- 9 ಮಂದಿ ಬಿಡುಗಡೆ, ಸಕ್ರಿಯ ಪ್ರಕರಣ 84
- ಅಂಕೋಲಾ ಪಟ್ಟಣ, ಶೇಡಗೇರಿ, ಮಠಾಕೇರಿ, ಅಂಬರಕೊಡ್ಲ, ಅವರ್ಸಾ, ಅಗಸೂರ, ರಾಮನಗುಳಿ, ವಂದಿಗೆ ಗ್ರಾ.ಪಂ ವ್ಯಾಪ್ತಿಯಲ್ಲಿಯೂ ಸೋಂಕಿನ ಪ್ರಕರಣ
ಅಂಕೋಲಾ : ಜಿಲ್ಲೆಯಲ್ಲಿ ಬುಧವಾರ ಬರೋಬ್ಬರಿ 200 ಕೋವಿಡ್ ಕೇಸ್‍ಗಳು ದಾಖಲಾಗಿದ್ದು, ಇದೇ ವೇಳೆ ತಾಲೂಕಿನಲ್ಲಿಯೂ 18 ಹೊಸ ಪ್ರಕರಣಗಳು ಪತ್ತೆಯಾಗಿವೆ ಎನ್ನಲಾಗಿದೆ.
ಅಂಕೋಲಾ ಪಟ್ಟಣ, ಶೇಡಗೇರಿ, ಮಠಾಕೇರಿ, ಅಂಬರಕೊಡ್ಲ, ಅವರ್ಸಾ, ಅಗಸೂರ, ರಾಮನಗುಳಿ, ವಂದಿಗೆ ಗ್ರಾ.ಪಂ ವ್ಯಾಪ್ತಿಯಲ್ಲಿಯೂ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಸೋಂಕು ಮುಕ್ತರಾದ 9 ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ.
ಹೋಂ ಐಸೋಲೇಶನ್‍ನಲ್ಲಿರುವ 62 ಜನರು ಸೇರಿದಂತೆ ಒಟ್ಟೂ 84 ಪ್ರಕರಣಗಳು ಸಕ್ರಿಯವಾಗಿದೆ.
81 ಗಂಟಲುದ್ರವ ಪರೀಕ್ಷೆ : ಬೆಳಸೆ(27) ಮತ್ತು ಹಾರವಾಡ(8) ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಒಟ್ಟೂ 35 ಹಾಗೂ ಇತರೆಡೆಯಿಂದ 46 ಜನರ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ