ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಿಳೆ ನೇಣಿಗ ಶರಣು?ಗಂಡ ಬಂದು ನೋಡುವಷ್ಟರಲ್ಲಿ ಹಾರಿ ಹೋಗಿತ್ತು ಪ್ರಾಣ ಪಕ್ಷಿ,
ಅಂಕೋಲಾ : ತನ್ನ ಪತಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಿಳೆ ಒಬ್ಬಳು ,ಗಂಡ ಮನೆಯಲ್ಲಿ ಇಲ್ಲದ ವೇಳೆ ಅದಾವುದೋ ಕಾರಣದಿಂದ ಮನನೊಂದು ಆತ್ಮಹತ್ಯೆಗೆ ಶರಣಾದಂತಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ತಾಂಡಾವೊಂದರ ಮೂಲ ನಿವಾಸಿ ಹಾಲಿ ,ಅಂಕೋಲಾ ತಾಲೂಕಿನ ಪಟ್ಟಣ ವ್ಯಾಪ್ತಿಯ ಹನುಮಟ್ಟಾದ ನಿವಾಸಿ ,ಟೈಲ್ಸ್ ಫಿಟಿಂಗ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ತುಕ್ಕಪ್ಪ ಚಂದಪ್ಪ ಲಮಾಣಿ ಇವರ ಪತ್ನಿ ಶೋಭಾ ಲಮಾಣಿ (27 ) ಮೃತ ದುರ್ದೈವಿ.
ಕಳೆದ ಕೆಲವು ವರ್ಷಗಳಿಂದ ಅಂಕೋಲಾಕ್ಕೆ ಬಂದು ನೆಲೆಸಿದ್ದ ಇವರು ಮದುವೆಯಾಗಿ ಕೆಲ ವರ್ಷಗಳಾದರೂ ಮಕ್ಕಳಾಗಿರಲಿಲ್ಲ ಎನ್ನಲಾಗಿದೆ. ಜನವರಿ 8 ರಂದು ಮಧ್ಯಾಹ್ನ ಸರಿಸುಮಾರು ಊಟದ ಸಮಯದ ವೇಳೆಗೆ ,ಗಂಡ ಮನೆಯಲ್ಲಿ ಇರದ ವೇಳೆ ಮನೆಯ ಕೋಣೆಯ ಫ್ಯಾನಿಗೆ ನೈಲಾನ್ ಬಳ್ಳಿಯಿಂದ ಒಂದು ತುದಿ ಹಾಗೂ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಕೇಳಿಬಂದಿದೆ. ದೈನಂದಿನ ಇಲ್ಲವೇ ಅದಾವುದೋ ಕೆಲಸಕ್ಕೆ ಮನೆಯಿಂದ ಹೊರ ಹೋಗಿದ್ದ ಗಂಡ ವಾಪಸ್ ಬಂದು ನೋಡುವಷ್ಟರಲ್ಲಿ ಈ ದುರ್ಘಟನೆ ಬೆಳಕಿಗೆ ಬಂದಿದೆ.
ಆದರೆ ಆ ವೇಳೆಗಾಗಲೇ ಅವಳ ಪ್ರಾಣ ಪಕ್ಷಿ ಹಾರಿ ಹೋಗಿದ್ದು ಗಂಡ ತಟ್ಟನೆ ಶಾಕಿನಿಂದ ಚೀರಿಕೊಂಡಾಗ ಏನಾಗಿದೆ ಎಂದು ಅಕ್ಕ ಪಕ್ಕದ ಮನೆಯವರು ಹಾಗೂ ಸ್ಥಳೀಯರು ಜಮಾಯಿಸತೊಡಗಿದ್ದಾರೆ. ಪುರಸಭೆಯ ಸ್ಥಳೀಯ ವಾರ್ಡ್ ಸದಸ್ಯೆ ರೇಖಾ ಗಾಂವಕರ ,ಈ ಕುರಿತು ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದರು. ಸಿಪಿಐ ಚಂದ್ರಶೇಖರ ಮಠಪತಿ ,ಪಿಎಸ್ಐ ಉದ್ದಪ್ಪ ಧರೆಪ್ಪನವರ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ,ಕಾನೂನು ಕ್ರಮ ಮುಂದುವರಿಸಿದ್ದಾರೆ.ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾಸ್ಪತ್ರೆ ಶವಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ಕನಸಿ ಗದ್ದೆಯ ಬೊಮ್ಮಯ್ಯ ನಾಯ್ಕ ಸಹಕರಿಸಿದರು. ಮೃತಳ ಗ್ರಾಮಸ್ಥರು ,ಕುಟುಂಬದ ಪರಿಚಯಸ್ಥರು ಸಹಕರಿಸಿದರು.
ಅಂಕೋಲಾದಲ್ಲಿ ಬೇರೆ ಬೇರೆ ಉದ್ಯೋಗ , ಕೆಲಸ ಮಾಡಿಕೊಂಡಿರುವ ಹಾವೇರಿ ಹಾನಗಲ್ ಮತ್ತಿತರಡೆಯ 50 ಕ್ಕೂ ಹೆಚ್ಚು ಜನರು ಸ್ಥಳದಲ್ಲಿದ್ದು ,ಘಟನೆ ಕುರಿತಂತೆ ಬೇಸರ ಮತ್ತು ದುಃಖ ವ್ಯಕ್ತಪಡಿಸಿದ್ದು ಕಂಡುಬಂತು. ಮದುವೆಯಾಗಿ ಕೆಲ ವರ್ಷಗಳಾದರೂ ಮಕ್ಕಳಾಗಲಿಲ್ಲ ಎಂಬ ಕೊರಗಿನಲ್ಲಿ ಅವಳು ಆತ್ಮಹತ್ಯೆಗೆ ಶರಣಾದಳೇ ? ಅಥವಾ ಬೇರೆ ಯಾವುದಾದರೂ ಕಾರಣಗಳಿಂದ ಮನನೊಂದಳೆ? ಸಾವಿಗೆ ನಿಖರ ಕಾರಣಗಳೇನಿರಬಹುದು ಎಂಬುದರ ಜೊತೆ ಘಟನೆ ಕುರಿತಂತೆ ಪೊಲೀಸರಿಂದ ,ಹೆಚ್ಚಿನ ಮತ್ತು ನಿಖರ ಮಾಹಿತಿ ತಿಳಿದು ಬರಬೇಕಿದೆ. ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಗಳಿಂದ ಆತ್ಮಹತ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಅಂಶವಾಗಿದೆ. ಆದರೆ ಆತ್ಮಹತ್ಯೆಯೇ ಸಮಸ್ಯೆಗೆ ಪರಿಹಾರ ಅಲ್ಲ ಎನ್ನುವ ಸತ್ಯ ಎಲ್ಲರೂ ಮನಗಾಣಬೇಕಿದೆ.ಮತ್ತು ಈ ಕುರಿತು ಸಂಬಂಧಿತ ಇಲಾಖೆಗಳು ಜನರಲ್ಲಿ ಧೈರ್ಯ ಹಾಗೂ ಜಾಗೃತಿ ಮೂಡಲು ಪ್ರೇರೆಪಿಸಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ