
ಅಂಕೋಲಾ: ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊoಡಿರುವ ರಾಷ್ಟ್ರೀಕೃತ ಬ್ಯಾಂಕ್ ಒಂದರ, ಎಟಿಎಂ ಮಶೀನ್ ಗೆ ಹಣ ತುಂಬಲು ಹೋಗಿದ್ದ ಬ್ಯಾಂಕ್ ಸಿಬ್ಬಂದಿಗಳೇ, ಶೆಟರ್ಸ್ ಲಾಕ್ ಆಗಿ ಹೊರ ಬರಲಾಗದೇ ಪರದಾಡಿದ ಘಟನೆ ನಡೆದಿದೆ. ಎಟಿಎಂ ಮಶೀನನಲ್ಲಿ ಬ್ಯಾಂಕಿನ ಹಣ ಜಮಾವಣೆ ಮಾಡಲು ಸಿಬ್ಬಂದಿಗಳೀರ್ವರು ಒಳಗಡೆ ಪ್ರವೇಶಿಸಿ, ಸುರಕ್ಷತೆ ದೃಷ್ಟಿಯಿಂದ ಶಟರ್ಸನ್ನು ಹಾಕಿಕೊಂಡಿದ್ದರು. ಮಶೀಷನ್ ಗೆ ಹಣ ತುಂಬಿಸಿ, ಶೆಟರ್ಸ್ ಮೇಲಕ್ಕೆತ್ತಿ ಹೊರಬರಲು ಅವರು ಪ್ರಯತ್ನಿಸಿದರಾದರೂ, ತಾಂತ್ರಿಕ ದೋಷದಿಂದ ಶೆಟರ್ಸ್ ಲಾಕ್ ಆಗಿಬಿಟ್ಟಿತ್ತು.
ನಂತರ ಸುತ್ತಮುತ್ತಲಿನ ಜನ ಸೇರಿ ಶಟರ್ಸನ್ನು ಮೇಲೆತ್ತಲು ಪ್ರಯತ್ನಿಸಿದರಾದರೂ ಅದು ಮೇಲೇತ್ತಲು ಸಾಧ್ಯವಾಗಲೇ ಇಲ್ಲ. ನಂತರ ಶೆಟರ್ಸನ ಲಾಕ್ ಸಿಸ್ಟಂಗೆ ಹೆಚ್ಚಿನ ಬಲ ಪ್ರಯೋಗಿಸಿ ಹರಸಾಹಸ ಪಟ್ಟು ಮೇಲೆತ್ತಿ, ಸಿಬ್ಬಂದಿಗಳು ಹೊರ ಬರಲು ಅನುಕೂಲ ಮಾಡಿಕೊಡಲಾಯಿತು. ದೂರದಿಂದ ಇದನ್ನು ನೋಡುತ್ತಿದ್ದ ಕೆಲವರಿಗೆ ಎಟಿಎಂ ಕೇಂದ್ರದಲ್ಲಿ ಕಳ್ಳತನ , ಅಥವಾ ಬೇರೆ ಏನೋ ಘಟನೆ ಸಂಭವಿಸಿತೇ ಎಂಬoತೆ ಮಾತನಾಡಿಕೊಂಡತಿತ್ತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ