ಅಂಕೋಲಾ : ತಾಲೂಕಿನ ಬಾಸಗೋಡ ಗ್ರಾಮದ ನಿವೃತ್ತ ಶಿಕ್ಷಕ ರಾಮಚಂದ್ರ ಮೋನಪ್ಪ ನಾಯಕ(83) ಶನಿವಾರ ಬೆಳಿಗ್ಗೆ ದೈವಾಧೀನರಾದರು. ಜಿಲ್ಲೆಯ ವಿವಿಧೆಡೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸುಧೀರ್ಘ ಸೇವೆ ಸಲ್ಲಿಸಿ, ನಂತರ ಬೆಳಂಬಾರ-ಮೂಡ್ರಾಣಿ ಶಾಲೆಯಲ್ಲಿ ನಿವೃತ್ತರಾಗಿದ್ದರು.
ತಮ್ಮ ಶಿಸ್ತುಬದ್ಧ ಜೀವನ, ನೇರ ನಡೆನುಡಿಗಳಿಂದ ಗುರುತಿಸಿ ಕೊಂಡಿದ್ದ ಇವರು ತಮ್ಮ ಆಪ್ತ ವಲಯದಲ್ಲಿ ಹಾಸ್ಯ ಪ್ರವೃತ್ತಿಯ ಮೂಲಕವೂ ಗಮನ ಸೆಳೆಯುತ್ತಿದ್ದರು. ಸುತ್ತಮುತ್ತಲ ಹಳ್ಳಿಗರ ಪ್ರೀತಿ-ವಿಶ್ವಾಸಗಳಿಸಿದಲ್ಲದೇ ರಾಮಚಂದ್ರ ಮಾಸ್ತರ ಎಂದೇ ಪರಿಚಿತರಾಗಿದ್ದರು.
ಮೃತರು, ಪತ್ನಿ ದೇವಮ್ಮಾ ಆರ್.ನಾಯಕ, ಮಕ್ಕಳಾದ ಶ್ರೀ ಲತಾ ಅರಮನೆ, ರಾಜಶ್ರೀ ಜಯರಾಮ ನಾಯಕ, ಹರೀಶ ಆರ್.ನಾಯಕ, ರಾಜೇಶ ಆರ್.ನಾಯಕ, ಮೊಮ್ಮಕ್ಕಳು, ಕುಟುಂಬ ವರ್ಗ ಮತ್ತು ಅಪಾರ ಬಂಧುಬಳಗ ತೊರೆದಿದ್ದಾರೆ. ಹಿರಿಯ ಚೇತನದ ಅಗಲುವಿಕೆಗೆ ವಿವಿಧ ಗಣ್ಯರು ಸಂತಾಪ ಸೂಚಿ ಸಿದ್ದು, ಮೃತರ ಅಂತ್ಯ ಕ್ರಿಯೆಯಲ್ಲಿ ಊರ ನಾಗರಿಕರು, ತಾಲೂಕಿನ ಹಲವು ಪ್ರಮುಖರು, ಬಂಧು ಬಳಗ ದವರು ಮತ್ತು ಕುಟುಂಬದ ಹಿತೈಷಿಗಳು ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಇದನ್ನೂ ಓದಿ: ಇಂದಿನ ಪ್ರಮುಖ ಸುದ್ದಿಗಳು
- ಅಕ್ಕನ ಅಂತಿಮ ಕಾರ್ಯ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದ ತಮ್ಮನ ದುರ್ಮರಣ: ಏನಾಯ್ತು ನೋಡಿ?
- ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯಿಂದ ಮಹತ್ವದ ಹೇಳಿಕೆ : ಮೀನುಗಾರಿಕಾ ಮಂತ್ರಿಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವರೇ ಖುದ್ದಾಗಿ ಬಂದು ಅಹವಾಲು ಆಲಿಸಲು ಆಗ್ರಹ
- ರೈತರಿಗೆ ಬೆಳೆವಿಮೆ ಕೊಡಿ: ಕಂಪೆನಿಗೆ ಕೇಂದ್ರದ ಖಡಕ್ ಆದೇಶ
- ಗೋವಿಂದಮೂರ್ತಿ ದೇವರ ವರ್ಧಂತಿ: ಗಮನಸೆಳೆದ “ಶ್ರೀನಿವಾಸ ಕಲ್ಯಾಣ” ಪೌರಾಣಿಕ ನಾಟಕ
- ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ನಾಗರಹಾವು : ಕುಟುಂಬಸ್ಥರು, ಅಕ್ಕಪಕ್ಕದ ಮನೆಯವರಲ್ಲಿ ಆತಂಕ