್ ಎದುರಿಗಿರುವ ಗುಳ್ಮಿಯ ಮೆಹಬೂಬ್ ಅಲಿ ಎಂಬುವವರಿಗೆ ಸೇರಿದ ಹಣ್ಣಿನಂಗಡಿಯಾಗಿದೆ. ರಾತ್ರಿ ಸೊಳ್ಳೆ ಕಾಟ ತಪ್ಪಿಸಲು ಬತ್ತಿಯನ್ನ ಹಚ್ಚಿದ್ದರೆನ್ನಲಾಗಿದೆ. ಈ ವೇಳೆ ಅಂಗಡಿಯ ತಾಡಪತ್ರಿಗೆ ಬೆಂಕಿ ತಗುಲಿದ್ದರಿಂದ ಇಡೀ ಅಂಗಡಿಗೆ ಬೆಂಕಿ ಆವರಿಸಿಕೊಂಡಿದೆ. ಪರಿಣಾಮವಾಗಿ ಅಂಗಡಿಯಲ್ಲಿದ್ದ ವಿವಿಧ ತರಹದ ಹಣ್ಣು, ಹಣ್ಣಿನ ಬಾಕ್ಸ್ ಸುಟ್ಟು ಹೋಗಿದೆ.

ಅಗ್ನಿಶಾಮಕ ದಳ ಸಿಬ್ಬಂದಿಗಳು ಮತ್ತು ಹೆಸ್ಕಾಂ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸುವ  ಪ್ರಯತ್ನ ಮಾಡಿದರು. ಘಟನಾ ಸಂದರ್ಭದಲ್ಲಿ ಸಾರ್ವಜನಿಕರು ಕೂಡ ಅಳಿದುಳಿದ ಹಣ್ಣುಗಳನ್ನ ಆರಿಸುವಲ್ಲಿ ನೆರವಾದರು. ಅಗ್ನಿ ಅನಾಹುತದಲ್ಲಿ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಹಾನಿಯಾಗಿವೆ. 

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ,ಭಟ್ಕಳ

Related Articles

Back to top button