ಯಲ್ಲಾಪುರ: ಮನೆ ಎದುರು ನಿಲ್ಲಿಸಿಟ್ಟಿದ್ದ ಬೈಕ್ ಕದ್ದು ಪರಾರಿಯಾಗಿದ್ದ ಆರೋಪಿತನನ್ನು ಬಂಧಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲೂಕಿನ ಜಡಗಿನ ಕೊಪ್ಪದ ಪ್ರಕಾಶ ಸಿದ್ಧಿ ಬ0ದಿತ ಆರೋಪಿಯಾಗಿದ್ದಾನೆ. ತಾಲೂಕಿನ ಮಾದೇವಕೊಪ್ಪಾ ನಿವಾಸಿ ಬೆಂಡು ಪಾಂಡ್ರಮಿಸೆ ಎಂಬುವವರು ಮನೆಯ ಆವರಣದಲ್ಲಿ ನಿಲ್ಲಿಸಿಟ್ಟಿದ್ದ ತಮ್ಮ ಬೈಕ್ ಕಳ್ಳತನವಾಗಿರುವ ಕುರಿತು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಯಲ್ಲಾಪುರ ಪೊಲೀಸರು ತನಿಖೆ ಕೈಗೊಂಡಿದ್ದು, ಖಚಿತ ಮಾಹಿತಿ ಮೇರೆಗೆ ಪ್ರಕಾಶ್ ಸಿದ್ಧಿಯನ್ನು ಬಂಧಿಸಿದ್ದು ಕಳ್ಳತನವಾಗಿದ್ದ ಸುಮಾರು 30,000 ಮೌಲ್ಯದ ಬೈಕನ್ನು ಖಂಡ್ರನಕೊಪ್ಪ ಅರಣ್ಯ ಪ್ರದೇಶದಲ್ಲಿ ಜಪ್ತುಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವಿಸ್ಮಯ ನ್ಯೂಸ್, ಯಲ್ಲಾಪುರ