
ಕುಮಟಾ: ತಾಲೂಕಿನ ಹೆದ್ದಾರಿ 66 ರ ಬಳಿ ಇರುವ ಮಣಕಿ ಮೈದಾನದ ಬಳಿ ರಸ್ತೆಯಲ್ಲಿ ಸಾಗುತ್ತಿದ್ದ ಜನರ ಮೇಲೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದ ಘಟನೆ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ನಡೆದಿದೆ. ಹೆಜ್ಜೇನು ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡವರನ್ನು ಕುಮಟಾ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕುಮಟಾ ತಾಲೂಕಿನ ಹೆದ್ದಾರಿ 66 ರ ಬಳಿ ಇರುವ ಸೇಂಟ್ ಥೋಮಸ್ ಮಾರ್ಥೋಮಾ ಚರ್ಚ ಬಳಿ ಇರುವ ಮರವೊಂದರಲ್ಲಿ ಹೆಜ್ಜೆನು ಗೂಡು ಕಟ್ಟಿತ್ತು ಎನ್ನಲಾಗಿದೆ.
ಈ ಹೆಜ್ಜೇನು ಗೂಡಿಗೆ ಹದ್ದು ಬಂದು ಕುಕ್ಕಿದ್ದರ ಪರಿಣಾಮ ಈ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಾರ್ವಜನಿಕರ ಮೇಲೆ ಹೆಜ್ಜೇನು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿವೆ. ಗಾಯಗೊಂಡವರನ್ನು ಕೂಡಲೇ ಕುಮಟಾ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ದಾಳಿಯಲ್ಲಿ 6 ಕ್ಕೂ ಅಧಿಕ ಜನರಿಗೆ ಗಾಯಗಳಾಗಿದ್ದು ಗಾಯಗೊಂಡವರು ಕುಮಟಾ ಅಳ್ವೇಕೋಡಿ ನಿವಾಸಿ ಭಾಸ್ಕರ್ ನಾಯ್ಕ, ರಾಘವೇಂದ್ರ ಸಾಲ್ಕೋಡ್, ಶ್ವೇತಾ ನಾಯ್ಕ, ಪಾಂಡುರoಗ ನಾಯ್ಕ ಎಂದು ತಿಳಿದು ಬಂದಿದೆ. ಈ ಸಂದರ್ಬದಲ್ಲಿ ಚಿಕ್ಕ ಬಾಲಕಿಯೋರ್ವಳ ಮೇಲೂ ಸಹ ಈ ಜೇನು ದಾಳಿ ಮಾಡಿದ್ದು, ಬಾಲಕಿಯನ್ನು ರಕ್ಷಿಸಲು ತೆರಳಿದವನ್ನು ಗಾಯಗೊಳಿಸಿದೆ. ಕೊನೆಗೂ ಬಾಲಕಿಯನ್ನು ಜೇನು ಹುಳುಗಳಿಂದ ರಕ್ಷಣೆ ಮಾಡಲಾಗಿದೆ.
ವಿಸ್ಮಯ ನ್ಯೂಸ್ ದೀಪೇಶ ನಾಯ್ಕ ಕುಮಟಾ