
- ಕಳೆದ 58 ವರ್ಷಗಳಿಂದ ಉತ್ತಮ ಫಲಿತಾಂಶ
- ಉತ್ತರಕನ್ನಡ ಜಿಲ್ಲೆಯ ಹೆಮ್ಮೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ
- ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯ್ತಿ
ಅಂಕೋಲಾ: ಜನತೆಗೆ ಉತ್ತಮ ಗುಣಮಟ್ಟದ ಕಾಲೇಜು ಶಿಕ್ಷಣ ನೀಡುವ ಉದ್ದೇಶದಿಂದ 1966 ರಲ್ಲಿ ಕೆನರಾ ವೆಲ್ಫೇರ್ ಟ್ರಸ್ಟ್ ಅಂಕೋಲಾದಲ್ಲಿ ಸ್ಥಾಪಿಸಿದ್ದ ಗೋಖಲೆ ಸೆಂಟೆನರಿ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ದಾಖಲಾತಿಯನ್ನು ಪ್ರಾರಂಭಿಸಲಾಗಿದೆ. ಶಿಕ್ಷಣ ತಜ್ಞ, ಜನಸೇವಕ,ಚುಟಕುಬ್ರಹ್ಮ, ಅಭಿವೃದ್ಧಿಯ ಹರಿಕಾರ ಡಾ.ದಿನಕರ ದೇಸಾಯಿ ಅವರಿಂದ ಸ್ಥಾಪಿಸಲ್ಪಟ್ಟ ಪದವಿ ಪೂರ್ವ ಕಾಲೇಜು ಕಳೆದ 58 ವರ್ಷಗಳಿಂದ ಉತ್ತಮ ಫಲಿತಾಂಶ ನೀಡತ್ತಿರುವ ಉತ್ತರಕನ್ನಡ ಜಿಲ್ಲೆಯ ಹೆಮ್ಮೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ.

ಗೋಖಲೆ ಸೆಂಟೇನರಿ ಪದವಿ ಪೂರ್ವ ಕಾಲೇಜು ಅಂಕೋಲಾ, ವಿಜ್ಞಾನ ವಿಭಾಗದಲ್ಲಿ PCMB ಮತ್ತು PCMCs ವಾಣಿಜ್ಯ ವಿಭಾಗದಲ್ಲಿ EABH ಮತ್ತು EABCs ವಿಷಯಗಳ ಸಂಯೋಜನೆ ಲಭ್ಯವಿದ್ದು ನುರಿತ ಅನುಭವಿ ಉಪನ್ಯಾಸಕ ವೃಂದ ,smart class ಹೊಂದಿರುವ ಬೋಧನಾ ತರಗತಿಗಳು,ಸುಸಜ್ಜಿತ ಪ್ರಯೋಗಾಲಯಗಳು,ಗ್ರಂಥಾಲಯ ಮತ್ತು ಆಟದ ಮೈದಾನ ಹೊಂದಿದ್ದು ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿದೆ.ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತಿದೆ.
ರಾಜ್ಯಮಟ್ಟದಲ್ಲಿ ಸ್ಥಾನ
ಕಳೆದ ಸಾಲಿನಲ್ಲಿ ಕುಮಾರಿ ಸೌಂದರ್ಯಾ ಸಂತೋಷ್ ರಾಯ್ಕರ್ ಇವಳು ಗಾಯನ ಸ್ಪರ್ಧೆಯಲ್ಲಿ ,ಕುಮಾರಿ ದೀಪಿಕಾ ಪಟೇಲ್ ಗುಂಡು ಎಸೆತದಲ್ಲಿ ,ಕುಮಾರ ವಿನಾಯಕ ಗೌಡಾ ಉದ್ದಾಜಿಗಿತದಲ್ಲಿ ಮತ್ತು ಕು.ನೀಲೇಶ್ ಗೌಡ ಓಟದಲ್ಲಿ ಜಿಲ್ಲೆ, ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ಸ್ಥಾನ ಪಡೆದು ಕಾಲೇಜು ಮತ್ತು ತಾಲೂಕಿಗೆ ಕೀರ್ತಿ ತಂದಿರುತ್ತಾರೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯ್ತಿ ನೀಡಲಾಗುವುದು.ವಿದ್ಯಾರ್ಥಿಳ ಸರ್ವತೋಮುಖ ಬೆಳವಣಿಗೆಗೆ ಸೂಕ್ತ ಅವಕಾಶ ನೀಡಲಾಗುವುದು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಲಾಗುವುದು. ವಿಜ್ಞಾನ ವಿದ್ಯಾರ್ಥಿಗಳಿಗೆ ಶಿವಮೊಗ್ಗದ ಶ್ರೀ .ಮಧು ಶಾನಭೋಗ್ ಇವರಿಂದ ಕಡಿಮೆ ವೆಚ್ಚದಲ್ಲಿ CET/JEE/NEET COACHING ನೀಡಲಾಗುತ್ತಿದೆ.

ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ NCC ತರಬೇತಿ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನ ಪ್ರವೇಶ ಪ್ರಾರಂಭಿಲಾಗಿದ್ದು ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ಈ ಕೂಡಲೇ ಕಾಲೇಜಿಗೆ ಬಂದು ಪ್ರವೇಶ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖೆಗಳನ್ನು ಸಂಪರ್ಕಿಸಬಹುದು. 8970817357 , 9242728780 , 8088393610
ವಿಸ್ಮಯ ನ್ಯೂಸ್, ವಿಲಾಸ್ ನಾಯಕ ಅಂಕೋಲಾ