ಮಾಹಿತಿ
Trending

ಜಿಲ್ಲೆಯಲ್ಲಿಂದು 206 ಮಂದಿಗೆ ಕರೊನಾ ಸೋಂಕು ದೃಢ

  • ಜಿಲ್ಲೆಯಾದ್ಯಂತ ಎಂಟು ಮಂದಿ ಸಾವು
  • 116 ಮಂದಿ ಗುಣಮುಖರಾಗಿ ಬಿಡುಗಡೆ
  • ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,542ಕ್ಕೆ ಏರಿಕೆ
  • ಅಂಕೋಲಾದಲ್ಲಿಂದು 8 ಕೇಸ್ : ಗುಣಮುಖ 34
[sliders_pack id=”1487″]

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 206 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಕಾರವಾರದಲ್ಲಿ 35, ಅಂಕೋಲಾದಲ್ಲಿ 17, ಹೊನ್ನಾವರದಲ್ಲಿ 6, ಶಿರಸಿ 21, ಸಿದ್ದಾಪುರ 9, ಯಲ್ಲಾಪುರದಲ್ಲಿ 10, ಮುಂಡಗೋಡಿನಲ್ಲಿ 31, ಹಳಿಯಾಳ 29, ಕುಮಟಾದಲ್ಲಿ 45, ಜೋಯ್ಡಾ 3 ಕೇಸ್ ದಾಖಲಾಗಿದೆ. ಇಂದು ವಿವಿಧ ಆಸ್ಪತ್ರೆಯಿಂದ 116 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.


ಕಾರವಾರದಲ್ಲಿ 4, ಅಂಕೋಲಾದಲ್ಲಿ 5, ಕುಮಟಾ 9, ಶಿರಸಿ 4, ಸಿದ್ದಾಪುರ 18, ಯಲ್ಲಾಪುರದಲ್ಲಿ 32, ಹಳಿಯಾಳದಲ್ಲಿ 18, ಮುಂಡಗೋಡ 14, ಜೋಯಿಡಾ 12 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇಂದು 206 ಕೇಸ್ ದೃಢಪಟ್ಟ ಬೆನ್ನಲ್ಲೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,542ಕ್ಕೆ ಏರಿಕೆಯಾಗಿದೆ. 791 ಮಂದಿ ಆಸ್ಪತ್ರೆಯಲ್ಲಿ, 1041 ಮಂದಿ ಹೋಂ ಐಸೋಲೇಶನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಾದ್ಯಂತ ಎಂಟು ಮಂದಿ ಸಾವು:

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಎಂಟು ಮಂದಿ ಮೃತಪಟ್ಟಿದ್ದಾರೆ. ಕಾರವಾರ 1, ಕುಮಟಾ 2, ಹೊನ್ನಾವರ 1, ಸಿದ್ದಾಪುರ 1, ಹಳಿಯಾಳ 2, ಜೋಯ್ಡಾದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 74ಕ್ಕೆ ಏರಿಕೆಯಾಗಿದೆ.

ಅಂಕೋಲಾದಲ್ಲಿoದು 8 ಕೇಸ್ : ಗುಣಮುಖ 34.

ಅoಕೋಲಾ : ತಾಲೂಕಿನಲ್ಲಿ ಗುರುವಾರ ಒಟ್ಟೂ 8 ಹೊಸ ಕೋವಿಡ್ ಕೇಸ್‌ಗಳು ಪತ್ತೆಯಾಗಿದೆ. ಅವುಗಳಲ್ಲಿ ಕೇಣಿ, ಬಾಸಗೋಡ ಮತ್ತು ಶಿರಕುಳಿ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ತಲಾ 1 ಪ್ರಕರಣಗಳು ಜ್ವರ ಲಕ್ಷಣಗಳಿಂದ ಕೂಡಿದ ಐ.ಎಲ್.ಐ ಮಾದರಿ ಪಾಸಿಟಿವ್ ಎನ್ನಲಾಗಿದ್ದು, ಉಳಿದ 5 ಪ್ರಕರಣಗಳು ತಾಲೂಕಿನ ಇತರೆ ವ್ಯಾಪ್ತಿಯ ಈ ಹಿಂದಿನ ಸೋಂಕಿತರ ಸಂಪರ್ಕದಿoದ ಬಂದಿರುವ ಸಾಧ್ಯತೆ ಇದೆ.


ಇಂದು 51 ಜನರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದ್ದು, ಸೋಂಕು ಮುಕ್ತರಾದ 34 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಹೋಂ ಐಸೋಲೇಷನ್‌ನಲ್ಲಿರುವ 41 ಜನರ ಸಹಿತ ಒಟ್ಟೂ 89 ಸಕ್ರಿಯ ಪ್ರಕರಣಗಳಿವೆ.

ಯಲ್ಲಾಪುರದಲ್ಲಿ ಮೂವರಿಗೆ ಸೋಂಕು ದೃಢ:

ಯಲ್ಲಾಪುರ: ತಾಲೂಕಿನಲ್ಲಿ ಇಂದು ಮೂವರಿಗೆ ಸೋಂಕು ದೃಢಪಟ್ಟಿದೆ. ದೇಹಳ್ಳಿಯಲ್ಲಿ ಇಬ್ಬರಿಗೆ ಸೋಂಕು ತಗುಲಿದ್ದು, ಕಾಳಮ್ಮನಗರದಲ್ಲಿ ಮೃತಪಟ್ಟ ವ್ಯಕ್ತಿಯೋರ್ವರ ತಪಾಸಣಾ ವರದಿ ಪಾಸಿಟಿವ್ ಬಂದಿದೆ.


ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಚಿಂತಿಸುವ ಅವಶ್ಯಕತೆ ಇಲ್ಲ, ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ

ಶ್ರೀ ಕೇರಳ, ಕರಾವಳಿ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು.
ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ:-8884997762
( ಜಾಹೀರಾತು )

Back to top button