Join Our

WhatsApp Group
Important
Trending

ಶಾರ್ಟ್ ಸರ್ಕ್ಯೂಟ್ ತಂದ ಅವಾಂತರ: ಎಲ್ಲೆಡೆ ದಟ್ಟ ಹೊಗೆ ಆವರಿಸಿ ಆತಂಕದ ವಾತಾವರಣ

ಹೊನ್ನಾವರ: ತಾಲೂಕಿನ ಗುಣವಂತೆಯ ಕೆರೆಮನೆ ಹತ್ತಿರ ಗುಜರಿ ಗೋಡೌನ್ ಗೆ ಬೆಂಕಿ ತಗುಲಿ ಸಂಗ್ರಹಿಸಿಟ್ಟಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ತಾಲೂಕಿನ ಗುಣವಂತೆಯ ಕೆರೆಮನೆ ಹತ್ತಿರದಲ್ಲಿರುವ ಗುಜರಿ ಸಂಗ್ರಹದಲ್ಲಿ ಸಂಗ್ರಹಿಸಿಟ್ಟಿದ್ದ ವಸ್ತುಗಳು ವಿದ್ಯುತ್ ಶಾರ್ಟ್ ಸಕ್ರ‍್ಯೂಟ್ ನಿಂದ ಸುಟ್ಟುಕರಕಲಾಗಿದ್ದು ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆ ಜೊತೆಗೆ ದಟ್ಟನೆಯ ಹೊಗೆ ಆವರಿಸಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಭಾರೀ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿದ್ದ ಗುಜರಿ ವಸ್ತುಗಳು ಸಂಪೂರ್ಣ ಆಹುತಿಯಾಗಿದೆ. ಗುಜರಿಯ ಹತ್ತಿರದಲ್ಲಿರುವ ವಾಹನಕ್ಕೂ ಬೆಂಕಿ ತಗುಲಿದ್ದು, ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲೇ ಈ ಘಟನೆ ನಡೆದಿದ್ದರಿಂದ ಮುನ್ನೆಚ್ಚರಿಕೆಯಾಗಿ ಕೆಲಕಾಲ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button