Jannah Theme License is not validated, Go to the theme options page to validate the license, You need a single license for each domain name.
Big News
Trending

ಜನ ಪರಿಷತ್ತಿನ ಉತ್ತರ ಕನ್ನಡದ ಅಧ್ಯಕ್ಷರಾಗಿ ಶ್ಯಾಮಸುಂದರ ಹೆಗಡೆ ನಾಮನಿರ್ದೇಶನ

ಅಖಿಲ ಭಾರತ ಮಟ್ಟದ ಜನ ಪರಿಷತ್ತಿನ ಅಧ್ಯಕ್ಷರು ಮತ್ತು ಮಾಜಿ ಡಿಜಿಪಿ ಶ್ರೀ ಎನ್ ಕೆ ತ್ರಿಪಾಠಿ ಹಾಗು ಪದ್ಮಶ್ರೀ ಶ್ರೀಮತಿ ಸುನಿಲ್ ದಾಬಸ್  (ಜನ ಪರಿಷತ್ತಿನ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷೆ ) ಅವರ ಶಿಫಾರಸಿನ ಮೇರೆಗೆ  ಅವರು ಸಾಮಾಜಿಕ ಕಾರ್ಯಕರ್ತ ಶ್ಯಾಮಸುಂದರ ಹೆಗಡೆ ಅವರನ್ನು ಜನ ಪರಿಷತ್ತಿನ ಉತ್ತರ ಕನ್ನಡ ಅಧ್ಯಾಯ (ವಲಯ )  ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. 

ಸಂಸ್ಥೆಯ ಸಂಯೋಜಕ ರಾಮ್‌ಜಿ ಶ್ರೀವಾಸ್ತವ ಮಾತನಾಡಿ, ಜನ ಪರಿಷತ್ ರಾಷ್ಟ್ರೀಯ ಮಟ್ಟದ ಸಾಮಾಜಿಕ ಸಂಸ್ಥೆಯಾಗಿದ್ದು, ಕಳೆದ 36 ವರ್ಷಗಳಿಂದ ಸಾಮಾಜಿಕ ಮತ್ತು ಸೃಜನಶೀಲ ಕಾರ್ಯಗಳಲ್ಲಿ ಸಕ್ರಿಯವಾಗಿದೆ ಮತ್ತು ಅನೇಕ ಐತಿಹಾಸಿಕ ಮತ್ತು ಅಭೂತಪೂರ್ವ ಉಲ್ಲೇಖ ಪುಸ್ತಕಗಳನ್ನು ಸಹ ಪ್ರಕಟಿಸಿದೆ.

ಸಂಸ್ಥೆಯು ಪರಿಸರದ ಕುರಿತು ಹತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳನ್ನು ಆಯೋಜಿಸಿದೆ.  ಮುಂದಿನ ಸಮ್ಮೇಳನವನ್ನು ವಿಯೆಟ್ನಾಂನಲ್ಲಿ ಆಯೋಜಿಸಲಾಗಿದೆ. ಪ್ರಸ್ತುತ, ಸಂಸ್ಥೆಯು ಇಡೀ ದೇಶದಲ್ಲಿ 279 ಮತ್ತು ವಿದೇಶದಲ್ಲಿ 7 ಅಧ್ಯಾಯಗಳನ್ನು  (ವಲಯ ) ಹೊಂದಿದೆ.

ಪ್ರತಿ ವರ್ಷ ಸೃಜನಾತ್ಮಕ ಮತ್ತು ಸಾಮಾಜಿಕ ಸುಧಾರಣಾ ಕಾರ್ಯಗಳಿಗೆ  ರೂಪವನ್ನು ನೀಡುವ ಜನರನ್ನು ಸಂಸ್ಥೆಯು ಗೌರವಿಸುತ್ತದೆ. ಸಂಘಟನೆಯ ಮುಖ್ಯ ಕೆಲಸ ಅಂದರೆ ಮಾನವಿಯತೆ  ದ್ರಷ್ಟಿ ಕೋನ, ಸಾಮಾಜಿಕ  ಕಳಕಳಿ ಮತ್ತು ರಾಷ್ಟ್ರೀಯ ದೃಷ್ಟಿಕೋನ ಹೊಂದಿದೆ ಎಂದರು.

ಇದೀಗ ಹೊನ್ನಾವರ ಮುಗ್ವಾದ ಗಾಳಿಮನೆಯ ಗಜಾನನ ಮತ್ತು ನಾಗವೇಣಿ ಅವರ ಪುತ್ರ, ಸಾಮಾಜಿಕ ಕಾರ್ಯಕರ್ತ ಶ್ಯಾಮಸುಂದರ ಹೆಗಡೆ ಅವರನ್ನ  ಜನಪರಿಷತ್‌ನ ಮಹಿಳಾ ವಿಭಾಗದ ದಕ್ಷಿಣ ವಿಭಾಗದ ಅಧ್ಯಕ್ಷೆ ಡಾ. ಸಂಗೀತಾ ಹೊಳ್ಳ ಅವರು ಮಾಡಿದ ಶಿಫಾರಸಿನ ಮೇರೆಗೆ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಎನ್‌ಕೆ ತ್ರಿಪಾಠಿ  ಅವರಿಂದ ಜನಪರಿಷತ್ ಅಧ್ಯಾಯದ ಉತ್ತರ ಕನ್ನಡದ ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button