Important
Trending

ಜಿಲ್ಲಾ ಮಟ್ಟದ ಪ್ರಥಮ ವರ್ಷದ ಹಾರ್ಡ್ ಬಾಲ್ ಕ್ರಿಕೆಟ್ ಟೂರ್ನಿ: ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘ ಅಂಕೋಲಾದಿoದ ಆಯೋಜನೆ

  • ನಾಮಧಾರಿ ಕಪ್ 2025
  • ಜಿಲ್ಲಾ ಮಟ್ಟದ ಪ್ರಥಮ ವರ್ಷದ ಹಾರ್ಡ್ ಬಾಲ್ ಕ್ರಿಕೆಟ್ ಟೂರ್ನಿ
  • ಅಂಕೋಲಾದ ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದಿoದ ಆಯೋಜನೆ
  • ಜಿಲ್ಲೆಯ 8 ಪ್ರತಿಷ್ಠಿತ ತಂಡಗಳು ಭಾಗಿ
  • 2 ದಿನಗಳ ಕಾಲ ಜೈಹಿಂದ್ ಮೈದಾನದಲ್ಲಿ ಸೆಣಸಾಟ

ಅಂಕೋಲಾ: ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘ ಅಂಕೋಲಾ ಇವರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪ್ರಥಮ ವರ್ಷದ ಹಾರ್ಡ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ನಾಮಧಾರಿ ಕಪ್ 2025 ರ ಉದ್ಘಾಟನೆ ಅದ್ದೂರಿಯಾಗಿ ಜರುಗಿತು. ಜಿಲ್ಲೆಯ ಪ್ರಮುಖ ಸಮುದಾಯಗಳಲ್ಲಿ ನಾಮಧಾರಿ ಸಮಾಜವು ಒಂದಾಗಿದ್ದು, ಬಹುಸಂಖ್ಯಾತರಾಗಿರುವ ನಾಮಧಾರಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯ ತೋರ್ಪಡಿಸುತ್ತಾ ಬಂದಿದ್ದಾರೆ. ಕ್ರೀಡೆಯ ಮೂಲಕ ಈ ಸಮಾಜದ ಸಂಘಟನೆಗೆ ಮತ್ತಷ್ಟು ಬಲ ತುಂಬುವ ಸದುದ್ದೇಶದಿಂದ ಕರ್ನಾಟಕ ಆರ್ಯ ಈಡಿಗ ಸಂಘ ಅಂಕೋಲಾ ಇವರ ಆಶ್ರಯದಲ್ಲಿ ಅಂಕೋಲಾ ಪಟ್ಟಣದ ಜೈ ಹಿಂದ್ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಥಮ ವರ್ಷದ ಟೆನಿಸ್ ಹಾರ್ಡ್ ಬಾಲ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿತ್ತು.

ನಾಮಧಾರಿ ಕಪ್ 2025: ಅದ್ದೂರಿ ಚಾಲನೆ

ಮಾರ್ಚ್ 5ರ ಶನಿವಾರ ನಾಮಧಾರಿ ಕಪ್ 2025 ಕ್ಕೆ ಸಮಾಜದ ಹಿರಿ-ಕಿರಿಯ ಮುಖಂಡರು ಅದ್ದೂರಿ ಚಾಲನೆ ನೀಡಿದರು. ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘ ಅಂಕೋಲಾದ ಅಧ್ಯಕ್ಷರಾದ ಮಹಾಬಲೇಶ್ವರ ಪಿ ನಾಯ್ಕ , ಅತಿಥಿ ಗಣ್ಯರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಚುಟುಕಾಗಿ ಮಾತನಾಡಿದ ಅವರು , ನಮ್ಮ ಸಮಾಜ ಹಾಗೂ ಕ್ರೀಡೆಯ ಸಂಘಟನೆಗೆ ಸಹಕರಿಸುತ್ತಿರುವ ನಾಮಧಾರಿ ಸಮಾಜದ ಸರ್ವರಿಗೆ ಅಭಿನಂದನೆ ಸಲ್ಲಿಸಿದರು.

ಇತರೆ ಸಮಾಜಕ್ಕೂ ಮಾದರಿಯಾಗಲಿ

ಪುರಸಭೆ ಅಧ್ಯಕ್ಷ ಮತ್ತು ದೊಡ್ಡ ಟ್ರೋಫಿ ಪ್ರಾಯೋಜಿಸಿದ್ದ ಸೂರಜ ನಾಯ್ಕ ,, ಸಮಾಜ ಬಾಂಧವರೊoದಿಗೆ ರಿಬ್ಸನ್ ಕತ್ತರಿಸುವ ಮೂಲಕ ಕ್ರೀಡಾಂಗಣ ಉದ್ಘಾಟಿಸಿದರು. ಕೆಲ ಪ್ರಮುಖರು ಸಾಂಕೇತಿಕವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದರು. ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸೂರಜ ನಾಯ್ಕ , ಇತರೆ ಸಮಾಜಕ್ಕೂ ಮಾದರಿ ಆಗಿರುವ ಈ ನಮ್ಮ ಸಮಾಜ, ಹಾಗೂ ಕ್ರೀಡಾ ಸಂಘಟನೆ ಇನ್ನಷ್ಟು ಬೆಳೆಯಲಿ , ಹಾಗೂ ಪಂದ್ಯಾವಳಿ ಯಶಸ್ವಿಯಾಗಲಿ ಎಂದು ಶುಭ ಕೋರಿದರು.

ಸುಂದರ ಪಾರಿತೋಷಕಗಳ ಅನಾವರಣ ಮಾಡಲಾಯಿತು. ದಂತ ವೈದ್ಯ ಕರುನಾಕರ ಎಂ ನಾಯ್ಕ , ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಪುರುಷೋತ್ತಮ ಡಿ ನಾಯ್ಕ, ನ್ಯಾಯವಾದಿ ಭೈರವ ಡಿ ನಾಯ್ಕ , ಅಂಕೋಲಾ ಅರ್ಬನ ಬ್ಯಾಂಕ್ ನಿರ್ದೇಶಕ ಗೋಪಾಲಕೃಷ್ಣ ಯಾನೆ ನಾಗೇಂದ್ರ ನಾಯ್ಕ , ಪುರಸಭೆ ಸದಸ್ಯೆ ಜಯಾ ಬಾಲಕೃಷ್ಣ ನಾಯ್ಕ ಇವರು ಅತಿಥಿಗಳಾಗಿ ಮಾತನಾಡಿ , ಸಮಾಜ ಹಾಗೂ ಸಂಘಟನೆ ಬಗ್ಗೆ ಹೆಮ್ಮೆ ಸೂಚಿಸಿ , ಭವಿಷ್ಯದಲ್ಲಿ ಈ ಪಂದ್ಯಾವಳಿ ದೊಡ್ಡ ಮಟ್ಟದಲ್ಲಿ ನಡೆಯುವಂತಾಗಲಿ ಎಂದರು.

ಯಾವ ತಂಡಕ್ಕೆ ಒಲಿಯಲಿದೆ ಕಪ್?

ಪುರಸಭೆ ಸದಸ್ಯರಾದ ಜಯಪ್ರಕಾಶ ನಾಯ್ಕ , ಶ್ರೀಧರ ನಾಯ್ಕ , ತಾರಾ ನಾಯ್ಕ , ಅಂಕೋಲಾ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಉಮೇಶ ನಾಯ್ಕ, ಸಂಘಟಕ ಪ್ರಮುಖ ಹಾಗೂ ಕರ್ನಾಟಕ ಆರ್ಯ ಈಡಿಗ ನಾವುಧಾರಿ ಸಂಘ ಅಂಕೋಲಾದ ಪ್ರಧಾನ ಕಾರ್ಯದರ್ಶಿ ಉಪೇಂದ್ರ ನಾಯ್ಕ ಹನುಮಟ್ಟಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಕೃಷ್ಣ ನಾಯ್ಕ ಬಬ್ರುವಾಡಾ ನಿರೂಪಿಸಿದರು. ಶಾಸಕ ಸತೀಶ ಸೈಲ್ ನಾಮಧಾರಿ ಕಪ್ 2025 ಕ್ಕೆ ಶುಭ ಹಾರೈಸಿದ್ದು , ಮಂಜುನಾಥ ವಿ ನಾಯ್ಕ , ಸತೀಶ ನಾಯ್ಕ , ಅಕ್ಷಯ ನಾಯ್ಕ ಬಬ್ರುವಾಡ, ಸುರೇಶ ನಾಯ್ಕ ಅಸ್ಲಗದ್ದೆ ಹಾಗೂ ಸಂಘಟನೆಯ ಪಧಾಧಿಕಾರಿಗಳು ಮತ್ತು ಸರ್ವ ಸದಸ್ಯರು, ಸಮಾಜ ಬಾಂಧವರು ಪಂದ್ಯಾವಳಿ ಆಯೋಜನೆಗೆ ವಿಶೇಷ ಸಹಕಾರ ನೀಡುತ್ತಿದ್ದು ಜಿಲ್ಲೆಯ 8 ಪ್ರತಿಷ್ಠಿತ ತಂಡಗಳು , ನಾಮಧಾರಿ ಕಪ್ 2025 ನ್ನು ಮುಡಿಗೇರಿಸಿಕೊಳ್ಳಲು 2 ದಿನಗಳ ಕಾಲ ಜೈಹಿಂದ್ ಮೈದಾನದಲ್ಲಿ ಸೆಣಸಲಿವೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button