ಹೊನ್ನಾವರ: ಲಾರಿ ಪಲ್ಟಿಯಾಗಿ ಇಬ್ಬರು ಮೃತಪಟ್ಟು ಮೂವರು ಗಾಯಗೊಂಡ ಘಟನೆ ತಾಲೂಕಿನ ಗೇರುಸೊಪ್ಪ ಸಾಗರ ರಸ್ತೆಯ ಸುಳೆಮುರ್ಖಿ ತಿರುವು ಹತ್ತಿರ ನಡೆದಿದೆ. ಆಟದ ಸಾಮಾನುಗಳನ್ನು ತುಂಬಿಕೊoಡು ಹೊನ್ನಾವರ ಕಡೆ ಬರುತ್ತಿದ್ದ ಲಾರಿ ಪಲ್ಟಿಯಾಗಿ, ಈ ದುರ್ಘಟನೆ ಸಂಭವಿಸಿದೆ.
ಮೃತರು ಮತ್ತು ಗಾಯಾಳು ಮೂಲತಃ ಬಿಹಾರ ರಾಜ್ಯದವರು ಎಂದು ತಿಳಿದುಬಂದಿದೆ. ವಾಹನದಲ್ಲಿದ್ದ ಆರು ಜನರಲ್ಲಿ ಇಬ್ಬರು ಮೃತ ಪಟ್ಟಿದ್ದು, ಮೂವರು ಗಾಯಳುಗಳಿಗೆ ಹೊನ್ನಾವರದ ತಾಲೂಕ ಸರಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೊನ್ನಾವರ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ