Join Our

WhatsApp Group
Important
Trending

ಬಿರುಗಾಳಿ ಸಹಿತ ಗಾಳಿ ಮಳೆ: ಧರೆಗುರುಳಿದ ಮರಗಳು

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಹಲವೆಡೆ ಬಿರುಸಿನ ಗಾಳಿ ಹಾಗೂ ಮಳೆಯಾಗಿದ್ದು, ಗಾಳಿಯ ವೇಗಕ್ಕೆ ಕೆಲವೆಡೆ ಹಾನಿಯಾಗಿದೆ. ಹಲವೆಡೆ ಮರಗಳು ಧರೆಗುರುಳಿವೆ. ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯವಾಗಿದೆ. ಹೌದು ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನತೆಗೆ ಒಮ್ಮೆಲೆ ಬಂದ ಅಕಾಲಿಕ ಮಳೆ ತಂಪೆರೆದರೂ, ಭಾರೀ ಗಾಳಿಯಿಂದಾಗಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Job Alert: ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ: ಇಂದೇ ಅರ್ಜಿ ಸಲ್ಲಿಸಿ

ಕುಮಟಾ ತಾಲೂಕಿನಲ್ಲಿಯೂ ಹಲವೆಡೆ ಮಳೆ ಅಬ್ಬರಿಸಿದೆ. ಹೊನ್ನಾವರ, ಅಂಕೋಲಾ, ಶಿರಸಿ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗಿದೆ. ಕುಮಟಾದ ದೀವಗಿಯ ಶಿರಸಿ ಹೆದ್ದಾರಿಯಲ್ಲಿ ಗಾಳಿ ಮಳೆಯಿಂದಾಗಿ ಮರವು ರಸ್ತೆಯಲ್ಲಿ ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು. ವಿದ್ಯುತ ತಂತಿಯ ಮೇಲೆ ಮರ ಮುರಿದ ಬಿದ್ದ ಪರಿಣಾಮ ವಿದ್ಯುತ ವ್ಯತ್ಯಯವಾಗಿತ್ತು.. ದೀವಗಿಯ ಕೆಲ ಮನೆಗಳ ಛಾವಣಿಗೆ ಅಳವಡಿಸಿದ್ದ ತಗಡಿನ ಶೀಟ್‌ಗಳು ಹಾರಿ ಹೋಗಿದೆ. ಅಕಾಲಿಕವಾಗಿ ಸುರಿದ ಗಾಳಿ ಮಳೆಯಿಂದಾಗಿ ಜನರು ಆತಂಕಗೊAಡರಾದರೂ ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದ ಜನತೆಗೆ ತಂಪೆರೆದ ಅನುಭವ ಉಂಟಾಯಿತು.

ವಿಸ್ಮಯ ನ್ಯೂಸ್, ಕುಮಟಾ

Back to top button