ಮುರ್ಡೇಶ್ವರ: ಪುರಾಣ ಪ್ರಸಿದ್ಧ ಹಾಗೂ ಪಂಚ ಶಿವಕ್ಷೇತ್ರಗಳಲ್ಲೊಂದಾದ ಮ್ಹಾತೋಬಾರ ಶ್ರೀ ಮುರ್ಡೇಶ್ವರ ದೇವರ ಮಹಾ ರಥೋತ್ಸವ ಜನವರಿ 19 ರಂದು ಭಾನುವಾರ ಸಂಜೆ ವಿಜ್ರಂಭಣೆಯಿಂದ ನಡೆಯಲಿದೆ. ಮಕರ ಸಂಕ್ರಮಣದ ದಿನದಂದಲೇ ಮೃತ್ತಿಕಾಹರಣ, ಧ್ವಜಾರೋಹಣ,ಹೀಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿತ್ತು. ಜ. 15 ರಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಾಮಭವಾಗಿತ್ತು.
ಇದೀವ. ಜ. 19 ರಂದು ಭಾನುವಾರ ಮಹಾರಥೋತ್ಸವ ಹಾಗೂ ಜ. 21 ರಂದು ಚೂರ್ಣೋತ್ಸವ, ಅವಭೃಥ ಸ್ನಾನ, ಧ್ವಜಾರೋಹಣ, ಅಂಕುರಾರೋಪಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ರಥೋತ್ಸವದ ಪ್ರಯುಕ್ತ ಮಕರ ಸಂಕ್ರಮಣದ ದಿನದಿಂದಲೂ ಪ್ರತಿ ದಿನ ರಾತ್ರಿ ಮಹಾಪೂಜೆ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಅತ್ಯಾಕರ್ಷಕ ಸ್ವರ್ಣ ರಥವನ್ನು ಎಳೆಯಲಾಗುತ್ತದೆ.
ಜ. 19 ರಂದು ರವಿವಾರ ಸಂಜೆ 5 ಗಂಟೆಯ ಸುಮಾರಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಮುರುಡೇಶ್ವರ ದೇವರ ಮಹಾ ರಥೋತ್ಸವ ಜರುಗಲಿದೆ. . ಓಲಗ ಮಂಟಪದ ಸುತ್ತಲಿನ ರಸ್ತೆಯಲ್ಲಿ ಜನಸಾಗರದ ಮಧ್ಯೆ ಶ್ರೀ ಮುರ್ಡೇಶ್ವರ ದೇವರ ಉತ್ಸವ ಮೂರ್ತಿಯನ್ನು ಹೊತ್ತುಕೊಂಡ ಬ್ರಹ್ಮರಥವನ್ನು ಎಳೆಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ವರ್ಷದಿಂದ ವರ್ಷಕ್ಕೆ ಮುರ್ಡೇಶ್ವರ ಮಹಾ ರಥೋತ್ಸವದ ಪ್ರಸಿದ್ಧಿ ಹೆಚ್ಚುತ್ತಲೇ ಇದ್ದು, ಪಾಲ್ಗೊಳ್ಳುವ ಭಕ್ತರ ಸಂಖ್ಯೆಯೂ ಇಮ್ಮಡಿಸುತ್ತಿರುವುದು ವಿಶೇಷ. ಮುರ್ಡೇಶ್ವರ ದೇವರ ಮಹಾರಥೋತ್ಸವದಲ್ಲಿ ವರ್ಷಂಪ್ರತಿಯಂತೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಮುಡಿಗಂಧ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಧರ್ಮದಶೀ ಸತೀಶ ಆರ್ ಶೆಟ್ಟಿ ಕೋರಿದ್ದಾರೆ.
ವಿಸ್ಮಯ ನ್ಯೂಸ್ ಈಶ್ವರ್ ನಾಯ್ಕ, ಭಟ್ಕಳ