ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯಿಂದ ಮಹತ್ವದ ಹೇಳಿಕೆ : ಮೀನುಗಾರಿಕಾ ಮಂತ್ರಿಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವರೇ ಖುದ್ದಾಗಿ ಬಂದು ಅಹವಾಲು ಆಲಿಸಲು ಆಗ್ರಹ
ಮಾರ್ಚ್ 21 ರಿಂದ ಅನಿರ್ಧಿಷ್ಟಾವಧಿ ಧರಣಿ ?

ಅಂಕೋಲಾ : ತಾಲೂಕಿನ ಕೇಣಿಯಲ್ಲಿ ನಿರ್ಮಾಣ ಉದ್ದೇಶಿತ ಗ್ರೀನ್ ಫೀಲ್ಡ್ ವಾಣಿಜ್ಯ ಬಂದರು ಬೇಡವೇ ಬೇಡ ಎಂದು ನಾವು ನಾನಾ ರೀತಿಯಲ್ಲಿ ವಿನಂತಿಸಿದರೂ, ಸಾಂಕೇತಿಕವಾಗಿ ಪ್ರತಿಭಟಿಸಿದರೂ , ಸ್ಥಳೀಯ ಮೀನುಗಾರರು ಸೇರಿದಂತೆ ಕೃಷಿ , ಕೂಲಿಕಾರರ ಬವಣೆಗೆ ಯಾರೂ ಸರಿಯಾಗಿ ಉತ್ತರಿಸುತ್ತಿಲ್ಲ. ಹೀಗಾಗಿ ಬಂದರು ಯೋಜನೆ ವಿರೋಧಿಸಿ ಅಂಕೋಲಾ ತಹಶಿಲ್ದಾರರ ಕಚೇರಿ (ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದ) ಎದುರು ಮಾರ್ಚ 21 ರಂ ಶುಕ್ರವಾರದಿಂದ ಅರ್ನಿಧಿಷ್ಠವಾಧಿ ಧರಣಿ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ಬಂದರು ವಿರೋಧಿ ಹೋರಾಟ ಸಮಿತಿಯ ಪ್ರಮುಖ ಶ್ರೀಕಾಂತ ದುರ್ಗೇಕರ ಹೇಳಿದರು.
ಪಟ್ಟಣದ ಖಾಸಗಿ ಹೋಟೆಲನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಕಳೆದ ಮೂರು ತಿಂಗಳಿನಿಂದ ನಾವು ಬಂದರು ಸರ್ವೆ ಕಾರ್ಯದ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದು, ಈ ವರೆಗೂ ನಮಗೆ ಸರಕಾರದಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಈಗ ನಾವು ಅರ್ನಿಧಿಷ್ಠಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತಿದ್ದು , ನಮಗೆ ಈ ಕುರಿತು ಸಮರ್ಪಕವಾಗಿ ಉತ್ತರ ಸಿಗುವವರೆಗೂ ಹೋರಾಟ ಮುಂದೆ ಸಾಗುತ್ತದೆ. ಮೀನುಗಾರಿಕಾ ಮಂತ್ರಿಗಳೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರೇ ಖುದ್ದಾಗಿ ನಾದಿದ್ದಲ್ಲಿ ಬಂದು ಈ ಕುರಿತು ನಮಗೆ ಸಮರ್ಪಕವಾಗಿ ಉತ್ತರ ನೀಡಿದರೆ ಮಾತ್ರ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ . ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಸುಮಾರು 13 ಬಂದರು ಯೋಜನೆ ವಿರೋಧಿಸಿ ಸರ್ವರ ಸಹಕಾರದಲ್ಲಿ ಮುಂದೆ ಯಾವೆಲ್ಲ ರೀತಿ ಪ್ರತಿಭಟನೆ ಹಮ್ಮಿಕೊಳ್ಳಬೇಕು ಎಂದು ವಿಚಾರ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಭಾವಿಕೇರಿ ಉದಯ ನಾಯಕ ಮಾತನಾಡಿ ಬೃಹತ್ತ ವಾಣಿಜ್ಯ ಬಂದರು ನಿರ್ಮಾಣದಿಂದ ನೈಸರ್ಗಿಕ ಸಮುದ್ರ ಒತ್ತುವರಿ ಆಗಿ ಆಗುವ ಬಾಧಕದ ಬಗ್ಗೆ ತಿಳಿಸಿ ಪ್ರತಿಭಟನೆಯ ಅನಿವಾರ್ಯತೆ ತಿಳಿಸಿದರು. ರಾಜು ಹರಿಕಂತ್ರ ಮಾತನಾಡಿ ಈ ಯೋಜನೆಯಿಂದ ಕೇವಲ ಮೀನುಗಾರರಿಗಷ್ಟೇ ಅಲ್ಲದೇ , ತುಂಡು ಭೂಮಿ ಹೊಂದಿರುವ ಇತರೆ ರೈತರು ಕೂಲಿಕಾರ್ಮಿಕ ಸಮಾಜದವರಿಗೂ ತೊಂದರೆಯೊಡ್ಡಲಿದೆ ಹೀಗಾಗಿ ಈ ಯೋಜನೆ ವಿರುದ್ಧ ಎಲ್ಲರೂ ಕೂಡಿ ಹೋರಾಡಬೇಕಿದೆ ಎಂದರು. ಇದು ಕೇವಲ ಕೇಣಿ ಬಂದರು ವಿಚಾರವಾಗಿರದೇ ಅಂಕೋಲಾ ಉಳಿಸುವ ಹೋರಾಟ ಆಗಿದ್ದು ,ಎಲ್ಲಾ ಸಮುದಾಯದವರು ಬೆಂಬಲಿಸಿ ಸಹಕರಿಸಬೇಕು ಎಂದು ಹೂವಾ ಖಂಡೆಕರ್ ಹೇಳಿದರು.
ಪ್ರಮುಖರಾದ ಪಾಂಡು ಬಟ್ಟಾ ಗೌಡ ಬಡಗೇರಿ, ಸೂರಜ ಹರಿಕಂತ್ರ, ವೆಂಕಟೇಶ್ ದುರ್ಗೇಕರ, ರಮೇಶ ಕುರ್ಲೇ ಗಾಬತಕೇಣಿ, ಗೌರೀಶ ಖಾರ್ವಿ ಬೆಳಂಬಾರ, ಚಂದ್ರಕಾಂತ ಹರಿಕಂತ್ರ, ನಾಗರಾಜ ಬಾನಾವಾಳೀಕರ ಬೆಲೇಕೇರಿ, ನೀಲೇಶ ಹರಿಕಂತ್ರ ಮತ್ತಿತರರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ