Big News
Trending

ಬಾಸಗೋಡಿನಲ್ಲಿಂದು ಯಕ್ಷ ಸಪ್ತಾಹ ಸಮಾರೋಪ : ಕೋಗ್ರೆ ಕ್ಷೇತ್ರ ಮಹಾತ್ಮೆ ಧಾರ್ಮಿಕ ಆಖ್ಯಾನ ಪ್ರದರ್ಶನ : ಯಕ್ಷ ಮಾಣಿಕ್ಯ ಚಿಂತನಾಳ ಸುಮಧುರ ಭಾಗವತಿಕೆ

ಅಂಕೋಲಾ: ತಾಲೂಕಿನ ಬಾಸಗೋಡದ ಸುಭೋದ ಯಕ್ಷಗಾನ ಮಂಡಳಿಗೆ ಸರಿಸುಮಾರು ಒಂದು ಶತಮಾನದ ಭವ್ಯ ಇತಿಹಾಸವಿದೆ. ಅದರ ಮುಂದುವರಿದ ಭಾಗವಾಗಿ ನಡುಬೇಣ ಕ್ರೀಡಾಂಗಣದಲ್ಲಿ ಕಳೆದ ಒಂದು ವಾರದಿಂದ ಪ್ರತಿ ದಿನ ಯಕ್ಷಗಾನ ನಡೆಯುತ್ತಿದ್ದು ಯಕ್ಷ ಪ್ರಿಯರ ಮನ ಗೆದ್ದಿದೆ. ಇಂದು ( 28-12 – 24 ) ಶನಿವಾರ ಯಕ್ಷ ಸಪ್ತಾಹದ ಸಮಾರೋಪ ನಡೆಯಲಿದ್ದು “ಕೊಗ್ರೆ ಕ್ಷೇತ್ರ ಮಹಾತ್ಮೆ “ ಎಂಬ ಸುಂದರ ಧಾರ್ಮಿಕ ಹಿನ್ನಲೆಯುಳ್ಳ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದ್ದು , ಶ್ರೀ ಕ್ಷೇತ್ರ ಕೊಗ್ರೆ ಬೊಮ್ಮಯ್ಯ ದೇವರ ಹಾಗೂ ಪರಿವಾರ ದೇವತೆಗಳ ಪಾತ್ರ ಯಕ್ಷ ರಂಗದಲ್ಲಿ ವಿಜೃಂಭಿಸಲಿದೆ.

ಸ್ಥಳೀಯ ಹಾಗೂ ಇತರಡೆಯ ಹಿರಿ-ಕಿರಿಯ ಕಲಾವಿದರ ಕೂಡುವಿಕೆಯಲ್ಲಿ , ಯಕ್ಷ ಮಾಣಿಕ್ಯ ಚಿಂತನಾ ಹೆಗಡೆ ಸುಮಧುರ ಭಾಗವತಿಕೆಯಲ್ಲಿ ಈ ಯಕ್ಷಗಾನವನ್ನು ಮತ್ತೊಮ್ಮೆ ಕಣ್ಣು ತುಂಬಿಕೊಳ್ಳುವ ಸದಾವಕಾಶ ಪ್ರಾಪ್ತವಾಗಿದ್ದು ಯಕ್ಷ ಪ್ರಿಯರು ಹಾಗೂ ಶ್ರೀ ದೇವರ ಮತ್ತು ಪರಿವಾರ ದೇವರುಗಳ ಸದ್ಭಕ್ತರಲ್ಲಿ ಸಂತಸದ ಕಾಯುವಿಕೆಗೆ ಕಾರಣವಾದಂತಿದೆ. ಬಾಸಗೋಡದ ನಡು ಬೇಣದಲ್ಲಿ ಸಂಜೆ 6 ಘಂಟೆ ನಂತರ ನಡೆಯಲಿರುವ ಈ ಯಕ್ಷಗಾನಕ್ಕೆ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಚಂದಗಾಣಿಸುವಂತೆ ಮತ್ತು ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಕೋರಿಕೊಂಡಿರುವ ಸುಭೋದ ಯಕ್ಷಗಾನ ಮಂಡಳಿ ಬಾಸಗೋಡ , 45 ನೇ ವರ್ಷದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವ ಜನತಾ ಕ್ರಿಕೆಟ್ ಕ್ಲಬ್ ಬಾಸಗೋಡ ಹಾಗೂ ಊರ ನಾಗರಿಕರು ಬಾಸಗೋಡ ರವರು ,ಸರ್ವರಿಗೂ ಸ್ವಾಗತ ಕೋರಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button