
- ತಾಲೂಕಿನಲ್ಲಿ ಸೋಂಕಿತರ 847ಕ್ಕೆ ಏರಿಕೆ
- ಹೆರವಟ್ಟಾ, ದಿವಗಿ, ಗೋಕರ್ಣ, ಕಡೆಕೋಡಿ, ಹೆಗಡೆ, ಅಳ್ವೇಕೊಡಿ, ಹೋಲನಗದ್ದೆ, ಸಿದ್ಧನಬಾವಿ, ತಲಗೋಡ, ಮಿರ್ಜಾನ್, ವಿವೇಕನಗರ ಸೇರಿ ಹಲವೆಡೆ ಸೋಂಕು
ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 23 ಜನರಲ್ಲಿ ಕರೊನಾ ಪಾಸಿಟಿವ್ ಬಂದಿದೆ. ತಾಲೂಕಿನ ಹೆರವಟ್ಟಾದಲ್ಲಿ 3, ದಿವಗಿ 2, ಗೋಕರ್ಣ 3 ಸೇರಿದಂತೆ ಕಡೆಕೋಡಿ, ಹೆಗಡೆ, ಅಳ್ವೇಕೊಡಿ, ಹೋಲನಗದ್ದೆ, ಸಿದ್ಧನಬಾವಿ, ತಲಗೋಡ, ಮಿರ್ಜಾನ್, ವಿವೇಕನಗರ ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ.
ವಿವೇಕನಗರದ 38 ವರ್ಷದ ಪುರುಷ, ಕಾಗಲ್‌ಮಾನೀರ್‌ನ 41 ವರ್ಷದ ಪುರುಷ, ಹೆಗಡೆಕ್ರಾಸ್ ಸಮೀಪದ 76 ವರ್ಷದ ವೃದ್ಧ, ಗೋಕರ್ಣದ 39 ವರ್ಷದ ಪುರುಷ, ಗೋಕರ್ಣದ 59 ವರ್ಷದ ಪುರುಷ, ಗೋಕರ್ಣದ 82 ವರ್ಷದ ವೃದ್ಧೆ, ಮಿರ್ಜಾನ್‌ನ 62 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ದಿವಗಿಯ 40 ವರ್ಷದ ಪುರುಷ, ದಿವಗಿಯ 50 ವರ್ಷದ ಪುರುಷ, ಕುಮಟಾದ 36 ವರ್ಷದ ಪುರುಷ, 6 ವರ್ಷದ ಬಾಲಕ, 28 ವರ್ಷದ ಯುವತಿ, 22 ವರ್ಷದ ಯುವತಿಗೆ ಪಾಸಿಟವ್ ಬಂದಿದೆ.
ಹಿರೇಗುತ್ತಿಯ 20 ವರ್ಷದ ಯುವಕ, ಹೆರವಟ್ಟಾದ 32 ವರ್ಷದ ಪುರುಷ, ಹೆರವಟ್ಟಾದ 33 ವರ್ಷದ ಮಹಿಳೆ, ಹೆರವಟ್ಟಾದ 82 ವರ್ಷದ ವೃದ್ಧೆ, ಕಡೆಕೋಡಿಯ 38 ವರ್ಷದ ಮಹಿಳೆ, ಹೆಗಡೆಯ 74 ವರ್ಷದ ವೃದ್ಧ, ಅಳ್ವೇಕೊಡಿಯ 58 ವರ್ಷದ ಪುರುಷ, ಹೋಲನಗದ್ದೆಯ 52 ವರ್ಷದ ಪುರುಷ, ಸಿದ್ಧನಬಾವಿಯ 34 ವರ್ಷದ ಪುರುಷ, ತಲಗೋಡಿನ 60 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಇಂದು 23 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ 847 ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ.
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಸಹಭಾಗಿತ್ವದ ಶಕ್ತಿಯೊಂದಿಗೆ ಮುನ್ನಡೆಯಲಿದೆ ವಿವೇಕನಗರ ವಿಕಾಸ ಸಂಘ
- ಹಾಲಕ್ಕಿ ಹಬ್ಬಕ್ಕೆ ಅಣಿಯಾಗುತ್ತಿರುವ ಬೆಳಂಬಾರ : ಜನಪದ ಕಲಾ ಪ್ರಕಾರಗಳ ವಿಶೇಷ ಸ್ಪರ್ಧೆ
- ದೊಡ್ಡ ದೇವರ ಮಹಿಮೆ ಅಪಾರ: ದೋಣಿಯಲ್ಲಿ ವಿರಾಜಮಾನವಾಗಿ ಜಲ ವಿಹಾರ
- ಮಂದಾರ ಎಲೈಟ್ ಫಂಕ್ಷನ್ ಹಾಲ್: ಬರ್ಥ್ ಡೇ ಪಾರ್ಟಿ , ಸಭೆ- ಸಮಾರಂಭ ಮುಂತಾದ ಕಾರ್ಯಕ್ರಮಗಳಿಗಾಗಿ ಬುಕ್ಕಿಂಗ್ ಮಾಡಿ
- ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಐದನೇ ದಿನದ ಉಪನ್ಯಾಸ