Important
Trending

ಕೊರೊನಾ & ಸ್ವಯಂ ಉದ್ಯೋಗ ಹಾಗೂ ಕುಟುಂಬ ಯೋಜನಾ ವಿಧಾನಗಳ ಕುರಿತಾಗಿ ಜಾಗೃತಿ ಕಾರ್ಯಕ್ರಮ

ಮಾಸೂರು: ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ನಾರ್ಥ ಕೆನರಾ ಬ್ರಾಂಚ್ ಕುಮಟಾ ಹಾಗೂ ಸ್ನೇಹಕುಂಜ ಟ್ರಸ್ಟ ಹೊನ್ನಾವರ ಸಂಯುಕ್ತಾಶ್ರಯದಲ್ಲಿ ಮಹಿಳೆಯರಿಗೆ ಕೊರೊನಾ ವೈರಸ್,ಸ್ವಯಂ ಉದ್ಯೋಗ ಹಾಗೂ ಕುಟುಂಬ ಯೋಜನಾ ವಿಧಾನಗಳ ಕುರಿತಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು.


ಕೊರೊನಾ ವೈರಸ್‌ನ ಲಕ್ಷಣ ಮತ್ತು ತಡೆಗಟ್ಟುವ ಕ್ರಮ ಹಾಗೂ ಮಹಿಳೆಯರಿಗೆ ಸ್ವಯಂ ಉದ್ಯೋಗದ ಕುರಿತಾಗಿ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ನಾರ್ಥ ಕೆನರಾ ಬ್ರಾಂಚಿನ ಕಾರ್ಯಕ್ರಮಾಧಿಕಾರಿ ಮಿಸ್ ಮಂಜುಳಾ ಗೌಡ ಮಾಹಿತಿ ನೀಡಿದರು.


ಕುಟುಂಬ ಯೋಜನಾ ವಿಧಾನಗಳಾದ ಶಾಶ್ವತ & ತಾತ್ಕಾಲಿಕ ವಿಧಾನಗಳಕುರಿತಾಗಿ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಯೇಶನ್ ಆಫ್ ಇಂಡಿಯಾ ನಾರ್ಥ ಕೆನರಾ ಬ್ರ್ಯಾಂಚಿನ ಸ್ಟಾಫ್ ನರ್ಸ ಆದಶರ್ಲಿ ಪೀಟರ್ ಮಾಹಿತಿ ನೀಡಿದರು.


ಸ್ನೇಹಕುಂಜ ಟ್ರಸ್ಟ ಹೊನ್ನಾವರದ ಸೋಶಿಯಲ್ ವರ್ಕರ್ ಆದಂತಹ ಶ್ರೀಮತಿ ಚಂದ್ರಕಲಾ ರವರು ಸ್ನೇಹಕುಂಜ ಟ್ರಸ್ಟನ ಸೌಲಭ್ಯದ ಕುರಿತಾಗಿ ಮಾಹಿತಿ ನೀಡಿದರು.

ವಿಸ್ಮಯ ನ್ಯೂಸ್, ಕುಮಟಾ

Back to top button