ಜಾತ್ರೆಯಲ್ಲಿ ಭಕ್ತರ ಮೇಲೆ ಹರಿದ ಕಾರು: ಯುವತಿ ಸಾವು, 9 ಮಂದಿಗೆ ಗಾಯ

ಸಿದ್ದಾಪುರ : ಪಟ್ಟಣದಲ್ಲಿ ನಡೆಯುತ್ತಿರುವ ಅಯ್ಯಪ್ಪ ಸ್ವಾಮಿ ದೇವರ ಜಾತ್ರೆಯಲ್ಲಿ ಭಕ್ತರ ಮೇಲೆ ಕಾರು ಹರಿದು ಓರ್ವ ಯುವತಿ ಮೃತಪಟ್ಟು 9 ಮಂದಿಗೆ ಗಾಯವಾದ ಘಟನೆ ನಡೆದಿದೆ. ಸಿದ್ದಾಪುರ ತಾಲೂಕಿನ ಕಲ್ಕೊಪ್ಪದ ದೀಪಾ ರಾಮ ಗೊಂಡ ( 21) ಮೃತಪಟ್ಟ ಯುವತಿಯಾಗಿದ್ದಾಳೆ. ಅತಿವೇಗ ಹಾಗೂ ನಿರ್ಲಕ್ಷತನಯಿಂದ ಕಾರು ಚಲಾಯಿಸಿದ ರವೀಂದ್ರ ನಗರದ ಕಾರು ಚಾಲಕ ರೋಷನ್ ಫರ್ನಾಂಡಿಸ್ ಎನ್ನುವವನ ಮೇಲೆ ಮೇಲೆ ಪ್ರಕರಣ ದಾಖಲಾಗಿದೆ.

ಘಟನೆಯಲ್ಲಿ ಜಾನಕಿ ಗೋಪಾಲ್ ನಾಯ್ಕ್ ಅವರಗುಪ್ಪ, ಗಜಾನನ ನಾರಾಯಣ ಹೆಗಡೆ ಮದ್ದಿನ ಕೇರಿ , ಜ್ಯೋತಿ ಮಂಜುನಾಥ ಗೊಂಡ ಕಲಕೊಪ್ಪ , ರಾಮಪ್ಪ ಬೆನ್ನೂರ್ , ಮಹಾದೇವ ಹುಚ್ಚ ನಾಯ್ಕ ಹೊಸೂರ್, ಗೌರಿ ಉದಯ ಮಡಿವಾಳ ಕೊಂಡ್ಲಿ , ಕಲ್ಪಿತ ರಘುಪತಿ ನಾಯ್ಕ್ ಕಳುರ್ , ಚೈತ್ರ ರಘುಪತಿ ನಾಯ್ಕ್ ಕಳುರ್ , ಎನ್ನುವವರಿಗೆ ಗಾಯವಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತ ಪಡಿಸಿದ ಕಾರು ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Exit mobile version