
ಬೆಂಗಳೂರು: 2023-24ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆಯು ರೈತರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಮಾ ಪರಿಹಾರ ನೀಡದಿರುವ ಕುರಿತು ಕೇಂದ್ರ ಸರಕಾರಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆಗ್ರಹ ಪಡಿಸಿದ್ದರು. ಕೇಂದ್ರ ಸರಕಾರ ಕ್ಷೇಮ ಜನರಲ್ ಇನ್ಸೂರೆನ್ಸ್ ಕಂಪನಿ ಇವರಿಗೆ ಒಂದು ವಾರದಲ್ಲಿ ಹಣವನ್ನು ರೈತರ ಖಾತೆಗೆ ಜಮಾ ಮಾಡಲು ಆದೇಶ ನೀಡಿತ್ತು.
ಸದರಿ ಆದೇಶವನ್ನು ಪುನರ್ ಪರಿಶೀಲನೆ ಮಾಡಲು ಕ್ಷೇಮ ಇನ್ಸೂರೆನ್ಸ್ ಕಂಪನಿಯವರು ಪುನಃ ಸಲ್ಲಿಸಿದ್ದು ಇದರ ಬಗ್ಗೆ ಕೇಂದ್ರ ಸರ್ಕಾರ ಪರಾಮರ್ಶಿಸಿ ಕ್ಷೇಮಾ ಕಂಪನಿಯವರ ಬೇಡಿಕೆಯನ್ನು ತಿರಸ್ಕರಿಸಿದೆ. ವಿಮಾ ಪರಿಹಾರ ನೀಡಲು ಇನ್ಸೂರೆನ್ಸ್ ಕಂಪನಿಯವರು ಕರಾರಿನಂತೆ ಬಾದ್ಯಸ್ಥರಿದ್ದು ಈ ಮೊದಲು ಅಂಕಿ ಅಂಶಗಳ ಬಗ್ಗೆ ಯಾವುದೇ ತಕರಾರುಸಲ್ಲಿಸದೆ ಈಗ ವಿಮಾ ಪರಿಹಾರವನ್ನು ತಿರಸ್ಕರಿಸಲು ಆಗುವುದಿಲ್ಲ. ಅಲ್ಲದೆ ಕರ್ನಾಟಕ ರಾಜ್ಯ ಸರ್ಕಾರ ಹೇಳಿರುವಂತೆ ಮುಖ್ಯ ಹವಾಮಾನ ಮಾಪನ ಕೇಂದ್ರಗಳ ವರದಿ ಅಲಭ್ಯವಿದ್ದಲ್ಲಿ ದೃಢೀಕರಣ ಹವಾಮಾನ ಮಾಪನ ಕೇಂದ್ರಗಳ ದಾಖಲೆಯನ್ನು ಆಧರಿಸಬೇಕು ಎಂದು ಟೆಂಡರ್ ನೋಟಿಫಿಕೇಶನ್ ನಲ್ಲಿ ತಿಳಿಸಿದೆ. ಮತ್ತು ಕೇಂದ್ರ ಸರ್ಕಾರ ಈ ಕುರಿತು ಈಗಾಗಲೇ ಮಾರ್ಚ್ 6ರಂದು ವಿಮಾ ಪರಿಹಾರವನ್ನು ತಕ್ಷಣ ನೀಡಲು ಇನ್ಸೂರೆನ್ಸ್ ಕಂಪನಿಯವರಿಗೆ ಆದೇಶಿಸಿದ್ದನ್ನು ಉಲ್ಲೇಕಿಸಿ ಪುನಃ ಆದೇಶವನ್ನು ಮಾರ್ಚ್ 17ರಂದು ಮಾಡಿದೆ.
ಇದರಂತೆ ಇಂದಿನಿAದ ಏಳು ದಿನದ ಒಳಗಾಗಿ ಯಾವುದೇ ವಿಳಂಬ ಮಾಡದೆ ಅತ್ಯಂತ ಪ್ರಮುಖ ವಿಷಯ ಎಂದು ಪರಿಗಣಿಸಿ ವಿಮಾ ಹಣವನ್ನು ರೈತರಿಗೆ ನೀಡತಕ್ಕದ್ದು. ಇದಕ್ಕೆ ತಪ್ಪಿದಲ್ಲಿ ವಿಮಾ ಕಂಪನಿ ಮೇಲೆ ಆಡಳಿತಾತ್ಮಕ ಕ್ರಮ ಮತ್ತು ಹಣಕಾಸು ದಂಡವನ್ನು ವಿಧಿಸಲಾಗುವುದು ಎಂದು ಕೇಂದ್ರ ಸರಕಾರವು ಇನ್ಸೂರೆನ್ಸ್ ಕಂಪನಿಯವರಿಗೆ ಆದೇಶ ಮಾಡಿದೆ. ಈ ಕುರಿತು ಕರ್ನಾಟಕ ರಾಜ್ಯ ಸರಕಾರಕ್ಕೂ ಆದೇಶವನ್ನು ನೀಡಿದೆ. ಸಂಸದ ಕಾಗೇರಿ ಅವರು ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಿ ವಿಮಾ ಪರಿಹಾರದ ವಿಳಂಬದ ಬಗ್ಗೆ ಕ್ರಮ ಕೈಗೊಳ್ಳಲು ಅಗ್ರಹಿಸಿದ್ದನ್ನು ಪರಿಗಣಿಸಿ ತಕ್ಷಣ ಕೇಂದ್ರ ಸರ್ಕಾರ ಈ ಆದೇಶ ಹೊರಡಿಸಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್