ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆಯ ರಕ್ಷಣೆ

ಗೋಕರ್ಣ: ಕುಡ್ಲೆ ಬೀಚ್‌ನಲ್ಲಿ ಸಮುದ್ರಲ್ಲಿ ಈಜುತ್ತಿದ್ದ ವೇಳೆ ಅಲೆಗಳಿಗೆ ಸಿಕ್ಕು ಮುಳುಗುವ ಹಂತದಲ್ಲಿದ್ದ ವಿದೇಶಿ ಮಹಿಳೆಯೋರ್ವರನ್ನು ಕಡಲತೀರದಲ್ಲಿದ್ದ ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಫ್ರಾನ್ಸ್ ದೇಶದ ಧನ್ಯ ಎಂಬಾಕೆ ರಕ್ಷಣೆಗೊಳಗಾದ ವಿದೇಶಿ ಮಹಿಳೆಯಾಗಿದ್ದಾರೆ.

ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದು, ಈ ವೇಳೆ ಈಜುತ್ತಿದ್ದ ಮಹಿಳೆ ನೀರಿನಲ್ಲಿ ಮುಳುಗುವ ಸ್ಥಿತಿಯಲ್ಲಿದ್ದರು. ಈ ವೇಳೆ ಅವರನ್ನು ಗಮನಿಸಿದ ಜೀವರಕ್ಷಕ ಸಿಬ್ಬಂದಿಗಳಾದ ನಾಗೇಂದ್ರ ಕುರ್ಲೆ ಹಾಗೂ ಪ್ರದೀಪ ಅಂಬಿಗ, ಪ್ರವಾಸಿ ಮಿತ್ರ ಶೇಖರ ಹರಿಕಂತ್ರ ಅವರು ತಕ್ಷಣ ಧಾವಿಸಿ ಜೆಟ್ ಮೂಲಕ ತೆರಳಿ ರಕ್ಷಣೆ ಮಾಡಿದ್ದಾರೆ.

ವಿಸ್ಮಯ ನ್ಯೂಸ್, ಗೋಕರ್ಣ

Exit mobile version