
ಭಟ್ಕಳ: ಮನೆ ಎಲ್ಲರ ಕನಸಾಗಿದ್ದು ಗುಣಮಟ್ಟದ ಜೀವನ ನಡೆಸಲು ಮನೆಯ ಅಗತ್ಯವಿದೆ. ಬಡ ಜನರನ್ನು ಗುರುತಿಸಿ ಸುಸಜ್ಜಿತವಾಗಿ ಮನೆ ಕಟ್ಟಿಸಿ ಕೊಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ ಕಾರ್ಯ ಶ್ಲಾಘನಿಯವಾಗಿದೆ ಎಂದು ಬೀನಾ ವೈದ್ಯ ಏಜುಕೇಷನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕಿ ಡಾ. ಪುಷ್ಪಲತಾ ವೈದ್ಯ ಹೇಳಿದರು. ಭಟ್ಕಳ ತಾಲೂಕಿನ ಬೈಲೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮನೆಯ ನಾಮಫಲಕದ ಮೇಲಿನ ಪರದೆಯನ್ನು ಸರಿಸಿ ಮನೆ ಹಸ್ತಾಂತರ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸಂಸ್ಥೆ ಅನೇಕ ಯೋಜನೆಗಳ ಮೂಲಕ ಸಮಾಜಮುಖಿ ಕೆಲಸದಲ್ಲಿ ನಿರತವಾಗಿದೆ. ಮಹಿಳೆಯರ ಸಬಲಿಕರಣ ಕಾರ್ಯದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಇದರಿಂದಾಗಿ ಸಾವಿರಾರು ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ವಿರೇಂದ್ರ ಹೆಗಡೆ ದಂಪತಿಗಳು ಇಂತಹ ಸಾಮಾಜಿಕ ಕಾರ್ಯಗಳ ಮೂಲಕ ಮನೆ ಮನಸ್ಸುಗಳನ್ನು ಕಟ್ಟುವು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಪಾರಂಪಾರಿಕ ಆಯುರ್ವೆದ ನಾಟಿ ವೈದ್ಯ ದೇವೇಂದ್ರ ನಾಯ್ಕ ಮಾತನಾಡಿ ವಿರೇಂದ್ರ ಹೆಗ್ಗಡೆಯವರ ಆಶಿರ್ವಾದ ಸಿಕ್ಕಿದರೆ ಯಾವುದೇ ಸಾಧನೆಯನ್ನು ಮಾಡಬಹುದಾಗಿದೆ. ಧರ್ಮಸ್ಥಳ ಸಂಘವು ಮನೆ ನಿರ್ಮಿಸಿಕೊಟ್ಟಿದ್ದು ಮುಂದೆ ಈ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು ಉತ್ತಮ ರೀತಿಯ ಜೀವನ ನಡೆಸಿಕೊಂಡು ಹೋಗುವುದು ದಂಪತಿಗಳ ಕರ್ತವ್ಯವಾಗಿದೆ ಎಂದರು. ಸಂಘದ ಜಿಲ್ಲಾ ಜನಜಾಗೃತಿ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಸತೀಶ್ ಶೇಟ್ ಮಾತನಾಡಿದರು.
ಅಂದಹಾಗೇ ಮಾದೇವಿ ಪುಟ್ಟಪ್ಪ ಹಸ್ಲರ್ ಬಡ ದಂಪತಿಗಳು ತಮ್ಮ ಪುಟ್ಟ ಮಕ್ಕಳೊಂದಿಗೆ ತೆಂಗಿನ ಗರಿ ಛಾವಣಿಯನ್ನು ಹೊಂದಿದ ಕೆರೆಂಟ್ ಕಾಣದ ಮಣ್ಣಿನ ಮನೆಯಲ್ಲಿ ವಾಸ ಮಾಡುತ್ತಿದ್ದು ಸ್ಥಳಿಯ ಸೇವಾ ಪ್ರತಿನಿಧಿಗಳು ಇದನ್ನು ಗುರುತಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಸುಸಜ್ಜಿತ ಮನೆ ನಿರ್ಮಿಸಿ ಹಸ್ತಾಂತರ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಬೈಲೂರು ಪಂಚಾಯತ್ ಪಿಡಿಓ ನಾಗರಾಜ, ಸದಸ್ಯರಾದ ಗಣಪತಿ, ಹೇಮಾವತಿ ಮೊಗೇರ, ಒಕ್ಕೂಟದ ಅಧ್ಯಕ್ಷರಾದ ಗಂಗಾ, ಸಂಘದ ಯೋಜನಾಧಿಕಾರಿ ಲತಾ ಬಂಗೇರ, ಸಮನ್ವಯಾಧಿಕಾರಿ ವಿನೋಧ ಬಾಲಚಂದ್ರ, ಮೇಲ್ವಿಚಾರಕರಾದ ಅಶೋಕ ಮತ್ತಿತರರು ಹಾಜರಿದ್ದರು.
ವಿಸ್ಮಯ ನ್ಯೂಸ್ ಈಶ್ವರ ನಾಯ್ಕ ಭಟ್ಕಳ