
ಅಂಕೋಲಾದಲ್ಲಿ ಗುಣಮುಖ 5 : ಸಕ್ರಿಯ 89
ಮೃತ ಯುವಕನಲ್ಲಿಯೂ ಪಾಸಿಟಿವ್
ಒಟ್ಟು ಮೃತರ ಸಂಖ್ಯೆ 6ಕ್ಕೆ ಏರಿಕೆ
ಶಿರಸಿಯಲ್ಲಿ ಇಂದು 59 ಪಾಸಿಟಿವ್
ಅಂಕೋಲಾ : ತಾಲೂಕಿನಲ್ಲಿ ಶನಿವಾರ 10 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಸೋಂಕು ಮುಕ್ತರಾದ 5 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಸನ್‍ನಲ್ಲಿರುವ 53 ಮಂದಿ ಸಹಿತ ಒಟ್ಟೂ 89 ಪ್ರಕರಣಗಳು ಸಕ್ರಿಯವಾಗಿದೆ.
ಇಂದಿನ ಹೆಲ್ತ ಬುಲೇಟಿನ್‍ನಲ್ಲಿ ಪ್ರಕಟವಾದಂತೆ ತಾಲೂಕಿನ ಮೃತ ಯುವಕನೊರ್ವನಲ್ಲಿಯೂ ಸೋಂಕು ಲಕ್ಷಣಗಳು ಧೃಡಪಟ್ಟಿದ್ದು, ಈವರೆಗೆ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ತಾಲೂಕಿನ ಒಟ್ಟೂ ಸೋಂಕಿತರ ಸಂಖ್ಯೆ 414ಕ್ಕೆ ತಲು ಪಿದ್ದು, ಅವರಲ್ಲಿ 310 ಮಂದಿ ಗುಣಮುಖರಾಗಿದ್ದಾರೆ.
ಮಾದನಗೇರಿ ಬಳಲೆ ವ್ಯಾಪ್ತಿ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಕ್ಯಾಂಪ್ ಮಾದರಿಯಲ್ಲಿ 54 ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ತಹಶೀಲ್ದಾರ ಉದಯ ಕುಂಬಾರ, ತಾಲೂಕಾ ಆರೋಗ್ಯಾಧಿಕಾರಿ ಡಾ. ಅರ್ಚನಾ ನಾಯ್ಕ, ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಲ್ಹಾದ್, ತಾ.ಪಂ. ಕಾರ್ಯ ನಿರ್ವಾಹಕಾಧಿಕಾರಿ ಪಿ.ವೈ.ಸಾವಂತ, ಆಶಾ-ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತೆಯರು, ಪೊಲೀಸ ಮತ್ತು ಸ್ಥಳೀಯ ಗ್ರಾಪಂ. ವ್ಯಾಪ್ತಿಯ ಸಿಬ್ಬಂದಿಗಳು ಮತ್ತಿತರ ಕೊರೊನಾ ವಾರಿಯರ್ಸ್ ಯೋಧರಾದ ಇತರರು ಹಾಜರಿದ್ದು, ಸಾರ್ವಜನಿಕರಿಗೆ ಕೊರೊನಾ ಮುಂಜಾಗ್ರತೆ ಕುರಿತು ತಿಳಿ ಹೇಳಿದರು.
ಶಿರಸಿಯಲ್ಲಿ ಆರ್ಭಟಿಸಿದ ಕರೋನಾ
ಶಿರಸಿ: ತಾಲೂಕಿನಲ್ಲಿ ಇಂದು ಅಕ್ಷರಶ: ಕರೊನಾ ಆರ್ಭಟಿಸಿದೆ. ಇಂದು ಬರೊಬ್ಬರಿ 59 ಕೇಸ್ ದಾಖಲಾಗಿದೆ. ಚೌಕಿಮಠ 3, ಪೋಲೀಸ್ ಕ್ವಾಟರ್ಸ್ 3, ಟಿಎಸ್ಎಸ್ ರಸ್ತೆ 3, ಲಯನ್ಸ್ ನಗರ 4, ಬಾಪೂಜಿ ನಗರ 4, ಬನವಾಸಿ ರಸ್ತೆ 4, ದುಂಡಸಿ ನಗರ 2, ನಿಡಗೋಡು 2, ಗಾಂಧಿ ನಗರ 4, ಗಣೇಶ ನಗರ 2, ಕೃಪಾ ನರ್ಸಿಂಗ್ ಹೋಮ್ 2, ಜಡ್ಡಿಗದ್ದೆ 2, ಮಾರುತಿ ಗಲ್ಲಿ, ಸಿ ಪಿ ಬಝಾರ್, ನೆಹರೂ ನಗರ, ಕೆಎಚ್ ಬಿ ಕಾಲೊನಿ ಮುಂತಾದ ಕಡೆ ಸೋಂಕು ಕಾಣಿಸಿಕೊಂಡಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಇದನ್ನೂ ಓದಿ: ಪ್ರಮುಖ ಸುದ್ದಿ
- 124 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಜಿಲ್ಲೆಯಲ್ಲಿ ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ?
- ಪಿಎಸ್ಐ ಹಗರಣದಲ್ಲಿ ವಿಚಾರಣೆ ಎದುರಿಸಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣು
- 51 ಪ್ರಕರಣಗಳಲ್ಲಿಯ ಗಾಂಜಾ, ಗಾಂಜಾ ಗಿಡ ನಾಶ: 11 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಮಾದಕವಸ್ತು ಬೆಂಕಿಗೆ ಆಹುತಿ
- ನೀಲಗೋಡ ಯಕ್ಷೀ ಚೌಡೇಶ್ವರಿ ಸನ್ನಿಧಿಯಲ್ಲಿ ಅಮವಾಸ್ಯೆಯ ನಿಮಿತ್ತ ತೀರ್ಥಸ್ನಾನ : ರಾಜ್ಯದ ಮೂಲೆ ಮೂಲೆಯಿಂದ ಹರಿದುಬಂದ ಭಕ್ತಸಾಗರ
- ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿಹೊಡೆದ ಕಾರು: ಸ್ಥಳದಲ್ಲೇ ಪಾದಾಚಾರಿ ಸಾವು