Uttara Kannada
Trending

ಗಾಂಜಾ ಸಹಿತ ಇಬ್ಬರ ಬಂಧನ: ಮಾದಕ ಲೋಕದ ಬೆನ್ನತ್ತಿದ ಪೊಲೀಸರು

ಇಬ್ಬರು ಆರೋಪಿಗಳು ಪರಾರಿ
ಜಿಲ್ಲೆಯಲ್ಲಿ ಜೋರಾಗಿದೆ ಡ್ರಗ್ಸ್ ದಂಧೆ?
ಗೋಕರ್ಣದಲ್ಲಿ ಇಬ್ಬರು ನೀರುಪಾಲು

ದಾಂಡೇಲಿ: ಸ್ಯಾಂಡಲ್ ವುಡ್‌ನಲ್ಲಿ ಕಂಪನ ಸೃಷ್ಟಿಸಿದ್ದ ಮಾದಕಲೋಕ, ಈಗ ಜಿಲ್ಲೆಯಲ್ಲೂ ಬೇರೂರಿದಂತೆ ಕಾಣುತ್ತಿದೆ. ಶಿರಸಿ, ಭಟ್ಕಳದ ಬಳಿಕ ಇದೀಗ ದಾಂಡೇಲಿಯಲ್ಲೂ ಗಾಂಜಾ ದಂಧೆ ವ್ಯಾಪಕವಾಗಿ ನಡೆಯುತ್ತಿರುವ ಸುಳಿವು ದೊರೆತಿದೆ. ಹೌದು, ದಾಂಡೇಲಿಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ವೇಳೆ ಮತ್ತಿಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.


ನಾಲ್ವರು ಆರೋಪಿಗಳು ದಾಂಡೇಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಕೆ.ಜಿ 942 ಗ್ರಾಂ ತೂಕದ ಗಾಂಜಾ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಬದರಿನಾಥ ಹಾಗೂ ದಾಂಡೇಲಿ ಉಪವಿಭಾಗದ ಡಿವೈಎಸ್‌ಪಿ ಶಿವಾನಂದ ಚಲವಾದಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಆರೋಪಿತ ಚಾಂದ ಪಾಷಾ, ಪ್ರಣೀತ ಸಾಣಾ ಸಿಕ್ಕಿ ಬಿದ್ದಿದ್ದು, ಹಸೇನಸಾಬ, ಮುಜಫರ್ ಓಡಿ ಹೋಗಿದ್ದಾರೆ. ಇವರಿಂದ ಅಂದಾಜು 3 ಲಕ್ಷದ 85 ಸಾವಿರ ರೂ ಮೌಲ್ಯದ ಗಾಂಜಾ ಹಾಗೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗೋಕರ್ಣದಲ್ಲಿ ಇಬ್ಬರು ನೀರುಪಾಲು:

ಗೋಕರ್ಣ: ಪ್ರವಾಸಕ್ಕೆ ಬಂದ ಎಂಟು ಯುವಕರ ತಂಡ ಇಂದು ಬೆಳ್ಳಂಬೆಳಿಗ್ಗೆ ಗೋಕರ್ಣದ ಸಮುದ್ರದಲ್ಲಿ ಈಜಲು ಹೋಗಿದ್ದರು. ಈ ವೇಳೆ ಇಬ್ಬರು ನೀರುಪಾಲಾಗಿದ್ದು, ಓರ್ವ ಯುವಕ ಶವ ಪತ್ತೆಯಾಗಿದೆ. ಎಂಟು ಪ್ರವಾಸಿಗರು ಮೈಸೂರಿನಿಂದ ಗೋಕರ್ಣ ಬಂದಿದ್ದರು. ಓರ್ವನ ಶವ ದೊರೆತಿದ್ದು, ಈತನನ್ನು ಸುಹಾನ್ ಎಂದು ಗುರುತಿಸಲಾಗಿದೆ.


ಮಂಡ್ಯ ಮೂಲದ ಉಲ್ಲಾಸ ಸಮುದ್ರದ ಅಲೆಗೆ ಕೊಚ್ಚಿಕೊಂಡು ಹೋಗಿದ್ದು, ಈತನ ಶವ ಪತ್ತೆಯಾಗಿದೆ. ಈತನ ಪತ್ತೆಗಾಗಿ ಕಾರ್ಯಚರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button