Follow Us On

Google News
Big News
Trending

ಹೊನ್ನಾವರ, ಕುಮಟಾದಲ್ಲಿ ಇಂದು ದಾಖಲಾದ ಕರೊನಾ ಎಷ್ಟು?

ಪ್ರಭಾತನಗರ, ಸಾಲೆಹಿತ್ತಲ್, ಬಜಾರರಸ್ತೆ, ಬಾಂದೆಹಳ್ಳ, ರಾಯಲಕೇರಿ, ಭಾಗಗಳಲ್ಲಿ ಸೋಂಕು
ಕುಮಟಾದಲ್ಲಿಂದು ಐದು ಪಾಸಿಟಿವ್

[sliders_pack id=”1487″]

ಹೊನ್ನಾವರ: ತಾಲೂಕಿನಲ್ಲಿ ಇಂದು 12 ಜನರಲ್ಲಿ ಕರೊನಾ ಪಾಸಿಟಿವ್ ಬಂದಿದೆ. ಇಂದು ವರದಿಯಾದ ಎಲ್ಲಾ ಪ್ರಕರಣಗಳು ಪಟ್ಟಣ ವ್ಯಾಪ್ತಿಯಲ್ಲೇ ಕಂಡುಬಂದಿದೆ. ಪಟ್ಟಣದ ಪ್ರಭಾತನಗರ, ಸಾಲೆಹಿತ್ತಲ್, ಬಜಾರರಸ್ತೆ, ಬಾಂದೆಹಳ್ಳ, ರಾಯಲಕೇರಿ, ಭಾಗಗಳಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಪ್ರಭಾತನಗರದಲ್ಲಿ-3, ಸಾಲೆಹಿತಲ್-4, ಬಜಾರರಸ್ತೆ-1, ಬಾಂದೆಹಳ್ಳ- 4, ರಾಯಲಕೇರಿ-1 ಕೇಸ್ ಕಾಣಿಸಿಕೊಂಡಿದೆ.

ಹೊನ್ನಾವರ ಪಟ್ಟಣದ ಪ್ರಭಾತನಗರದ 38 ವರ್ಷದ ಪುರುಷ, 30 ವರ್ಷದ ಮಹಿಳೆ, 2 ವರ್ಷದ ಬಾಲಕಿ, ಸಾಲೇಹಿತಲದ 55 ವರ್ಷದ ಪುರುಷ, 16 ವರ್ಷದ ಬಾಲಕ, 50 ವರ್ಷದ ಪುರುಷ, 41 ವರ್ಷದ ಮಹಿಳೆ, ಬಜಾರ ರಸ್ತೆಯ 62 ವರ್ಷದ ಮಹಿಳೆ, 24 ವರ್ಷದ ಯುವಕ, 30 ವರ್ಷದ ಯುವಕ, ಬಾಂದೆಹಳ್ಳದ 32 ವರ್ಷದ ಯುವಕ, ರಾಯಲಕೇರಿಯ 65 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.

ಇಂದು ತಾಲೂಕಾ ಆಸ್ಪತ್ರೆಯಿಂದ ಒಬ್ಬರು ಡಿಸ್ಚಾರ್ಜ್ ಆಗಿದ್ದು, 25 ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 170 ಜನರು ಮನೆಯಲ್ಲಿಯೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 12 ಕೇಸ್ ದೃಢಪಟ್ಟ ಬೆನ್ನಲ್ಲೆ, ತಾಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 596 ಕ್ಕೆ ಏರಿಕೆಯಾಗಿದೆ. ಕೇವಲ 10 ದಿನದಲ್ಲಿ 169 ಪ್ರಕರಣ ದಾಖಲಾದಂತಾಗಿದೆ.

ಕುಮಟಾದಲ್ಲಿಂದು ಐದು ಪಾಸಿಟಿವ್:

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಐದು ಕರೊನಾ ಕೇಸ್ ದಾಖಲಾಗಿದೆ. ಹಂದಿಗೋಣದ 37 ವರ್ಷದ ಮಹಿಳೆ, 4 ವರ್ಷದ ಬಾಲಕಿ, 8 ವರ್ಷದ ಬಾಲಕಿ, 39 ವರ್ಷದ ಪುರುಷ ಹಾಗು ಗೋಕರ್ಣದ 58 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ, ಹೊನ್ನಾವರ ಮತ್ತು ಯೋಗೇಶ್ ಮಡಿವಾಳ ಕುಮಟಾ

ಬೇಕಾಗಿದ್ದಾರೆ

ಪ್ರತಿಷ್ಠಿತ ಕಂಪೆನಿಗೆ ವಿತರಕರು ಬೇಕಾಗಿದ್ದಾರೆ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಜಿಲ್ಲೆ & ತಾಲೂಕಾವಾರು ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568

Back to top button