Focus NewsImportant
Trending

ಇವಿಎಂ ಮಷಿನ್ ಕೈಕೊಟ್ಟು ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತ

ಅಂಕೋಲಾ: ಇವಿಎಂ ಮಷಿನ್ ಕೈಕೊಟ್ಟ ಕಾರಣ ಒಂದು ಗಂಟೆಗಳ ಕಾಲ ಮತದಾನ ಸ್ಥಗೀತಗೊಂಡ ಘಟನೆ ಅಂಕೋಲಾ ತಾಲೂಕಿನ ಖೇಣಿ ಗ್ರಾಮದಲ್ಲಿ ನಡೆದಿದೆ. ಖೇಣಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 204ರಲ್ಲಿ ಬೆಳಿಗ್ಗೆಯಿಂದಲೇ ಮತದಾನ ಆರಂಭಿಸಲಾಗಿತ್ತಾದರೂ ಬೆಳಿಗ್ಗೆ 11.50 ಸುಮಾರಿಗೆ ಮತಯಂತ್ರ ಕೈಕೊಟ್ಟ ಕಾರಣ ಒಂದು ಗಂಟೆಗಳ ಕಾಲ ಮತದಾನ ಸ್ಥಗೀತಗೊಂಡಿತ್ತು.

ಮತಗಟ್ಟೆಯಲ್ಲಿ ಸಾಕಷ್ಟು ಮತದಾರರು ಮತದಾನಕ್ಕಾಗಿ ಸಾಲುಗಟ್ಟಿದ ವೇಳೆಯೇ ಮತಯಂತ್ರ ಸ್ಥಗೀತಗೊಂಡಿತ್ತು. ಒಟ್ಟು 82 ಮಂದಿ ಮತ ಚಲಾವಣೆ ಬಳಿಕ ಮತಯಂತ್ರ ಕೈಕೊಟ್ಟಿದೆ. ತಕ್ಷಣ ಪಿಆರ್ ಓ ಗಳು ತಕ್ಷಣ ಆರ್ ಓ ಗಳ ಗಮನಕ್ಕೆ ತಂದಿದ್ದು ಒಂದು ಗಂಟೆಯಲ್ಲಿ ಮತಯಂತ್ರವನ್ನು ಬದಲಿಸಲಾಗಿದೆ. ಅಲ್ಲದೆ ವಿಳಂಭವಾದ ಕಾರಣ ಸ್ಥಳೀಯರು ಒಂದು ಗಂಟೆ ಹೆಚ್ಚುವರಿಯಾಗಿ ಮತದಾನಕ್ಕೆ ಆಗ್ರಹಿಸಿದ್ದರು.

ಆದರೆ ಅಧಿಕಾರಿಗಳು ಈ ಬಗ್ಗೆ ಜನರಿಗೆ ಮಾಹಿತಿ ನೀಡಿ ಪುನಃ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮತದಾನ ವಿಳಂಭವಾದ ಕಾರಣ ಮಧ್ಯಾಹ್ನದ ವೇಳೆಗೆ ಮತಗಟ್ಟೆಯಲ್ಲಿ ದೊಡ್ಡ ಸಾಲು ನಿರ್ಮಾಣವಾಗಿತ್ತು.

ವಿಸ್ಮಯ ನ್ಯೂಸ್, ಅಂಕೋಲಾ

Back to top button